»   » 'ನನ್ನ ದೃಷ್ಟಿಯಲ್ಲಿ ಹಸಿವಿನಂತೆ ರತಿಕ್ರೀಡೆಯೂ ಅಷ್ಟೇ'

'ನನ್ನ ದೃಷ್ಟಿಯಲ್ಲಿ ಹಸಿವಿನಂತೆ ರತಿಕ್ರೀಡೆಯೂ ಅಷ್ಟೇ'

Posted By: ಉದಯರವಿ
Subscribe to Filmibeat Kannada

ನಾನಾ ಕಾರಣಗಳಿಂದಾಗಿ ಇತ್ತೀಚೆಗೆ ಭಾರಿ ಸುದ್ದಿಯಲ್ಲಿರುವ ತಾರೆ ರಾಧಿಕಾ ಆಪ್ಟೆ. ರಾಮ್ ಗೋಪಾಲ್ ವರ್ಮಾ ಅವರ 'ರಕ್ತಚರಿತ್ರ'ದಲ್ಲಿ ಅಭಿನಯಿಸಿದ್ದ ಈ ಬೆಡಗಿ ಈಗ ಬೋಲ್ಡ್ ಹೇಳಿಕೆಗಳ ಮೂಲಕ ಎಲ್ಲರ ಗಮನಸೆಳೆಯುತ್ತಿದ್ದಾರೆ.

ಸೆಕ್ಸ್ ಬಗ್ಗೆ ಅವರು ಮಾತನಾಡುತ್ತಾ, "ಹಸಿವಾದರೆ ಊಟ ಮಾಡಿದಂತೆ, ಕಾಮಕ್ರೀಡೆ ಸಹ ಅಷ್ಟೇ ಅಗತ್ಯ. ಇದು ಆರೋಗ್ಯಕ್ಕೂ ಎಷ್ಟೋ ಅವಶ್ಯಕ" ಎಂದಿದ್ದಾರೆ. ರಾಧಿಕಾ ಆಪ್ಟೆ ಅವರ ನಗ್ನ ಚಿತ್ರಗಳು ಅಂತರ್ಜಾಲದಲ್ಲಿ ಭಾರಿ ಅಲ್ಲೋಲಕಲ್ಲೋಲ ಸೃಷ್ಟಿಸಿದ್ದವು. ಆದರೆ ಅವೆಲ್ಲಾ ಅಸಲಿಯಲ್ಲ ನಕಲಿ ಎಂಬುದು ಬಳಿಕ ಗೊತ್ತಾಗಿತ್ತು. [ಸಮುದ್ರತೀರದ ಸೆಕ್ಸ್ ಬಗ್ಗೆ ತಹತಹಿಸಿದ ಇಲಿಯಾನಾ]

ವರುಣ್ ಧವನ್ ಅವರ ಲೇಟೆಸ್ಟ್ ಹಿಟ್ ಚಿತ್ರ 'ಬದ್ಲಾಪುರ್'ನಲ್ಲಿ ತನ್ನ ಅಂದಚೆಂದಗಳನ್ನು ತೆರೆದಿಟ್ಟ ಈ ಮರಾಠಿ ಚೆಲುವೆ ಇತ್ತೀಚೆಗಿನ 'ಹಂಟರ್' ಚಿತ್ರದಲ್ಲಿ ಕಾಮಕನ್ಯೆಯಾಗಿ ಕಾಣಿಸಿಕೊಂಡಿದ್ದಾರೆ. ಇದರ ಪರಿಣಾಮವೋ ಏನೋ ನಾಲಿಗೆಗೆ ಫಿಲ್ಟರ್ ಇಲ್ಲದಂತೆ ರಾಧಿಕಾ ಮಾತನಾಡುತ್ತಿದ್ದಾರೆ.

Radhika Apte appetite love making as normal as food

ಈ ರೀತಿಯ ಚಿತ್ರಗಳ ಕಾರಣಕ್ಕೋ ಏನೋ ಅವರನ್ನು ಹುಡುಕಿಕೊಂಡು ಬರುತ್ತಿರುವ ಬಹುತೇಕ ಪಾತ್ರಗಳು 'ರತಿ' ಇಮೇಜ್ ನವೇ ಆಗಿವೆ. ಬದ್ಲಾಪುರ್ ಚಿತ್ರದ ರೀತಿಯ ಪಾತ್ರಗಳೇ ಅವರನ್ನು ಹುಡುಕಿಕೊಂಡು ಬರುತ್ತಿರುವ ಬಗ್ಗೆ ರಾಧಿಕಾಗೆ ಸ್ವಲ್ಪ ಬೇಸವೂ ಇದೆಯಂತೆ. [ಸನ್ನಿ ಲಿಯೋನ್ 'ಸತ್ಯಂ ಶಿವಂ ಸುಂದರಂ' ಭಂಗಿಗಳು]

ಇನ್ನು ಹಂಟರ್ ಚಿತ್ರದ ಪ್ರೊಮೋ ಬಿಡುಗಡೆಯಾದ ಮೇಲಂತೂ ತಮ್ಮ ಪರಿಸ್ಥಿತಿ ಶೋಚನೀಯವಾಗಿದೆ ಎನ್ನುವ ಅವರು, ಅವರನ್ನು ಸಂಪರ್ಕಿಸುತ್ತಿರುವ ನಿರ್ಮಾಪಕ, ನಿರ್ದೇಶಕರು ಸಾಫ್ಟ್ ಪೋರ್ನ್ ಪಾತ್ರಗಳನ್ನು ಮಾಡುವಂತೆ ಕೇಳುತ್ತಿದ್ದಾರಂತೆ. ಈ ವಿಷಯವನ್ನು ಸ್ವತಃ ರಾಧಿಕಾ ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದರು. [ಜುಳುಜುಳು ಹರಿದಾಡಿದ ಹಂಸಿಕಾ ಜಳಕದ ವಿಡಿಯೋ!]

ಇನ್ನೊಂದು ವಿಶೇಷ ಎಂದರೆ ಹಾಲಿವುಡ್ ಚಿತ್ರವೊಂದರಲ್ಲೂ ರಾಧಿಕಾ ಅಭಿನಯಿಸುತ್ತಿದ್ದು, ಆ ಚಿತ್ರದಲ್ಲಿ ನಗ್ನವಾಗಿ ಕಾಣಿಸಲಿದ್ದಾರಂತೆ. ಆ ಸನ್ನಿವೇಶ ಕಥೆಗೆ ಪೂರಕವಾಗಿದ್ದ ಕಾರಣ ಹಾಗೆ ಮಾಡಿದ್ದೇನೆ ಎನ್ನುತ್ತಾರೆ ಅವರು. ಬಹುಶಃ ಈ ಸನ್ನಿವೇಶಗಳನ್ನು ನೋಡುವ 'ಭಾಗ್ಯ' ಭಾರತೀಯ ಪ್ರೇಕ್ಷಕರಿಗಿರಲ್ಲ ಎನ್ನುತ್ತವೆ ಮೂಲಗಳು.

English summary
"I think in our country in general, to have an appetite for sex is considered a big thing. But having an appetite for love making and food is equally normal and healthy," Radhika Apte. Radhika said that society looked at a "bigger sex appetite" as a "bad thing".

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X