For Quick Alerts
  ALLOW NOTIFICATIONS  
  For Daily Alerts

  ಕಿಂಗ್ ಖಾನ್ ಶಾರುಖ್ 'ರಯೀಸ್' ಟ್ರೈಲರ್ ಸೂಪರ್ ಹಿಟ್ !

  By ಜೇಮ್ಸ್ ಮಾರ್ಟಿನ್
  |

  ಕಿಂಗ್ ಖಾನ್ ಶಾರುಖ್ ಖಾನ್ ಹಾಗೂ ಮಹೀರಾ ಖಾನ್ ನಡುವಿನ ಕೆಮಿಸ್ಟ್ರಿ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಬಹು ನಿರೀಕ್ಷಿತ ರಯೀಸ್ ಟ್ರೈಲರ್ ಬುಧವಾರ ಬಿಡುಗಡೆಯಾಗಿದೆ. ದೇಶದ ವಿವಿಧೆಡೆ ಅಭಿಮಾನಿಗಳ ಸಮ್ಮುಖದಲ್ಲೇ ಟ್ರೈಲರ್ ಲಾಂಚ್ ಮಾಡಿದ್ದು ವಿಶೇಷ.

  ಯುಟ್ಯೂಬಿಗೆ ಟ್ರೈಲರ್ ಬಂದ ಕೆಲ ನಿಮಿಷಗಳಲ್ಲೇ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಗುಜರಾತಿನ ಮದ್ಯ ಉದ್ಯಮ ಪ್ರಪಂಚದತ್ತ ಬೆಳಕು ಚೆಲ್ಲುವ ಕಥೆ ಹೊಂದಿರುವ ಈ ಚಿತ್ರ ಹಲವು ಕಾರಣಕ್ಕೆ ಕುತೂಹಲ ಕೆರಳಿಸಿದೆ.

  ಗುಜರಾತಿನ ಗಾಳಿಯಲ್ಲೇ ವ್ಯಾಪಾರವಿದೆ. ನನ್ನ ಉಸಿರು ನಿಲ್ಲಿಸಬಹುದು ಆದರೆ, ಇಲ್ಲಿನ ಹವೆ ನಿಲ್ಲಿಸಲಾಗದು ಎಂಬ ಖಡಕ್ ಡೈಲಾಗ್ ಇದೆ.

  ಖಡಕ್ ಅಧಿಕಾರಿ ನವಾಜುದ್ದೀನ್ ಸಿದ್ದಿಕಿ, ಅತುಲ್ ಕುಲಕರ್ಣಿ ನಟನೆ, ಸನ್ನಿ ಲಿಯೋನ್ ಐಟಂ ನಂಬರ್ ಚಿತ್ರದ ಮತ್ತೊಂದು ಪ್ರಮುಖಾಂಶ. 2017ರ ರಿಪಬ್ಲಿಕ್ ಡೇ ದಿನ ವಿಶ್ವದೆಲ್ಲೆಡೆ ಪ್ರದರ್ಶನ ಕಾಣುವ ಈ ಚಿತ್ರದ ಝಲಕ್ ಇಲ್ಲಿದೆ. ಚಿತ್ರದ ಮೇಲೆ ಕ್ಲಿಕ್ ಮಾಡಿ ವಿಡಿಯೋ ನೋಡಿ

  English summary
  Watch Raees trailer starring Shahrukh Khan & Mahira Khan here! The trailer looks fantastic and might end up being a blockbuster hit landing Shahrukh Khan right on top in 2017.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X