'ರೇಸ್-3' ಚಿತ್ರದ ಪ್ರಸಾರ ಹಕ್ಕು 130 ಕೋಟಿಗೆ ಸೇಲ್.! ಅಬ್ಬಬ್ಬಾ.. ಅಷ್ಟೊಂದಾ.?

By Harshitha

Recommended Video

ಇಷ್ಟು ದುಬಾರಿ ಬೆಲೆಗೆ ಸೇಲ್ ಆಗಿರೋ ಮೊದಲ ಸಿನಿಮಾ ರೇಸ್ 3

ಬಾಲಿವುಡ್ ನಲ್ಲಿ ಸಲ್ಮಾನ್ ಖಾನ್ ಸಿನಿಮಾ ಅಂದ್ರೆ ಅದಕ್ಕೆ ಇರುವ ಡಿಮ್ಯಾಂಡ್ ಅಷ್ಟಿಷ್ಟಲ್ಲ. ಸದ್ಯ ರಂಜಾನ್ ಹಬ್ಬದ ಸಡಗರದಂದು (ಜೂನ್ 15) ಬಿಡುಗಡೆ ಆಗುತ್ತಿರುವ 'ರೇಸ್-3' ಚಿತ್ರವನ್ನ ಉದಾಹರಣೆ ಆಗಿ ತೆಗೆದುಕೊಳ್ಳಿ...

ಈಗಾಗಲೇ ಎಲ್ಲೆಡೆ 'ರೇಸ್-3' ಚಿತ್ರದ ಬುಕ್ಕಿಂಗ್ ಓಪನ್ ಆಗಿದೆ. ಟಿಕೆಟ್ ಗಳಿಗಾಗಿ ಬೇಡಿಕೆ ಹೆಜ್ಜಾಗಿದೆ. ಈದ್ ಸಂದರ್ಭದಲ್ಲಿ ಬಿಡುಗಡೆ ಆಗುತ್ತಿರುವ ರೆಮೋ ಡಿಸೋಜಾ ನಿರ್ದೇಶನದ 'ರೇಸ್-3' ಗ್ಯಾರೆಂಟಿ ಹಿಂದಿನ ರೆಕಾರ್ಡ್ ಗಳನ್ನ ಉಡೀಸ್ ಮಾಡುತ್ತದೆ ಎನ್ನುವುದು ಅಭಿಮಾನಿಗಳ ಮಾತು.

ಆದ್ರೆ, ಬಿಡುಗಡೆ ಆಗುವ ಮುನ್ನವೇ ಸಲ್ಮಾನ್ ಖಾನ್, ಜಾಕ್ವೆಲಿನ್, ಬಾಬಿ ಡಿಯೋಲ್ ಅಭಿನಯದ 'ರೇಸ್-3' ಸಿನಿಮಾ ಹೊಸ ಇತಿಹಾಸ ಸೃಷ್ಟಿಸಿದೆ. ನೀವು ನಿಬ್ಬೆರಗಾಗುವ ಮೊತ್ತಕ್ಕೆ 'ರೇಸ್-3' ಚಿತ್ರದ ಸ್ಯಾಟೆಲೈಟ್ ರೈಟ್ಸ್ ಸೇಲ್ ಆಗಿದೆ. ಬರೋಬ್ಬರಿ 130 ಕೋಟಿ ರೂಪಾಯಿ ಕೊಟ್ಟು ಖಾಸಗಿ ವಾಹಿನಿ 'ರೇಸ್-3' ಚಿತ್ರದ ಪ್ರಸಾರ ಹಕ್ಕು ಖರೀದಿ ಮಾಡಿದ್ಯಂತೆ.

 Race-3 satellite rights sold for record price Rs.130 crore

ಬಾಲಿವುಡ್ ಇತಿಹಾಸದಲ್ಲಿಯೇ ಇಷ್ಟೊಂದು ದೊಡ್ಡ ಮೊತ್ತಕ್ಕೆ ಸ್ಯಾಟೆಲೈಟ್ ರೈಟ್ಸ್ ಬಿಕರಿ ಆಗಿರುವ ಮೊಟ್ಟ ಮೊದಲ ಚಿತ್ರ 'ರೇಸ್-3'.

ಬ್ಯಾಂಕಾಕ್, ಅಬು ದಾಬಿ, ಕಾಶ್ಮೀರ, ಲಡಾಕ್ ನಲ್ಲಿ ಚಿತ್ರೀಕರಣಗೊಂಡಿರುವ 'ರೇಸ್-3' ಬಹು ಕೋಟಿ ಬಜೆಟ್ ನಲ್ಲಿ ರೆಡಿ ಆಗಿದೆ. ಚಿತ್ರಕ್ಕೆ ಹಾಕಿರುವ ಬಂಡವಾಳ ಸ್ಯಾಟೆಲೆಟ್ ರೈಟ್ಸ್ ನಿಂದಲೇ ವಾಪಸ್ ಬಂದಿದ್ದು, ಇನ್ಮುಂದೆ ಎಷ್ಟು ಕಲೆಕ್ಷನ್ ಆಗುತ್ತೋ, ಅದೆಲ್ಲವೂ ನಿರ್ಮಾಪಕರಿಗೆ ಲಾಭ ಅಂತಲೇ ಲೆಕ್ಕ.

More from Filmibeat

English summary
According to the latest reports, Bollywood Actor Salman Khan starrer 'Race-3' satellite rights is sold for record price of Rs.130 crore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X