ದಪ್ಪ ಸ್ತನ ಇದ್ದವರಿಗಷ್ಟೆ ಬೆಲೆ: ಬಾಲಿವುಡ್‌ನ ಕರಾಳ ಮುಖ ಬಿಚ್ಚಿಟ್ಟ ನಟಿ ರಾಧಿಕಾ

ಮೀ ಟೂ ಅಭಿಯಾನ ಬಂದು ಬಾಲಿವುಡ್‌ನ ಕರಾಳ ಮುಖವನ್ನು ಈಗಾಗಲೇ ಒಮ್ಮೆ ಬಯಲು ಮಾಡಿದ್ದಾಗಿದೆ. ಆದರೂ ಹಲವು ಹುಳುಕುಗಳು ಇನ್ನೂ ಬೆಳಕಿಗೆ ಬರಬೇಕಿದೆ.

ಬಾಲಿವುಡ್‌ ಬೋಲ್ಡ್‌ ಮತ್ತು ಧೈರ್ಯಶಾಲಿ ನಟಿಯರಲ್ಲಿ ಒಬ್ಬರು ರಾಧಿಕಾ ಆಪ್ಟೆ. ನೆಟ್‌ಫ್ಲಿಕ್ಸ್‌ ಸೇರಿದಂತೆ ಹಲವು ಒಟಿಟಿಗಳಲ್ಲಿ ಹಲವು ಬೋಲ್ಡ್ ಮತ್ತು ಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಅಭಿನಯ ಪ್ರತಿಭೆಯನ್ನು ರಾಧಿಕಾ ಈಗಾಗಲೇ ನಿರೂಪಿಸಿದ್ದಾರೆ. ಆದರೂ ಸಹ ತಮ್ಮ ದೇಹದ ಕಾರಣಕ್ಕೆ ಇತ್ತೀಚೆಗೆ ಸಿನಿಮಾದಿಂದ ರಿಜೆಕ್ಟ್ ಆದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಮಾಧ್ಯಮದೊಟ್ಟಿಗೆ ಮಾತನಾಡಿರುವ ರಾಧಿಕಾ ಆಪ್ಟೆ, ''ನನ್ನ ದೇಹಾಕಾರದ ಕಾರಣಕ್ಕೆ ಇತ್ತೀಚೆಗಷ್ಟೆ ಸಿನಿಮಾ ಅವಕಾಶದಿಂದ ನಾನು ವಂಚಿತಳಾದೆ. ಇನ್ನೊಬ್ಬ ನಟಿಯ ಸ್ತನ ದಪ್ಪಗಿದೆ, ತುಟಿಯೂ ದಪ್ಪಗಿದೆ, ಆಕೆಯನ್ನು ಹಾಕಿಕೊಂಡರೆ ಸಿನಿಮಾ ಚೆನ್ನಾಗಿ ಮಾರಾಟವಾಗುತ್ತದೆ' ಎಂದು ಹೇಳಿ ನನಗೆ ಅವಕಾಶ ನಿರಾಕರಿಸಲಾಯ್ತು'' ಎಂದಿದ್ದಾರೆ ರಾಧಿಕಾ ಆಪ್ಟೆ.

Radhika Apte Reveled She Has Been Rejected Of Her Body Shape

ಅಷ್ಟೇ ಅಲ್ಲದೆ, ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗುವಂತೆ ಸಹ ಕೆಲವರು ಸಲಹೆ ನೀಡಿದ್ದರ ಬಗ್ಗೆಯೂ ಮಾತನಾಡಿರುವ ರಾಧಿಕಾ, ''ಮೂಗು ಶಸ್ತ್ರ ಚಿಕಿತ್ಸೆ ಮಾಡಿಸಿಕೊ ಎಂದು ಕೆಲವರು ಹೇಳಿದರು, ಸ್ತನ ಶಸ್ತ್ರ ಚಿಕಿತ್ಸೆ ಮಾಡಿಸಿಕೊ ಎಂದು ಕೆಲವರು ಹೇಳಿದರು. ಕಾಲು, ಕೆನ್ನೆ, ತುಟಿ ಎಲ್ಲದರ ಬಗ್ಗೆಯೂ ದೂರು ಹೇಳಿದರು. ನಾನು ನನ್ನ ತಲೆ ಕೂದಲಿಗೆ ಬಣ್ಣ ಹಾಕಲು 30 ವರ್ಷ ತೆಗೆದುಕೊಂಡಿದ್ದೇನೆ. ಶಸ್ತ್ರಚಿಕಿತ್ಸೆ ಅಂತೂ ದೂರದ ಮಾತು'' ಎಂದಿದ್ದಾರೆ ರಾಧಿಕಾ.

ಹಲವು ಬೋಲ್ಡ್ ಆದ ಪಾತ್ರಗಳಲ್ಲಿ ರಾಧಿಕಾ ಆಪ್ಟೆ ನಟಿಸಿದ್ದಾರೆ. ಹಿಂದಿ, ತೆಲುಗು, ತಮಿಳು, ಮಲಯಾಳಂ, ಮರಾಠಿ ಇಂಗ್ಲೀಷ್ ಸಿನಿಮಾಗಳಲ್ಲಿಯೂ ರಾಧಿಕಾ ನಟಿಸಿದ್ದಾರೆ. ಕೃಷ್ಣ ವರ್ಣದ ಈ ನಟಿ, ಗ್ಲಾಮರಸ್ ಪಾತ್ರಗಳಿಗೂ ಸೈ, ಸಾಂಪ್ರದಾಯಿಕ ಪಾತ್ರಗಳಿಗೂ ಸೈ. ಹಲವು ನೆನಪುಳಿವ ಅಭಿನಯಗಳನ್ನು ರಾಧಿಕಾ ಆಪ್ಟೆ ನೀಡಿದ್ದಾರೆ.

More from Filmibeat

English summary
Radhika Apte reveled she has been rejected from movie because of her body shape. She is now acting in Forensic movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X