For Quick Alerts
  ALLOW NOTIFICATIONS  
  For Daily Alerts

  4 ದಿನಗಳು ಮನೆಯಿಂದ ಹೊರಬಂದಿರ್ಲಿಲ್ಲ: ಬೆತ್ತಲೆ ವಿಡಿಯೋ ಲೀಕ್ ಬಗ್ಗೆ ರಾಧಿಕಾ ಆಪ್ಟೆ ಪ್ರತಿಕ್ರಿಯೆ

  |

  ಬಹುಭಾಷಾ ನಟಿ ರಾಧಿಕಾ ಆಪ್ಟೆ 'ವಾಹ್' ಸಿನಿಮಾ ಮೂಲಕ ಬಾಲಿವುಡ್ ಗೆ ಕಾಲಿಟ್ಟಿದ್ದರು. ಚಿಕ್ಕ ಪಾತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ಬಳಿಕ ಬಂಗಾಳಿ, ಮರಾಠಿ, ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

  ಬೆತ್ತಲೆ ವಿಡಿಯೋ ಲೀಕ್ ಆದ್ಮೇಲೆ 4 ದಿನ ಮನೆಯೊಳಗಿದ್ದ Radhika Apte | Filmibeat Kannada

  ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ರಾಧಿಕಾ ಆಪ್ಟೆ, ಪಾರ್ಚೆಡ್ ಸಿನಿಮಾ ಮೂಲಕ ದೊಡ್ಡ ವಿವಾದ ಮಾಡಿಕೊಂಡಿದ್ದರು. ಚಿತ್ರದ ಬೆತ್ತಲೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಎಬ್ಬಸಿತ್ತು. ಚಿತ್ರದಲ್ಲಿ ಸೆಕ್ಸ್ ವರ್ಕರ್ ಆಗಿ ಕಾಣಿಸಿಕೊಂಡಿದ್ದ ರಾಧಿಕಾ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ಲೀಕ್ ಆಗಿದ್ದ ಬೆತ್ತಲೆ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಮುಂದೆ ಓದಿ...

  ರಾಧಿಕಾ ಆಪ್ಟೆ ಪ್ರತಿಕ್ರಿಯೆ

  ರಾಧಿಕಾ ಆಪ್ಟೆ ಪ್ರತಿಕ್ರಿಯೆ

  ಈ ಬಗ್ಗೆ ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ಪ್ರತಿಕ್ರಿಯೆ ನೀಡಿರುವ ರಾಧಿಕಾ ಆಪ್ಟೆ, 'ನನಗೆ ನಿಜವಾಗಿಯೂ ಈ ರೀತಿಯ ಪಾತ್ರ ಮಾಡಲು ಇಷ್ಟ. ಏಕೆಂದರೆ ನೀವು ಬಾಲಿವುಡ್ ನಲ್ಲಿ ಇರುವಾಗ ನಿಮ್ಮ ದೇಹದೊಂದಿಗೆ ಹೇಗೆ ಇರಬೇಕು ನಿರಂತರವಾಗಿ ಹೇಳಲಾಗುತ್ತದೆ. ನಾನು ಅದನ್ನೂ ಯಾವಾಗಲೂ ನಿರ್ವಹಿಸುತ್ತೇನೆ' ಎಂದಿದ್ದಾರೆ.

  ಬೆತ್ತಲೆ ವಿಡಿಯೋ ಲೀಕ್ ಬಗ್ಗೆ ನಟಿ ಹೇಳಿದ್ದೇನು?

  ಬೆತ್ತಲೆ ವಿಡಿಯೋ ಲೀಕ್ ಬಗ್ಗೆ ನಟಿ ಹೇಳಿದ್ದೇನು?

  'ನನ್ನ ನಗ್ನ ವಿಡಿಯೋ ಕ್ಲಿಪ್ ಲೀಕ್ ಆದಾಗ ನಾನು ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದೆ. ಆಗ ನಾನು ಕ್ಲೀನ್ ಶೆವೆನ್ ಚಿತ್ರದಲ್ಲಿ ನಟಿಸುತ್ತಿದ್ದೆ. ಅದು ನನಗೆ ತುಂಬಾ ಕೆಟ್ಟದಾಗಿ ಪರಿಣಾಮ ಬೀರಿತು. ನಾಲ್ಕು ದಿನಗಳು ಮನೆಯಿಂದ ಹೊರಬರಲು ಸಾಧ್ಯವಾಗಿರಲಿಲ್ಲ. ನನ್ನ ಕಾರು ಚಾಲಕ, ಬಾಡಿಗಾರ್ಡ್ ಮತ್ತು ನನ್ನ ಸ್ಟೈಲಿಸ್ಟ್ ವಿಡಿಯೋಗಳನ್ನು ನೋಡಿ ನನ್ನನ್ನು ಗುರುತಿಸುತ್ತಿದ್ದರು' ಎಂದಿದ್ದಾರೆ.

  ವಿವಾದಾತ್ಮಕ ಫೋಟೋ ಬಗ್ಗೆ ಪ್ರತಿಕ್ರಿಯೆ

  ವಿವಾದಾತ್ಮಕ ಫೋಟೋ ಬಗ್ಗೆ ಪ್ರತಿಕ್ರಿಯೆ

  ಇನ್ನು ವಿವಾದಾತ್ಮಕ ಫೋಟೋ ಬಗ್ಗೆ ಮಾತನಾಡಿದ ರಾಧಿಕಾ ಅದು ಕೇವಲ ಬೇರ್ ಚರ್ಮದ ಸೆಲ್ಫಿ. ಆ ಫೋಟೋದಲ್ಲಿ ಇರುವುದು ನಾನಲ್ಲ ಎನ್ನುವುದು ಯಾರಾಗಾದರು ಗೊತ್ತಾಗುತ್ತದೆ. ಇಂಥವುಗಳನ್ನು ನಿರ್ಲಕ್ಷಿಸಿ ಎಂದು ಹೇಳಿದ್ದಾರೆ.

  ರಾಧಿಕಾ ಸಿನಿಮಾಗಳು

  ರಾಧಿಕಾ ಸಿನಿಮಾಗಳು

  ರಾಧಿಕಾ ಸದ್ಯ ವೆಬ್ ಸೀರಿಸ್ ನಲ್ಲಿ ಬ್ಯುಸಿಯಾಗಿದ್ದಾರೆ. ಓಕೆ ಕಂಪ್ಯೂಟರ್ ಸೀರಿಸ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಜಾಕಿ ಶ್ರಾಫ್ ಮತ್ತು ವಿಜಯ್ ವರ್ಮಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ಶಾಂತರಾಮ್ ವೆಬ್ ಸೀರಿಸ್ ನಲ್ಲಿ ಸದ್ಯ ಬ್ಯುಸಿಯಾಗಿದ್ದಾರೆ. ರಾತ್ ಅಕೆಲಿ ಹೈ ಚಿತ್ರದಲ್ಲಿ ರಾಧಿಕಾ ಕೊನೆಯದಾಗಿ ನಟಿಸಿದ್ದಾರೆ.

  English summary
  Bollywood Actress Radhika apte opens up about leaked nude video.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X