ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ಮತ್ತೊಬ್ಬ ಖ್ಯಾತ ನಟಿ, ಗುರುತು ಹಿಡಿಯದ ಫ್ಯಾನ್ಸ್..!
ಸೆಲೆಬ್ರೆಟಿಗಳಿಗೆ ತಮ್ಮ ಸೌಂದರ್ಯ ಕೊಂಚ ಡಲ್ ಹೊಡೀತಿದೆ ಅಂತ ಗೊತ್ತಾದರೆ ಸಾಕು ತಕ್ಷಣವೇ ಸರ್ಜರಿಗಳ ಮೊರೆ ಹೋಗುತ್ತಾರೆ. ಲಕ್ಷಾಂತರ ರೂಪಾಯಿಗಳನ್ನು ನೀರಿನಂತೆ ಖರ್ಚು ಮಾಡಿ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಾರೆ. ಇದಕ್ಕೆ ಚಿತ್ರರಂಗದಲ್ಲಿ ಹಲವಾರು ಉದಾಹರಣೆಗಳಿವೆ. ದೊಡ್ಡ ದೊಡ್ಡ ನಾಯಕಿಯರು ಈ ಪ್ರಯತ್ನ ಮಾಡಿದ್ದಾರೆ.
ಈ ಸಾಲಿಗೆ ಈಗ ರಾಧಿಕಾ ಮದನ್ ಕೂಡ ಸೇರಿಕೊಂಡಿದ್ದಾರೆ ಎನ್ನುವುದು ಹಲವರ ವಾದ. ಹೌದು, ರಾಧಿಕಾ ಮದನ್.. ಕಿರುತೆರೆಯಿಂದ ಬೆಳ್ಳಿತೆರೆಗೆ ಬಂದು ಹಂತ ಹಂತವಾಗಿ ಬೆಳೆಯುತ್ತಿರುವ ಚೆಲುವೆ. ಮೇರಿ ಆಶಿಕಿ ತುಮ್ ಸೇ ಹಿ ಧಾರಾವಾಹಿ ಮೂಲಕ ಇಶಾನಿ ಎಂದೇ ಖ್ಯಾತರಾದ ರಾಧಿಕಾ ಆ ನಂತರ ವಿಶಾಲ್ ಭಾರದ್ವಾಜ್ ನಿರ್ದೇಶನದ ಪಠಾಕಾ ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದರು.

ಆ ನಂತರ ಇರ್ಫಾನ್ ಖಾನ್ ಅಭಿನಯದ ಅಂಗ್ರೇಜಿ ಮೀಡಿಯಂ ಚಿತ್ರದಲ್ಲಿ ಕೂಡ ಕಾಣಿಸಿಕೊಂಡಿದ್ದ ರಾಧಿಕಾ ಆ ನಂತರ ಸೂರ್ಯ ಅಭಿನಯದ ಸೂರರೈ ಪೊಟ್ರು ಚಿತ್ರದ ಹಿಂದಿ ರಿಮೇಕ್ ಸರ್ಪಿರಾ ಚಿತ್ರದಲ್ಲಿ ಅಕ್ಷಯ್ ಕುಮಾರ್‌ಗೆ ನಾಯಕಿಯಾಗಿ ಕಾಣಿಸಿಕೊಂಡರು. ಸದ್ಯ ರಾಧಿಕಾ ಮದನ್ ಸುಬೇದಾರ್ ಎಂಬ ಚಿತ್ರವನ್ನು ಮಾಡುತ್ತಿದ್ದಾರೆ.
ಇಂಥಾ ರಾಧಿಕಾ ಮದನ್ ತಮ್ಮ ಸುಂದರವಾದ ಮುಖವನ್ನು ಹಾಳುಗೆಡವಿಕೊಂಡಿದ್ದಾರೆ, ಪ್ಲಾಸ್ಟಿಕ್ ಸರ್ಜರಿಯನ್ನು ಮಾಡಿಸಿಕೊಂಡಿದ್ದಾರೆ ಎನ್ನುವ ಅನುಮಾನ ಸದ್ಯ ಅನೇಕರನ್ನು ಕಾಡುತ್ತಿದೆ. ರಾಧಿಕಾ ಮದನ್ ಅವರ ಹಿಂದಿನ ಮತ್ತು ಇಂದಿನ ಭಾವ ಚಿತ್ರಗಳು ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ವೈರಲ್ ಆದ ವಿಡಿಯೋಗಳಲ್ಲಿ ರಾಧಿಕಾ ಮದನ್ ಅವರ ಮುಖಚಹರೆಯಲ್ಲಾದ ಬದಲಾವಣೆ ಸ್ಪಷ್ಟವಾಗಿ ಎದ್ದು ಕಾಣುತ್ತೆ.
ಹೀಗಾಗಿಯೇ ಸೋಶಿಯಲ್ ಮೀಡಿಯಾದಲ್ಲಿ ರಾಧಿಕಾ ಮದನ್ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕುತ್ತಿರುವ ಅನೇಕರು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುವ ಅವಶ್ಯಕತೆಯಾದರೂ ಏನಿತ್ತು ಎಂದು ಪ್ರಶ್ನೆಯನ್ನು ಮಾಡುತ್ತಿದ್ದಾರೆ. ಇನ್ನು ಕೆಲವರು ರಾಧಿಕಾ ಮದನ್ ಅವರನ್ನು ಟ್ರೋಲ್ ಕೂಡ ಮಾಡುತ್ತಿದ್ದಾರೆ.
ತನ್ನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಏಕಾಏಕಿ ನಡೆಯುತ್ತಿರುವ ಈ ಚರ್ಚೆಯನ್ನು ಗಮನಿಸಿರುವ ರಾಧಿಕಾ ಮದನ್ ಟ್ರೋಲ್ ಮಾಡುತ್ತಿರುವವರಿಗೆ ಉತ್ತರವನ್ನು ನೀಡಿದ್ದಾರೆ. ಎಐ ತಂತ್ರಜ್ಞಾನದ ಸಹಾಯದಿಂದ ಹುಬ್ಬುಗಳನ್ನು ಇನ್ನು ತಿದ್ದಿ ತೀಡಬಹುದು, ಚೂರು ಮೆಲಕ್ಕೇತಿದರಷ್ಟೇ ಇನ್ನು ಪ್ರಯತ್ನ ಮಾಡಿ ಇದು ಸಹಜವಾಗಿ ಕಾಣುತ್ತಿದೆ ಎಂದು ಹೇಳಿದ್ದಾರೆ. ವೈರಲ್ ಆದ ತಮ್ಮ ಲುಕ್‌ನ್ನು ಬದಲಿಸಿದ್ದು ಮೇಕಪ್ ಎಂಬರ್ಥದಲ್ಲಿ ತಾವು ಮೇಕಪ್ ಮಾಡಿಕೊಳ್ಳುತ್ತಿದ್ದ ವಿಡಿಯೋವನ್ನು ಕೂಡ ಹಂಚಿಕೊಂಡಿದ್ದಾರೆ. ಈ ಮೂಲಕ ತಾವು ಯಾವ ಪ್ಲಾಸ್ಟಿಕ್ ಸರ್ಜರಿಯನ್ನು ಮಾಡಿಸಿಕೊಂಡಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಅಂದ್ಹಾಗೇ ಕೆಲ ದಿನಗಳ ಹಿಂದೆ ನ್ಯೂಸ್ 18 ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಾಧಿಕಾ ಮದನ್ ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಳ್ಳುವ ನಾಯಕಿಯರ ಕುರಿತು ನನಗೆ ಅಸಮಾಧಾನ ಇಲ್ಲ, ಸೌಂದರ್ಯದ ಮೇಲೆ ನಾನು ಅವರ ವ್ಯಕ್ತಿತ್ವವನ್ನು ನಿರ್ಧರಿಸಲ್ಲ ಎಂದು ಹೇಳಿದ್ದರು. ಸರ್ಜರಿ ಮಾಡಿಕೊಳ್ಳುವುದರಿಂದ ಅವರ ಆತ್ಮವಿಶ್ವಾಸ ಹೆಚ್ಚಾಗಬಹುದು ಅವರನ್ನು ನೋಡುವ ದೃಷ್ಟಿಕೋನ ಬದಲಾಗಬಹುದು ಎಂದು ಹೇಳಿದ್ದ ರಾಧಿಕಾ ಮದನ್ ಸದ್ಯಕ್ಕೆ ನನಗೆ ಪ್ಲಾಸ್ಟಿಕ್ ಸರ್ಜರಿಯ ಅವಶ್ಯಕತೆ ಇಲ್ಲ ಆದರೆ ಮುಂದೊಂದು ದಿನ ನನ್ನ ಈ ನಿರ್ಧಾರ ಬದಲಾದರು ಆಗಬಹುದು, ಆ ಸಮಯದಲ್ಲಿ ನನ್ನ ಮನಸ್ಥಿತಿಯ ಮೇಲೆ ನನ್ನ ನಿರ್ಧಾರ ಅವಲಂಬಿತವಾಗಿರುತ್ತೆ ಎಂದು ಹೇಳಿದ್ದರು.
ಸದ್ಯ ರಾಧಿಕಾ ಮದನ್ ಅವರ ಹಳೆಯ ಫೋಟೊ ಮತ್ತು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಅದು ಎಐ ತಂತ್ರಜ್ಞಾನದ ಕೆಲಸ ಎಂದು ರಾಧಿಕಾ ಹೇಳಿದ್ದರು ಕೂಡ ಅನೇಕರು ರಾಧಿಕಾ ಅವರ ಮಾತುಗಳನ್ನು ನಂಬಲು ತಯಾರಿಲ್ಲ. ಬದಲಿಗೆ ರಾಧಿಕಾ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ ಎನ್ನುವ ವಾದವನ್ನೇ ಮಾಡುತ್ತಿದ್ಧಾರೆ.


Click it and Unblock the Notifications











