For Quick Alerts
  ALLOW NOTIFICATIONS  
  For Daily Alerts

  ಬಿಬಿಸಿ ವಾಹಿನಿಯಲ್ಲಿ ಬಾಲಿವುಡ್ ನ ಕರಾಳ ಮುಖ ಬಿಚ್ಚಿಡಲಿದ್ದಾರೆ ನಟಿಯರು.!

  By Harshitha
  |

  ಕಳೆದ ಒಂದು ವಾರದಿಂದ ಚಿತ್ರರಂಗದ ಅಂಗಳದಲ್ಲಿ ಹೆಚ್ಚಾಗಿ ಕೇಳಿ ಬರುತ್ತಿರುವ ಮಾತು 'ಕಾಸ್ಟಿಂಗ್ ಕೌಚ್'.

  ಸಿನಿಮಾಗಳಲ್ಲಿ ಅವಕಾಶ ಸಿಗಬೇಕು ಅಂದ್ರೆ, ನಿರ್ಮಾಪಕ/ನಿರ್ದೇಶಕನ ಜೊತೆಗೆ ನಟಿಮಣಿಯರು ಮಂಚಕ್ಕೆ ಏರಬೇಕಾದ ಅನಿವಾರ್ಯತೆಯನ್ನು ಧಿಕ್ಕರಿಸಿ ಟಾಲಿವುಡ್ ನ ಯುವ ನಟಿ ಶ್ರೀರೆಡ್ಡಿ ಬೀದಿಗಳಿದು ಬಟ್ಟೆ ಬಿಚ್ಚಿ ಪ್ರತಿಭಟನೆ ನಡೆಸಿದ್ದರು. ಇದಾದ್ಮೇಲೆ, ಕಾಸ್ಟಿಂಗ್ ಕೌಚ್ ವಿವಾದ ತೀವ್ರ ಸ್ವರೂಪ ಪಡೆದಿದೆ. ಇಡೀ ಭಾರತೀಯ ಚಿತ್ರರಂಗದಲ್ಲೇ 'ಕಾಸ್ಟಿಂಗ್ ಕೌಚ್' ಕಾಂಟ್ರವರ್ಸಿ ಸದ್ದು ಮಾಡುತ್ತಿದೆ.

  ಈ ವಿವಾದದ ಕುರಿತಾಗಿ ಬಿಬಿಸಿ ವಾಹಿನಿ ಒಂದು ಡಾಕ್ಯುಮೆಂಟರಿ ಚಿತ್ರೀಕರಿಸಿದೆ. ಬಾಲಿವುಡ್ ನಲ್ಲಿ ನಟಿಯರು ಅನುಭವಿಸಿರುವ ಲೈಂಗಿಕ ಕಿರುಕುಳದ ಬಗೆಗಿನ ಡಾಕ್ಯುಮೆಂಟರಿ ಇದೇ ವಾರಾಂತ್ಯದಲ್ಲಿ ಬಿಬಿಸಿ ವಾಹಿನಿಯಲ್ಲಿ ಪ್ರಸಾರ ಆಗಲಿದೆ.

  ಈ ಡಾಕ್ಯುಮೆಂಟರಿಯಲ್ಲಿ ನಟಿ ರಾಧಿಕಾ ಆಪ್ಟೆ, ಉಷಾ ಜಾದವ್ ಸೇರಿದಂತೆ ಹಲವು ನಟಿಯರು ಬಾಲಿವುಡ್ ನ ಕರಾಳ ಮುಖವನ್ನು ಬಿಚ್ಚಿಟ್ಟಿದ್ದಾರೆ. ಮುಂದೆ ಓದಿರಿ.

  ರಾಧಿಕಾ ಆಪ್ಟೆ ಹೇಳಿರುವುದೇನು.?

  ರಾಧಿಕಾ ಆಪ್ಟೆ ಹೇಳಿರುವುದೇನು.?

  ''ಕೆಲವರನ್ನ ದೇವರಂತೆ ಆರಾಧಿಸುತ್ತಾರೆ. ಅವರು ಎಷ್ಟು ಪ್ರಭಾವಿ ಅಂದ್ರೆ, ನನ್ನ ಮಾತುಗಳು ಯಾರ ಮೇಲೂ ಪರಿಣಾಮ ಬೀರುವುದಿಲ್ಲ. ಒಂದು ವೇಳೆ ನಾನು ಅವರ ವಿರುದ್ಧ ಮಾತನಾಡಿದರೆ, ನನ್ನ ವೃತ್ತಿ ಜೀವನ ಹಳ್ಳ ಹಿಡಿಯುತ್ತೆ'' ಎಂದು ಬಿಬಿಸಿ ವಾಹಿನಿಗೆ ರಾಧಿಕಾ ಆಪ್ಟೆ ಹೇಳಿದ್ದಾರೆ.

  ಸರೋಜ್ ಖಾನ್ ವಿರುದ್ಧ ಶ್ರೀರೆಡ್ಡಿ, ಸೋಫಿ ಚೌಧರಿ ಸಿಡಿಮಿಡಿ.!ಸರೋಜ್ ಖಾನ್ ವಿರುದ್ಧ ಶ್ರೀರೆಡ್ಡಿ, ಸೋಫಿ ಚೌಧರಿ ಸಿಡಿಮಿಡಿ.!

  ಉಷಾ ಜಾದವ್ ಏನಂದಿದ್ದಾರೆ.?

  ಉಷಾ ಜಾದವ್ ಏನಂದಿದ್ದಾರೆ.?

  ''ಸಿನಿಮಾಗಳಲ್ಲಿ ಅವಕಾಶ ಸಿಗಬೇಕು ಅಂದ್ರೆ, ಚಿತ್ರರಂಗದ ಪ್ರಭಾವಿ ವ್ಯಕ್ತಿಗಳ ಲೈಂಗಿಕ ತೃಷೆ ತೀರಿಸಬೇಕು. ನಿರ್ಮಾಪಕ ಅಥವಾ ನಿರ್ದೇಶಕ, ಕೆಲವೊಮ್ಮೆ ಇಬ್ಬರ ಜೊತೆಗೂ ಹಾಸಿಗೆ ಹಂಚಿಕೊಳ್ಳಲು ಹೇಳುತ್ತಾರೆ'' ಎಂದು ಬಿಬಿಸಿ ವಾಹಿನಿಗೆ ಹೇಳಿದ್ದಾರೆ ಮರಾಠಿ ನಟಿ ಉಷಾ ಜಾದವ್.

  'ಕಾಸ್ಟಿಂಗ್ ಕೌಚ್'ನಿಂದ ಕೆಲಸ ಸಿಗುತ್ತೆ: ಸರೋಜ್ ಖಾನ್ ಶಾಕಿಂಗ್ ಹೇಳಿಕೆ! 'ಕಾಸ್ಟಿಂಗ್ ಕೌಚ್'ನಿಂದ ಕೆಲಸ ಸಿಗುತ್ತೆ: ಸರೋಜ್ ಖಾನ್ ಶಾಕಿಂಗ್ ಹೇಳಿಕೆ!

  ಯುವ ನಟಿಯ ಮಾತು

  ಯುವ ನಟಿಯ ಮಾತು

  ದೊಡ್ಡ ನಟಿ ಆಗಬೇಕು ಎಂದು ಬೆಟ್ಟದಷ್ಟು ಕನಸು ಹೊತ್ತು ಪುಟ್ಟ ಹಳ್ಳಿಯಿಂದ ಮುಂಬೈಗೆ ಬಂದಿರುವ 25 ವರ್ಷದ ಯುವ ನಟಿಯನ್ನೂ ಬಿಬಿಸಿ ವಾಹಿನಿ ಸಂದರ್ಶನ ಮಾಡಿದೆ. ''ಸಿನಿಮಾಗಳಲ್ಲಿ ಚಾನ್ಸ್ ಕೊಡಿಸುತ್ತೇನೆ ಎಂದು ಕಾಸ್ಟಿಂಗ್ ಏಜೆಂಟ್ ಸೇರಿದಂತೆ ಹಲವರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ'' ಎಂದು ಆ ಯುವತಿ ಬಿಬಿಸಿ ವಾಹಿನಿಯ ಸಂದರ್ಶನದಲ್ಲಿ ಬಾಯ್ಬಿಟ್ಟಿದ್ದಾರೆ.

  'ಕಾಸ್ಟಿಂಗ್ ಕೌಚ್' ನಿಂದ ಬಾಲಿವುಡ್ ಸಿನಿಮಾ ಬಿಟ್ಟರಂತೆ ಹರ್ಷಿಕಾ ಪೂಣಚ್ಚ 'ಕಾಸ್ಟಿಂಗ್ ಕೌಚ್' ನಿಂದ ಬಾಲಿವುಡ್ ಸಿನಿಮಾ ಬಿಟ್ಟರಂತೆ ಹರ್ಷಿಕಾ ಪೂಣಚ್ಚ

  ಅಸಭ್ಯವಾಗಿ ವರ್ತಿಸಿದರೂ ಸುಮ್ಮನಿರಬೇಕು

  ಅಸಭ್ಯವಾಗಿ ವರ್ತಿಸಿದರೂ ಸುಮ್ಮನಿರಬೇಕು

  ''ನನ್ನ ಜೊತೆ ಕಾಸ್ಟಿಂಗ್ ಏಜೆಂಟ್ ಅಸಭ್ಯವಾಗಿ ವರ್ತಿಸುತ್ತಿದ್ದರು. ನಾನು ಧಿಕ್ಕರಿಸಿದಾಗ, ಚಿತ್ರರಂಗದಲ್ಲಿ ಕೆಲಸ ಮಾಡಲು ನನಗೆ ಯೋಗ್ಯತೆ ಇಲ್ಲ ಎಂದಿದ್ದರು'' ಎಂದು 25 ವರ್ಷದ ಯುವ ನಟಿ ಹೇಳಿದ್ದಾರೆ. 'ಬಾಲಿವುಡ್ ಡಾರ್ಕ್ ಸೀಕ್ರೆಟ್' ಎಂಬ ಶೀರ್ಷಿಕೆ ಅಡಿ ಇದೇ ಶನಿವಾರ ಹಾಗೂ ಭಾನುವಾರ ಬಿಬಿಸಿ ವಾಹಿನಿಯಲ್ಲಿ ಡಾಕ್ಯುಮೆಂಟರಿ ಪ್ರಸಾರ ಆಗಲಿದೆ.

  English summary
  Bollywood Actress Radhika Apte and Usha Jadhav speaks about Bollywood's Dark Secret in BBC.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X