For Quick Alerts
  ALLOW NOTIFICATIONS  
  For Daily Alerts

  ರಾಧೆ ಟ್ರೈಲರ್: ಮೊದಲ ಬಾರಿಗೆ ನಾಯಕಿ ತುಟಿಗೆ ಚುಂಬಿಸಿದ ಸಲ್ಮಾನ್ ಖಾನ್

  |

  ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ಬಹುನಿರೀಕ್ಷೆಯ 'ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್' ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಟ್ರೆಡಿಂಗ್ ನಲ್ಲಿದೆ. ಆಕ್ಷನ್ ಪ್ಯಾಕ್ಡ್ ಟ್ರೈಲರ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

  ಫಸ್ಟ್ ಟೈಂ ನಾಯಕಿ ತುಟಿಗೆ ಕಿಸ್ ಮಾಡಿ ಅಭಿಮಾನಿಗಳಿಗೆ ಶಾಕ್ ಕೊಟ್ಟ ಸಲ್ಮಾನ್‌ಖಾನ್

  ಸಲ್ಮಾನ್ ಖಾನ್ ಫೈಟಿಂಗ್, ಡೈಲಾಗ್, ಚೇಸಿಂಗ್ ದೃಶ್ಯಗಳು ಅಭಿಮಾನಿಗಳಿಗೆ ಕಿಕ್ ಏರಿಸುತ್ತಿದೆ. ಈ ನಡುವೆ ಸಲ್ಮಾನ್ ಖಾನ್ ಕಿಸ್ಸಿಂಗ್ ದೃಶ್ಯ ಅಭಿಮಾನಿಗಳಿಗೆ ಶಾಕ್ ನೀಡಿದೆ. ಸಲ್ಮಾನ್ ಖಾನ್ ಫೈಟಿಂಗ್, ರೊಮ್ಯಾನ್ಸ್ ನೋಡಿದ್ದ ಅಭಿಮಾನಿಗಳಿಗೆ ಮೊದಲ ಬಾರಿಗೆ ಕಿಸ್ಸಿಂಗ್ ದೃಶ್ಯ ನೋಡಿ ಅಚ್ಚರಿ ಪಟ್ಟಿದ್ದಾರೆ.

  'ರಾಧೆ' ಟ್ರೇಲರ್: ಮತ್ತೆ ರೌಡಿ ಪೊಲೀಸ್ ಆದ ಸಲ್ಮಾನ್ ಖಾನ್'ರಾಧೆ' ಟ್ರೇಲರ್: ಮತ್ತೆ ರೌಡಿ ಪೊಲೀಸ್ ಆದ ಸಲ್ಮಾನ್ ಖಾನ್

  3 ದಶಕಗಳ ವೃತ್ತಿ ಜೀವನದಲ್ಲಿ ಸಲ್ಮಾನ್ ಖಾನ್ ಕಿಸ್ಸಿಂಗ್ ದೃಶ್ಯದಲ್ಲಿ ಕಾಣಿಸಿಕೊಂಡಿರಲಿಲ್ಲ. 'ನೋ ಕಿಸ್ಸಿಂಗ್' ನಿಯಮ ಅನುಸರಿಸಿಕೊಂಡು ಬಂದಿದ್ದ ಸಲ್ಮಾನ್ ಖಾನ್ ಮೊದಲ ಬಾರಿಗೆ ನಾಯಕಿಯ ತುಟಿಗೆ ಚುಂಬಿಸುವ ಮೂಲಕ ನಿಯಮ ಬ್ರೇಕ್ ಮಾಡಿದ್ದಾರೆ. ರಾಧೆಯಲ್ಲಿ ನಾಯಕಿ ದಿಶಾ ಪಟಾನಿ ತುಟಿಗೆ ಮುತ್ತಿಟ್ಟಿದ್ದಾರೆ. ಈ ದೃಶ್ಯ ನೋಡಿ ಇದು ನಿಜಕ್ಕೂ ಸಲ್ಮಾನ್ ಖಾನ್ ಹೌದಾ? ಎಂದು ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

  ಆಕ್ಷನ್ ಪ್ಯಾಕ್ಡ್ ಟ್ರೈಲರ್‌ನಲ್ಲಿ ಸಲ್ಮಾನ್ ಖಾನ್, ದಿಶಾ ಲಿಪ್ ಲಾಕ್ ದೃಶ್ಯ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಈ ಬಗ್ಗೆ ಅಭಿಮಾನಿಗಳು ತರವೇವಾರಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಅನೇಕರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕೆಲವರು ಕೊನೆಗೂ ತೆರೆಮೇಲೆ ಸಲ್ಮಾನ್ ಖಾನ್ ಕಿಸ್ಸಿಂಗ್ ದೃಶ್ಯ ನೋಡುವ ಅವಕಾಶ ಸಿಕ್ಕಿತು ಎಂದು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಸಲ್ಮಾನ್ ಖಾನ್ ಮತ್ತು ದಿಶಾ ಕಿಸ್ಸಿಂಗ್ ದೃಶ್ಯವನ್ನು ಸ್ಕ್ರೀನ್ ಶಾಟ್ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ದಾರೆ.

  ಪ್ರಭುದೇವ ಸಾರಥ್ಯದಲ್ಲಿ ಮೂಡಿಬಂದಿರುವ ರಾಧೆ ಸಿನಿಮಾ ಒಟಿಟಿಯಲ್ಲಿ ತೆರೆಗೆ ಬರುತ್ತಿದೆ. ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲು ಪ್ಲಾನ್ ಮಾಡಿದ್ದ ಸಿನಿಮಾತಂಡಕ್ಕೆ ಕೊರೊನಾ ಶಾಕ್ ನೀಡಿದೆ. ಹೆಚ್ಚುತ್ತಿರುವ ಕೊರೊನಾದಿಂದ ರಾಧೆ ಸಿನಿಮಾವನ್ನು ಆನ್ ಲೈನ್ ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ರಾಧೆ ಸಿನಿಮಾ ಮೇ 13ರಂದು ಬಿಡುಗಡೆಯಾಗುತ್ತಿದೆ.

  English summary
  Radhe; your Most wanted Bhai trailer: Salman Khan first onscreen kiss with Disha Patani goes viral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X