For Quick Alerts
  ALLOW NOTIFICATIONS  
  For Daily Alerts

  'ರಾಧೆ' ಸಿನಿಮಾ ಪೈರಸಿ: ದೂರು ನೀಡಿದ ಸಲ್ಮಾನ್ ಖಾನ್

  |

  ಸಲ್ಮಾನ್ ಖಾನ್ ನಟಿಸಿರುವ 'ರಾಧೆ' ಸಿನಿಮಾ ಇತ್ತೀಚೆಗಷ್ಟೆ ಒಟಿಟಿಯಲ್ಲಿ ಪೇ ಪರ್ ವ್ಯೂವ್ ಮಾದರಿಯಲ್ಲಿ ಬಿಡುಗಡೆ ಆಗಿದೆ.

  ಒಟಿಟಿಯಲ್ಲಿ ಸಿನಿಮಾ ಬಿಡುಗಡೆ ಆದ ಕೂಡಲೇ ಸಿನಿಮಾದ ಎಚ್‌ಡಿ ಗುಣಮಟ್ಟದ ಪೈರಸಿ ಕಾಪಿ ಹೊರಗೆ ಬಂದಿದ್ದು ಇಂಟರ್ನೆಟ್‌ನಲ್ಲಿ, ಸಾಮಾಜಿಕ ಜಾಲತಾಣದಲ್ಲಿ 'ರಾಧೆ' ಸಿನಿಮಾದ ಈ ಕಾಪಿ ಶೇರ್ ಆಗುತ್ತಿದೆ.

  ಪೈರಸಿ ಸಿನಿಮಾ ನೋಡದಂತೆ ಎಚ್ಚರಿಕೆ ನೀಡಿದ್ದ ನಟ ಸಲ್ಮಾನ್ ಖಾನ್, 'ಪೈರಸಿ ಸಿನಿಮಾ ಹಂಚಿಕೊಳ್ಳುವವರ ಜೊತೆಗೆ ಪೈರಸಿ ನೋಡುವರ ಮೇಲೂ ದೂರು ನೀಡುತ್ತೇವೆ' ಎಂದು ಗುಡುಗಿದ್ದರು. ಇದೀಗ ದೂರು ಸಹ ನೀಡಿದ್ದಾರೆ ಸಲ್ಮಾನ್ ಮತ್ತು ತಂಡ.

  'ರಾಧೆ' ಸಿನಿಮಾದ ಪೈರೇಟೆಡ್ ಕಾಪಿ ಅಂತರ್ಜಾಲದಲ್ಲಿ ಹರಿದಾಡುತ್ತಿದ್ದು 'ರಾಧೆ' ಸಿನಿಮಾದ ನಿರ್ಮಾಣ ಸಂಸ್ಥೆಯು ದೂರು ದಾಖಲಿಸಿದೆ. ಇಬ್ಬರು ವ್ಯಕ್ತಿಗಳು ತಾವು 'ರಾಧೆ' ಸಿನಿಮಾವನ್ನು ಕಡಿಮೆ ಹಣಕ್ಕೆ ಮಾರುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿಕೊಂಡಿದ್ದು ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

  ರಾಧೆ ಸಿನಿಮಾವನ್ನು ಸಲ್ಮಾನ್ ಖಾನ್, ಸೋಹೇಲ್ ಖಾನ್, ಅರ್ಬಾಜ್ ಖಾನ್ ಅವರುಗಳು ಜೀ ಎಂಟರ್ಟೈನ್‌ಮೆಂಟ್ ಸಂಸ್ಥೆ ಜೊತೆ ಸೇರಿ ನಿರ್ಮಾಣ ಮಾಡಿದ್ದಾರೆ. 'ರಾಧೆ' ಸಿನಿಮಾದ ಪೈರಸಿ ಬಗ್ಗೆ ಜೀ ಎಂಟರ್ಟೈನ್‌ಮೆಂಟ್ ಸಂಸ್ಥೆ ಸಹ ಪ್ರತ್ಯೇಕವಾಗಿ ಸೈಬರ್ ಸೆಲ್‌ಗೆ ದೂರು ದಾಖಲು ಮಾಡಿದೆ.

  ದೂರು ದಾಖಲಾಗಿರುವ ಬಗ್ಗೆ ತಮಾಷೆ ಮಾಡಿರುವ ನೆಟ್ಟಿಗರು 'ರಾಧೆ' ಸಿನಿಮಾವನ್ನು ಉಚಿತವಾಗಿ ಕೊಟ್ಟರೂ ನೋಡುವುದಿಲ್ಲ ಎಂದಿದ್ದಾರೆ. 'ರಾಧೆ' ಸಿನಿಮಾ ಬಗ್ಗೆ ಬಹಳ ಕೆಟ್ಟ ವಿಮರ್ಶೆಗಳು ಬಂದಿರುವುದು ಈ ಕಾಲೆಳೆತಕ್ಕೆ ಕಾರಣ. ಸಲ್ಮಾನ್ ನಟನೆಯ ಈವರೆಗೆ ಕಳಪೆ ಸಿನಿಮಾಗಳಲ್ಲಿ ಎರಡನೇ ಸ್ಥಾನವನ್ನು 'ರಾಧೆ' ಪಡೆದುಕೊಂಡಿದೆ.

  ಮೇಘಾ ಶೆಟ್ಟಿ ಗೋಲ್ಡನ್‌ಸ್ಟಾರ್ ಗಣೇಶ್ ತಬ್ಬಿಕೊಂಡಿದ್ದಕ್ಕೆ ಆದ ಎಡವಟ್ಟು ಏನು? | Filmibeat Kannada

  'ರಾಧೆ' ಸಿನಿಮಾದಲ್ಲಿ ಸಲ್ಮಾನ್ ಖಾನ್ ಜೊತೆಯಾಗಿ ದಿಶಾ ಪಟಾನಿ ನಟಿಸಿದ್ದಾರೆ. ವಿಲನ್ ಆಗಿ ರಣದೀಪ್ ಹೂಡಾ ನಟಿಸಿದ್ದಾರೆ. ಪ್ರಭುದೇವಾ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಮೇ 13 ರಂದು ಬಿಡುಗಡೆ ಆಗಿತ್ತು.

  English summary
  Radhe movie pirated copy surrounding on social media. Salman Khan and team and Zee entertainment company gave complaint.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X