For Quick Alerts
  ALLOW NOTIFICATIONS  
  For Daily Alerts

  ಅತ್ಯಂತ ಕಳಪೆ ಸಿನಿಮಾಗಳ ಪಟ್ಟಿಗೆ ಸೇರಿದ ಸಲ್ಮಾನ್ ಖಾನ್ 'ರಾಧೆ'

  |

  ಸಲ್ಮಾನ್ ಖಾನ್ ನಟಿಸಿರುವ 'ರಾಧೆ' ಸಿನಿಮಾ ಎರಡು ದಿನಗಳ ಹಿಂದಷ್ಟೆ ಒಟಿಟಿಯಲ್ಲಿ ಹಾಗೂ ಕೆಲವೇ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಸಲ್ಮಾನ್ ಖಾನ್ ಪಕ್ಕಾ ಅಭಿಮಾನಿಗಳ ಹೊರತಾಗಿ ಇನ್ನೆಲ್ಲರು ಸಿನಿಮಾವನ್ನು ಇನ್ನಿಲ್ಲದಂತೆ ಟೀಕಿಸುತ್ತಿದ್ದಾರೆ.

  ರಾಧೆ ಸಿನಿಮಾವನ್ನು ಪ್ರಭುದೇವ ಹಾಳು ಮಾಡಿದ್ದಾರೆ ಅಂದ್ರು ನಟಿ ಶ್ರೀರೆಡ್ಡಿ | Filmibeat Kannada

  ಪ್ರಭುದೇವಾ ನಿರ್ದೇಶಿಸಿರುವ 'ರಾಧೆ' ಸಿನಿಮಾ ಅತ್ಯಂತ ಕಳಪೆ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.

  ಸಿನಿಮಾಗಳ ಗುಣಮಟ್ಟ ಆಧರಿಸಿ ರೇಟಿಂಗ್ ನೀಡುವ ಐಎಂಡಿಬಿಯು 'ರಾಧೆ' ಸಿನಿಮಾಕ್ಕೆ ನೀಡಿರುವುದು ಹತ್ತರಲ್ಲಿ 2.1 ರೇಟಿಂಗ್ ಅಷ್ಟೆ. ಸಲ್ಮಾನ್ ಖಾನ್‌ ಈವರೆಗೆ ನಟಿಸಿರುವ ಸಿನಿಮಾಗಳಲ್ಲಿ ಅತ್ಯಂತ ಕಳಪೆ ಐಎಂಡಿಬಿ ರೇಟಿಂಗ್ ಪಡೆದ ಎರಡನೇ ಸಿನಿಮಾ 'ರಾಧೆ'. ಸಲ್ಮಾನ್ ಖಾನ್ ನಟಿಸಿರುವ 'ರೇಸ್ 3' ಸಿನಿಮಾಕ್ಕೆ ಐಎಂಡಿಬಿಯು 1.9 ರೇಟಿಂಗ್ ನೀಡಿದೆ.

  ಕೆಲವು ಸಿನಿಮಾ ವಿಮರ್ಶಕರಂತೂ 'ರಾಧೆ' ಸಿನಿಮಾವನ್ನು 'ನೋಡಲು ಯೋಗ್ಯವಲ್ಲದ' ಸಿನಿಮಾ ಎಂದಿದ್ದಾರೆ. ಕಮಲ್ ಆರ್ ಖಾನ್ ಅಂತೂ 'ಸಿನಿಮಾ ನೋಡಿದ ಮೇಲೆ ಮಾತ್ರೆಗಳನ್ನು ತೆಗೆದುಕೊಂಡು ಮಲಗಿ ಬಿಟ್ಟೆ. ನನ್ನಿಂದ ಈ ಸಿನಿಮಾ ವಿಮರ್ಶೆ ಮಾಡಲು ಸಾಧ್ಯವಿಲ್ಲ' ಎಂದು ಪೋಸ್ಟ್ ಹಾಕಿದ್ದರು.

  ಪ್ರಮುಖ ಸಿನಿಮಾ ವಿಮರ್ಶಕ ತರಣ್ ಆದರ್ಶ್ ಅವರು 'ನಿರಾಶಾದಾಯಕ' ಎಂದು ಕಮೆಂಟ್ ಮಾಡಿ ಕೇವಲ 2 ಸ್ಟಾರ್ ಅನ್ನು ಸಿನಿಮಾಕ್ಕೆ ನೀಡಿದ್ದಾರೆ. 'ಸಲ್ಮಾನ್ ಖಾನ್ ಅಭಿಮಾನಿಗಳು ಬಿಟ್ಟು ಇನ್ಯಾರು ನೋಡಲಾಗದ ಸಿನಿಮಾ' ಎಂದಿದ್ದಾರೆ ತರಣ್ ಆದರ್ಶ್.

  ಇನ್ನು ತೆಲುಗಿನ ನಟಿ ಶ್ರೀರೆಡ್ಡಿ ಅಂತೂ ಅತ್ಯಂತ ಕಳಪೆ ಸಿನಿಮಾ ಎಂದಿದ್ದಾರೆ. 'ರಾಧೇ ಸಿನಿಮಾ ಒಂದು ವಾಕ್ಯದ ವಿಮರ್ಶೆ, ಇತಿಹಾಸದಲ್ಲಿ ಇದೊಂದು ಕೆಟ್ಟ ಚಿತ್ರ. ಸಲ್ಮಾನ್ ಖಾನ್ ಅದ್ಭುತ ನಟ. ಆದರೆ, ಪ್ರಭುದೇವ ಸಿನಿಮಾ ಹಾಳು ಮಾಡಿದ್ದಾರೆ. ಕೆಟ್ಟ ನಿರ್ದೇಶನ, ಕೆಟ್ಟ ಕಥೆ, ಇದು ಕೇವಲ ಕಸ'' ಎಂದು ಹೀಯಾಳಿಸಿದ್ದಾರೆ.

  ಆದರೆ ಸಲ್ಮಾನ್ ಖಾನ್ ಅಭಿಮಾನಿಗಳು ಇದನ್ನು ಒಪ್ಪಲು ತಯಾರಿಲ್ಲ. ಸಿನಿಮಾ ಅದ್ಭುತವಾಗಿದೆ. ಬಾಲಿವುಡ್‌ನ ಅತ್ಯದ್ಬುತ ಆಕ್ಷನ್ ಸಿನಿಮಾ ಇದು ಎಂದೆಲ್ಲಾ ಹೊಗಳುತ್ತಿದ್ದಾರೆ.

  English summary
  'Radhe' is second worst IMDb rated movie of Salman Khan. 'Radhe' gets only 2.1 IMDb rating.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X