For Quick Alerts
  ALLOW NOTIFICATIONS  
  For Daily Alerts

  ಟ್ರೋಲ್ ಮಾಡಿದವರಿಗೆ ಮಾತಲ್ಲೇ ಪೆಟ್ಟು ಕೊಟ್ಟ ರಾಧಿಕಾ ಆಪ್ಟೆ

  By Harshitha
  |

  ಕೆಲವೇ ಕೆಲವು ದಿನಗಳ ಹಿಂದೆಯಷ್ಟೇ, ನಟಿ ರಾಧಿಕಾ ಆಪ್ಟೆ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಒಂದು ಫೋಟೋ ಶೇರ್ ಮಾಡಿದ್ದರು. ಆಗಷ್ಟೇ ಗೋವಾ ಬೀಚ್ ನಲ್ಲಿ ಸ್ವಿಮ್ಮಿಂಗ್ ಮುಗಿಸಿ ಬಂದಿದ್ದ ರಾಧಿಕಾ ಆಪ್ಟೆ, ಬಿಕಿನಿ ತೊಟ್ಟು ಗೆಳೆಯನ ಜೊತೆ ಕೂತು ಪೋಸ್ ಕೊಟ್ಟಿದ್ದ ಫೋಟೋ ಅದಾಗಿತ್ತು.

  ಬಿಕಿನಿ ತೊಟ್ಟಿದ್ದ ರಾಧಿಕಾ ಆಪ್ಟೆಯ ಫೋಟೋ ನೋಡಿ ಮಡಿವಂತರು ಕಣ್ಣು ಕೆಂಪಗೆ ಮಾಡಿಕೊಂಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಬಾಯಿಗೆ ಬಂದಂತೆ ಕೆಲವರು ಕಾಮೆಂಟ್ ಮಾಡಿದ್ದರು.

  ಇನ್ನೂ ಕೆಲವರು ಒಂದು ಹೆಜ್ಜೆ ಮುಂದಕ್ಕೆ ಹೋಗಿ ಭಾರತೀಯ ನಾರಿ, ಸೀರೆ, ಸಂಸ್ಕೃತಿ ಬಗ್ಗೆ ಎಲ್ಲಾ ಮಾತನಾಡಲು ಶುರು ಮಾಡಿದರು. ರಾಧಿಕಾ ಆಪ್ಟೆ ಪರ-ವಿರೋಧ ಚರ್ಚೆ ಜೋರಾಗಿ ನಡೆಯುತ್ತಿರುವಾಗಲೇ, ಟ್ರೋಲ್ ಮಾಡಿದವರಿಗೆ ತಮ್ಮ ಮಾತಲ್ಲೇ ಪೆಟ್ಟು ಕೊಟ್ಟಿದ್ದಾರೆ ನಟಿ ರಾಧಿಕಾ ಆಪ್ಟೆ.

  'ಕ್ಯಾಸ್ಟಿಂಗ್ ಕೌಚ್' ಭೂತ ರಾಧಿಕಾ ಆಪ್ಟೆ ಅವರನ್ನೂ ಬಿಟ್ಟಿಲ್ಲಾ'ಕ್ಯಾಸ್ಟಿಂಗ್ ಕೌಚ್' ಭೂತ ರಾಧಿಕಾ ಆಪ್ಟೆ ಅವರನ್ನೂ ಬಿಟ್ಟಿಲ್ಲಾ

  ''ಯಾರೋ ಒಬ್ಬರು ನನಗೆ ಹೇಳುವವರೆಗೂ, ನಾನು ಟ್ರೋಲ್ ಆಗುತ್ತಿದ್ದೇನೆ ಎಂಬುದು ನನಗೆ ಗೊತ್ತಿರಲೇ ಇಲ್ಲ. ಬೀಚ್ ನಲ್ಲಿ ಇರುವಾಗ ನಾನು ಸೀರೆಯುಡಬೇಕಿತ್ತಾ.? ಯಾರು ಟ್ರೋಲ್ ಮಾಡ್ತಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ. ಹೀಗಾಗಿ ನಾನು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ'' ಎಂದು ಹೇಳಿದ್ದಾರೆ ನಟಿ ರಾಧಿಕಾ ಆಪ್ಟೆ.

  ಚಿತ್ರರಂಗದ ಕರಾಳ ಮುಖ ಬಿಚ್ಚಿಟ್ಟ ರಾಧಿಕಾ ಆಪ್ಟೆ.!ಚಿತ್ರರಂಗದ ಕರಾಳ ಮುಖ ಬಿಚ್ಚಿಟ್ಟ ರಾಧಿಕಾ ಆಪ್ಟೆ.!

  ಸದ್ಯ 'ಪ್ಯಾಡ್ ಮ್ಯಾನ್' ಸಕ್ಸಸ್ ಖುಷಿಯಲ್ಲಿ ಇರುವ ರಾಧಿಕಾ ಆಪ್ಟೆ ಕೈಯಲ್ಲಿ 'ಬಾಝಾರ್', 'ಭವೇಶ್ ಜೋಷಿ' ಚಿತ್ರಗಳಿವೆ.

  English summary
  Here is what Bollywood Actress Radhika Apte replied to haters who trolled her for Bikini Picture.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X