For Quick Alerts
  ALLOW NOTIFICATIONS  
  For Daily Alerts

  ಕೊನೆಗೂ ಸಲ್ಮಾನ್ ಖಾನ್ 'ರಾಧೇ' ಬಿಡುಗಡೆಗೆ ದಿನಾಂಕ ನಿಗದಿ

  |

  ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನಟನೆಯ 'ರಾಧೇ' ಸಿನಿಮಾ ಕೊನೆಗೂ ಪ್ರೇಕ್ಷಕರೆದುರು ಬರಲು ಸಜ್ಜಾಗಿದೆ. ಈ ಹಿಂದೆ ಸುದ್ದಿಯಾದಂತೆ ಈದ್ ಹಬ್ಬಕ್ಕೆ ಬಹುನಿರೀಕ್ಷೆಯ ರಾಧೇ ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ, ಕೋವಿಡ್ ಹಿನ್ನೆಲೆ ರಿಲೀಸ್ ವಿಚಾರದಲ್ಲಿ ಗೊಂದಲ ಉಂಟಾಗಿತ್ತು.

  ಮಹಾರಾಷ್ಟ್ರದಲ್ಲಿ ವಿಪರೀತ ಸೋಂಕು ಹರಡಿರುವ ಹಿನ್ನೆಲೆ ಚಿತ್ರಮಂದಿರಗಳು ಬಂದ್ ಆಗಿವೆ. ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣಕ್ಕೆ ಬರುವ ಸಾಧ್ಯತೆ ಕಡಿಮೆ. ಹಾಗಾಗಿ, ಒಟಿಟಿಯಲ್ಲಿ ರಾಧೇ ರಿಲೀಸ್ ಮಾಡುವ ತಯಾರಿ ಮಾಡಲಾಗುತ್ತಿದೆ ಎಂದು ವರದಿಯಾಗಿತ್ತು.

  ಶಾರುಖ್ ಖಾನ್‌ಗಾಗಿ ಕೋಟಿ ಕೋಟಿ ಸಂಭಾವನೆ ಬಿಟ್ಟುಕೊಟ್ಟ ಸಲ್ಮಾನ್ ಖಾನ್ಶಾರುಖ್ ಖಾನ್‌ಗಾಗಿ ಕೋಟಿ ಕೋಟಿ ಸಂಭಾವನೆ ಬಿಟ್ಟುಕೊಟ್ಟ ಸಲ್ಮಾನ್ ಖಾನ್

  ಇದೀಗ, ರಾಧೇ ಚಿತ್ರತಂಡದ ಕಡೆಯಿಂದ ಸರ್ಪ್ರೈಸ್ ಸುದ್ದಿ ಹೊರಬಿದ್ದಿದೆ. ಚಿತ್ರಮಂದಿರ ಹಾಗೂ ಡಿಜಿಟಲ್ ವೇದಿಕೆಯಲ್ಲಿ ಏಕಕಾಲಕ್ಕೆ ಸಿನಿಮಾ ರಿಲೀಸ್ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ ಎಂಬ ವಿಚಾರ ಹೊರಬಿದ್ದಿದೆ.

  ಈ ಕುರಿತು ಬಾಲಿವುಡ್ ಹಂಗಾಮ ವರದಿ ಮಾಡಿದ್ದು, ಮೇ 13 ರಂದು ರಾಧೇ ಸಿನಿಮಾ ಚಿತ್ರಮಂದಿರ ಹಾಗೂ ಜೀ ನೆಟ್‌ವರ್ಕ್‌ನಲ್ಲಿ ಪ್ರೀಮಿಯರ್ ಕಾಣಲಿದೆ.

  ಚಿತ್ರತಂಡವೇನೂ ಮೇ 13ಕ್ಕೆ ರಿಲೀಸ್ ಮಾಡುವುದಾಗಿ ಘೋಷಿಸಿದೆ. ಆದರೆ, ಮಹಾರಾಷ್ಟ್ರ ಹಾಗೂ ದೇಶದ ಇತರೆ ರಾಜ್ಯಗಳಲ್ಲಿ ಕೊರೊನಾ ಪರಿಸ್ಥಿತಿ ಹೀನಾಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ನೋಡಿದ್ರೆ ಚಿತ್ರಮಂದಿರಗಳು ಸದ್ಯಕ್ಕೆ ತೆರೆಯುವುದು ಅನುಮಾನ.

  ಫಸ್ಟ್ ಟೈಂ ನಾಯಕಿ ತುಟಿಗೆ ಕಿಸ್ ಮಾಡಿ ಅಭಿಮಾನಿಗಳಿಗೆ ಶಾಕ್ ಕೊಟ್ಟ ಸಲ್ಮಾನ್‌ಖಾನ್

  ಇನ್ನುಳಿದಂತೆ ಪ್ರಭುದೇವ ನಿರ್ದೇಶಿಸಿರುವ ರಾಧೇ ಸಿನಿಮಾದಲ್ಲಿ ಸಲ್ಮಾನ್ ಖಾನ್, ದಿಶಾ ಪಟಾನಿ, ರಣದೀಪ್ ಹೂಡ, ಜಾಕಿ ಶ್ರಾಫ್ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ. ಸಲ್ಮಾನ್ ಖಾನ್, ಶೋಹಿಲ್ ಖಾನ್ ಹಾಗೂ ಅತುಲ್ ಅಗ್ನಿಹೋತ್ರಿ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ.

  English summary
  Salman Khan's Radhe Movie Releasing in Theatres and Pay per View directly on Zee Network & DTH platform on May 13.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X