ವಿಕ್ರಂವೇದ ಹಿಂದಿಯಲ್ಲಿ ಶ್ರದ್ಧಾ ಶ್ರೀನಾಥ್ ಪಾತ್ರಕ್ಕೆ ಸ್ಟಾರ್ ನಟಿ ಆಯ್ಕೆ?
ಬಾಲಿವುಡ್ ನಟ ಹೃತಿಕ್ ರೋಷನ್ ಮತ್ತು ಸೈಫ್ ಅಲಿ ಖಾನ್ ಕಾಂಬಿನೇಷನ್‌ನಲ್ಲಿ 'ವಿಕ್ರಂ ವೇದ' ಹಿಂದಿಗೆ ರಿಮೇಕ್ ಅಗಲಿದೆ. ಈ ಮೆಗಾ ಚಿತ್ರದ ಬಗ್ಗೆ ಬಿಟೌನ್ ಪ್ರೇಕ್ಷಕರು ಬಹಳ ಕಾತುರರಾಗಿದ್ದಾರೆ. ಸಿನಿಮಾ ಅಧಿಕೃತವಾಗಿ ಸೆಟ್ಟೇರುವುದಕ್ಕೆ ಮುಂಚೆಯೇ ರಿಲೀಸ್ ದಿನಾಂಕ ಪ್ರಕಟವಾಗಿದ್ದು, 2022ಕ್ಕೆ ತೆರೆಗೆ ಬರಲಿದೆ.
ಇದೀಗ, ಹಿಂದಿ ವಿಕ್ರಂ ವೇದ ಸಿನಿಮಾಗಾಗಿ ಸ್ಟಾರ್ ನಟಿ ರಾಧಿಕಾ ಆಪ್ಟೆ ಅವರನ್ನು ಸಂಪರ್ಕಿಸಲಾಗಿದೆ ಎಂಬ ವಿಚಾರ ಹೊರಬಿದ್ದಿದೆ. ತಮಿಳಿನಲ್ಲಿ ಶ್ರದ್ಧಾ ಶ್ರೀನಾಥ್ ಕಾಣಿಸಿಕೊಂಡಿದ್ದ ಪಾತ್ರಕ್ಕಾಗಿ ರಾಧಿಕಾ ಆಪ್ಟೆ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಈ ಕುರಿತು ಪಿಂಕ್‌ವಿಲ್ಲಾ ವೆಬ್‌ಸೈಟ್ ವರದಿ ಮಾಡಿದ್ದು, ''ಸೈಪ್ ಅಲಿ ಖಾನ್ ಪತ್ನಿ ಹಾಗೂ ಹೃತಿಕ್ ರೋಷನ್ ಅವರ ಪರ ವಾದ ಮಾಡಲಿರುವ ವಕೀಲೆ ಪಾತ್ರದಲ್ಲಿ ರಾಧಿಕಾ ನಟಿಸುವ ಸಾಧ್ಯತೆ ಹೆಚ್ಚಿದೆ'' ಎಂದು ಪ್ರಕಟಿಸಿದೆ.

ವಿಕ್ರಂವೇದ ಸಿನಿಮಾದ ಆ ಪಾತ್ರಕ್ಕೆ ರಾಧಿಕಾ ಆಪ್ಟೆ ಉತ್ತಮ ಆಯ್ಕೆ ಎಂಬ ಮಾತು ಕೇಳಿ ಬರ್ತಿದೆ. ಆದರೆ ಇದು ಅಧಿಕೃತವಾಗಿ ಪ್ರಕಟವಾಗಿಲ್ಲ.
ಇನ್ನುಳಿದಂತೆ ಮೂಲ ಚಿತ್ರ ನಿರ್ದೇಶಿಸಿದ್ದ ಪುಷ್ಕರ್ ಗಾಯಿತ್ರಿ ಅವರೇ ಹಿಂದಿಯಲ್ಲೂ ಆಕ್ಷನ್ ಕಟ್ ಹೇಳುತ್ತಿದ್ದು, ವಿಜಯ್ ಸೇತುಪತಿ ಮತ್ತು ಆರ ಮಾಧವನ್ ಕಾಣಿಸಿಕೊಂಡಿದ್ದ ಪಾತ್ರಗಳಲ್ಲಿ ಕ್ರಮವಾಗಿ ಹೃತಿಕ್ ರೋಷನ್ ಮತ್ತು ಸೈಫ್ ಅಲಿ ಖಾನ್ ಅಭಿನಯಿಸಲಿದ್ದಾರೆ.
ವಿಕ್ರಂ ವೇದ ಸಿನಿಮಾ 2017ರಲ್ಲಿ ಬಿಡುಗಡೆಯಾಗಿತ್ತು. ಅರ್ ಮಾಧವನ್ ಮತ್ತು ವಿಜಯ್ ಸೇತುಪತಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದರು. ಪುಷ್ಕರ್ ಗಾಯಿತ್ರಿ ಆಕ್ಷನ್ ಕಟ್ ಹೇಳಿದ್ದರು. ಹಿಂದಿಯಲ್ಲಿ ಸಿನಿಮಾ 2022 ಸೆಪ್ಟೆಂಬರ್ 30ರಂದು ರಿಲೀಸ್ ಆಗಲಿದೆ.


Click it and Unblock the Notifications











