ಹಾಲುಬಣ್ಣದ ಚೆಲುವೆ ತಮನ್ನಾ ಜೊತೆ ಆಮಿರ್ ಖಾನ್ ಮಗನ ರೊಮ್ಯಾನ್ಸ್

ಬಾಲಿವುಡ್, ಟಾಲಿವುಡ್ ಸಿನಿಮಾಗಳ ಮೂಲಕ ಜನಮನ್ನಣೆ ಗಳಿಸುವ ಜತೆಗೆ ಸಾಕಷ್ಟು ಬೇಡಿಕೆ ಹೊಂದಿರುವ ನಟಿ ತಮನ್ನಾ ಭಾಟಿಯಾ. ಕನ್ನಡದ ಕೆಜಿಎಫ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೂ ಎಂಟ್ರಿ ಪಡೆದಿದ್ದ ತಮನ್ನಾ ಸದ್ಯ ಬಾಲಿವುಡ್‌ನಲ್ಲಿಯೇ ಬಿಡಾರ ಹೂಡಿದ್ದಾರೆ. ದಕ್ಷಿಣದಲ್ಲಿ ಏನೇ ಇದ್ದರೂ ಕೇವಲ ಹಾಡು ಮಾತ್ರ ಎಂಬ ತೀರ್ಮಾನಕ್ಕೆ ಬಂದಂತೆ ಇದ್ದಾರೆ.

ಇದಕ್ಕೆ ಕೈಗನ್ನಡಿ ಎಂಬಂತೆ ತಮನ್ನಾ ಸದ್ಯ ಹಿಂದಿಯಲ್ಲಿ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಆ ಪೈಕಿ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಅಭಿನಯಿಸುತ್ತಿರುವ ಚಿತ್ರದ ಚಿತ್ರೀಕರಣ ಈಗಾಗಲೇ ಶುರುವಾಗಿದ್ದು ಈ ಚಿತ್ರ ಇದೇ ವರ್ಷ ತೆರೆಗೆ ಬರಲಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಮೇನಲ್ಲಿ ಬಿಡುಗಡೆಯಾದರೂ ಆಗಬಹುದು.

Ragini 3 Confirmed Tamannaah Bhatia amp amp Junaid Khan Set to Sizzle in Balaji s Date-Night Horror

ಈ ಚಿತ್ರ ಹೊರತು ಪಡಿಸಿದರೆ ''ನೋ ಎಂಟ್ರಿ 2'' ಚಿತ್ರ ಕೂಡ ಇದೆ. ಇದಲ್ಲದೇ ''ವಿಲ್ ಯೂ ಬಿ ಮೈ ಪಾರ್ಟ್ನರ್''.. ''ರೋಮಿಯೋ''.. ''ರೇಂಜರ್‌''.. ''ವಿ ಶಾಂತಾರಾಮ್''.. ನಂತಹ ವೆಬ್ ಸರಣಿ ಮತ್ತು ಚಿತ್ರಗಳಲ್ಲಿ ಕೂಡ ತಮನ್ನಾ ಆಕ್ಟ್ ಮಾಡುತ್ತಿದ್ದಾರೆ.

ಇದರ ನಡುವೆ ಇದೀಗ ಬಾಲಿವುಡ್‌ನಲ್ಲಿ ''ರಾಗಿಣಿ'' ಹೆಸರು ಮತ್ತೊಮ್ಮೆ ಕೇಳಿ ಬರುತ್ತಿದ್ದು, ಈ ಚಿತ್ರಕ್ಕೆ ಆಮಿರ್ ಖಾನ್ ಮಗ ಜುನೈದ್ ಖಾನ್ ನಾಯಕನಾಗಿ ಆಯ್ಕೆ ಆಗಿದ್ದಾರೆ ಎನ್ನುವ ಸುದ್ದಿ ಸದ್ಯ ಹಬ್ಬಿದೆ.

ಹೌದು, ಅಸಲಿಗೆ.. ರಾಗಿಣಿ ಬಾಲಿವುಡ್‌ನ ಚಿನ್ನದ ತಿಜೋರಿ. ಏಕ್ತಾ ಕಪೂರ್ ಈ ಹಿಂದೆ ರಾಗಿಣಿ ಹೆಸರಿನಲ್ಲಿ ಎರಡು ಬಾರಿ ಸಿನಿಮಾ ಮಾಡಿ ದುಡ್ಡು ಎಣಿಸಿದ್ದಾರೆ. ಇನ್ನೂ ಏಕ್ತಾ ಕಪೂರ್ ಅವರ ನಿರ್ಮಾಣ ಸಂಸ್ಥೆ ಅಂದರೆ ಅಲ್ಲಿ ಹಸಿ ಬಿಸಿ ದೃಶ್ಯ ಇರಲೇಬೇಕು. ರಾಗಿಣಿ ಫ್ರಾಂಚೈಸಿಯಲ್ಲಿಯೂ ಈ ಹಸಿ ಬಿಸಿ ದೃಶ್ಯಗಳಿದ್ದವು. ಈಗ ಏಕ್ತಾ ಕಪೂರ್ ''ರಾಗಿಣಿ ಎಂಎಂಎಸ್ 3'' ಸಿನಿಮಾ ಮಾಡಲು ಮುಂದಾಗಿದ್ದಾರೆ.

ಈ ಕುರಿತು ಕಳೆದ ಕೆಲ ದಿನಗಳ ಹಿಂದೆಯೇ ಸುದ್ದಿಯೂ ಆಗಿತ್ತು. ತಮನ್ನಾ ಚಿತ್ರಕ್ಕೆ ನಾಯಕಿ ಎಂದು ಕೂಡ ಹೇಳಲಾಗಿತ್ತು. ಆದರೆ, ನಾಯಕ ಯಾರು ಎನ್ನುವ ವಿಚಾರ ಮಾತ್ರ ಗೊತ್ತಾಗಿರಲಿಲ್ಲ. ಇದೀಗ ''ಬಾಲಿವುಡ್ ಹಂಗಾಮ'' ಈ ಪ್ರಶ್ನೆಗೆ ಉತ್ತರವನ್ನು ಹೆಕ್ಕಿ ತೆಗೆದಿದ್ದು ''ರಾಗಿಣಿ ಎಂಎಂಎಸ್ 3'' ಚಿತ್ರಕ್ಕೆ ಜುನೈದ್ ಖಾನ್ ನಾಯಕನಾಗಿ ಆಯ್ಕೆ ಆಗಿದ್ದಾರೆ ಎಂದು ವರದಿ ಮಾಡಿದೆ.

Ragini 3 Confirmed Tamannaah Bhatia amp amp Junaid Khan Set to Sizzle in Balaji s Date-Night Horror

ಅಂದ್ಹಾಗೇ ಜುನೈದ್ ಖಾನ್ ಈಗಾಗಲೇ ಚಿತ್ರರಂಗವನ್ನು ಪ್ರವೇಶಿಸಿಯಾಗಿದೆ. 2024ರಲ್ಲಿ ಇವರ ಅಭಿನಯದ ಚೊಚ್ಚಲ ಚಿತ್ರ ''ಮಹಾರಾಜಾ'' ಬಂದಿತ್ತು. ನೆಟ್‌ಫ್ಲಿಕ್ಸ್‌ನಲ್ಲಿ ನೇರವಾಗಿ ಬಿಡುಗಡೆಯಾದ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಆ ನಂತರ ''ಲವ್ ಟುಡೇ'' ಚಿತ್ರದ ರಿಮೇಕ್‌ ''ಲವ್‌ಯಪಾ'' ಚಿತ್ರದಲ್ಲಿ ಜುನೈದ್ ಕಾಣಿಸಿಕೊಂಡಿದ್ದರು. ಶ್ರೀದೇವಿ ಮಗಳು ಖುಷಿ ಕಪೂರ್ ಈ ಚಿತ್ರದಲ್ಲಿ ನಾಯಕಿಯಾಗಿದ್ದರು. ಈ ಚಿತ್ರ ಬಂದಿದ್ದು ಹೋಗಿದ್ದು ಕೂಡ ಗೊತ್ತಾಗಲಿಲ್ಲ.

ಸದ್ಯ ಜುನೈದ್ ಅಭಿನಯದ ಮೂರನೇ ಚಿತ್ರ ''ಏಕ್ ದಿನ್'' ಬಿಡುಗಡೆಯಾಗಬೇಕಿದೆ. ಸರಳ ಸುಂದರಿ ಸಾಯಿ ಪಲ್ಲವಿ ಈ ಚಿತ್ರದಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಿತ್ರದ ಮೇಲೆ ಆಮಿರ್ ಖಾನ್‌ಗೆ ಅಪಾರವಾದ ನಿರೀಕ್ಷೆಗಳಿದ್ದು ಮೇ ಅಥವಾ ಜೂನ್‌ನಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ. ಹೀಗಿರುವಾಗ ಇದೀಗ ಜುನೈದ್ ಖಾನ್ ''ರಾಗಿಣಿ ಎಂಎಂಎಸ್‌ 3'' ಚಿತ್ರಕ್ಕೆ ನಾಯಕನಾಗಿ ಆಯ್ಕೆಯಾಗಿದ್ದಾರೆ ಎನ್ನುವ ಸುದ್ದಿ ಸದ್ಯ ಗುಲ್ಲಾಗಿದೆ.

ಇನ್ನುಳಿದಂತೆ ''ವೀರೇ ದಿ ವೆಡ್ಡಿಂಗ್'' ಮತ್ತು ''ಫ್ರೆಡ್ಡಿ'' ಚಿತ್ರಗಳ ನಿರ್ದೇಶಕ ಶಶಾಂಕ್ ಘೋಷ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಏಕ್ತಾ ಕಪೂರ್ ಅವರ ಒಡೆತನದ ಬಾಲಾಜಿ ನಿರ್ಮಾಣ ಸಂಸ್ಥೆಯ ಜೊತೆ ಇದು ಇವರ ಮೂರನೇ ಪ್ರಯತ್ನ. ಇನ್ನುಳಿದ ತಾರಾಬಳಗ ಮತ್ತು ತಂತ್ರಜ್ಞರ ವಿಚಾರವನ್ನು ಸದ್ಯ ಬಾಲಾಜಿ ನಿರ್ಮಾಣ ಸಂಸ್ಥೆ ಬಹಿರಂಗ ಪಡಿಸಿಲ್ಲವಾದರೂ ಸದ್ಯ ಈ ಚಿತ್ರ ಶುರುವಾಗುವೇ ಮುನ್ನವೇ ಕುತೂಹಲ ಕೆರಳಿಸಿದೆ. ಜುನೈದ್ ಮತ್ತು ತಮನ್ನಾ ಅವರ ಕೆಮೆಸ್ಟ್ರೀಯನ್ನು ಬೆಳ್ಳಿಪರದೆಯ ಮೇಲೆ ಕಣ್ತುಂಬಿಕೊಳ್ಳಲು ಆಗಲೇ ಒಂದು ವರ್ಗ ಕಾತುರದಿಂದ ಕಾಯುತ್ತಿದೆ.

More from Filmibeat

English summary
Ekta Kapoor revives the iconic horror franchise! Tamannaah Bhatia and Junaid Khan have been cast as the leads for Ragini 3. From the production house of Balaji Motion Pictures, discover why this "date-night horror" is the most anticipated movie announcement of the year.
Read more about: tamannaah tamanna bhatia
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X