ಹಸಿಬಿಸಿ ದೃಶ್ಯಗಳ 'ರಾಗಿಣಿ ಎಂಎಂಎಸ್-3'ಗೆ ಮಿಲ್ಕಿ ಬ್ಯೂಟಿ ತಮನ್ನಾ ನಾಯಕಿ

ಬಾಲಿವುಡ್, ಟಾಲಿವುಡ್ ಸಿನಿಮಾಗಳ ಮೂಲಕ ಜನಮನ್ನಣೆ ಗಳಿಸುವ ಜತೆಗೆ ಸಾಕಷ್ಟು ಬೇಡಿಕೆ ಹೊಂದಿರುವ ನಟಿ ತಮನ್ನಾ ಭಾಟಿಯಾ. ಕನ್ನಡದ ಕೆಜಿಎಫ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೂ ಎಂಟ್ರಿ ಪಡೆದಿದ್ದ ತಮನ್ನಾ ಸದ್ಯ ಬಾಲಿವುಡ್‌ನಲ್ಲಿಯೇ ಬಿಡಾರ ಹೂಡಿದ್ದಾರೆ. ದಕ್ಷಿಣದಲ್ಲಿ ಏನೇ ಇದ್ದರೂ ಕೇವಲ ಹಾಡು ಮಾತ್ರ ಎಂಬ ತೀರ್ಮಾನಕ್ಕೆ ಬಂದಂತೆ ಇದ್ದಾರೆ.

ಇದಕ್ಕೆ ಕೈಗನ್ನಡಿ ಎಂಬಂತೆ ತಮನ್ನಾ ಸದ್ಯ ಹಿಂದಿಯಲ್ಲಿ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಆ ಪೈಕಿ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಅಭಿನಯಿಸುತ್ತಿರುವ ಚಿತ್ರದ ಚಿತ್ರೀಕರಣ ಈಗಾಗಲೇ ಶುರುವಾಗಿದ್ದು ಈ ಚಿತ್ರ ಮುಂದಿನ ವರ್ಷ ಮೇನಲ್ಲಿ ತೆರೆಗೆ ಬರಲಿದೆ.

ಈ ಚಿತ್ರ ಹೊರತು ಪಡಿಸಿದರೆ ''ನೋ ಎಂಟ್ರಿ 2'' ಚಿತ್ರ ಕೂಡ ಇದೆ. ಇದಲ್ಲದೇ ''ವಿಲ್ ಯೂ ಬಿ ಮೈ ಪಾರ್ಟ್ನರ್''.. ''ರೋಮಿಯೋ''.. ''ರೇಂಜರ್‌''ನಂತಹ ವೆಬ್ ಸರಣಿಗಳಲ್ಲಿ ಕೂಡ ತಮನ್ನಾ ಆಕ್ಟ್ ಮಾಡುತ್ತಿದ್ದಾರೆ. ಇದರ ನಡುವೆ ಇದೀಗ ತಮನ್ನಾ ''ರಾಗಿಣಿ ಎಂಎಂಎಸ್ 3'' ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಚಿತ್ರದ ಕಥೆಯನ್ನು ಕೇಳಿ ರೋಮಾಂಚನವಾಯ್ತು ಎಂದು ಕೂಡ ಹೇಳಿದ್ದಾರೆ.

''ರಾಗಿಣಿ ಎಂಎಂಎಸ್‌''ನ ಹಿಂದಿನ ಎರಡು ಭಾಗಗಳನ್ನು ನಿರ್ಮಾಣ ಮಾಡಿದ್ದ ಏಕ್ತಾ ಕಪೂರ್ ಅವರೇ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು ಈ ಫ್ರಾಂಚೈಸಿಯನ್ನು ಮುಂದುವರೆಸಲು ಏಕ್ತಾ ಹಲವು ದಿನಗಳಿಂದ ಕಾಯುತ್ತಿದ್ದರು. ಆದರೆ ಕಥೆ ಸಿಕ್ಕಿರಲಿಲ್ಲ. ಆದರೆ ಈಗ ಒಂದೊಳ್ಳೆಯ ಕಥೆ ಸಿಕ್ಕಿದ್ದು ಈ ವಷಾಂತ್ಯಕ್ಕೆ ಚಿತ್ರದ ಚಿತ್ರೀಕರಣ ಶುರುವಾಗಲಿದೆ ಎಂದು ''ಪಿಂಕ್‌ ವಿಲ್ಲಾ'' ವರದಿಯನ್ನು ಮಾಡಿದೆ.

Ragini MMS 3 Tamannaah Bhatia to enter Ekta Kapoor s terrifying universe

ಇನ್ನು ತಮನ್ನಾ ಹೇಳಿ ಕೇಳಿ ಅತ್ಯುತ್ತಮ ಡ್ಯಾನ್ಸರ್. ಅವರು ಹೆಜ್ಜೆ ಹಾಕಿರುವ ಹಾಡುಗಳು ಬಹುತೇಕ ಚಾರ್ಟ್‌ ಬಸ್ಟರ್ ಲಿಸ್ಟ್‌ಗೆ ಸೇರಿವೆ. ಈ ಹಿನ್ನೆಲೆ ಈ ಚಿತ್ರದಲ್ಲಿ ಇಡೀ ದೇಶವೇ ಹುಚ್ಚೆದ್ದು ಕುಣಿಯುವಂತಹ ಹಾಡೊಂದನ್ನು ಕೂಡ ಏಕ್ತಾ ಕಪೂರ್ ಸದ್ಯ ಹುಡುಕುತ್ತಿದ್ದಾರೆ. ತಮ್ಮ ತಂಡದ ಜೊತೆ ಚಿತ್ರದ ಹಾಡುಗಳ ಕುರಿತು ಕೂಡ ಚರ್ಚೆ ಮಾಡುತ್ತಿದ್ದಾರೆ ಎಂದು ಕೂಡ ''ಪಿಂಕ್‌ವಿಲ್ಲಾ'' ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇನ್ನೂ ''ರಾಗಿಣಿ ಎಂ.ಎಂ.ಎಸ್‌3'' ಚಿತ್ರವನ್ನು ತಮನ್ನಾ ಒಪ್ಪಿಕೊಂಡ ಬೆನ್ನಲ್ಲಿಯೇ ಅಸಮಾಧಾನದ ಅಲೆ ಸೋಶಿಯಲ್ ಮೀಡಿಯಾದಲ್ಲಿ ಎದ್ದಿದೆ. ಯಾಕೆಂದರೆ.. ''ರಾಗಿಣಿ ಎಂಎಂಎಸ್‌'' ಹಿಂದಿನ ಚಿತ್ರಗಳಲ್ಲಿ ಇದ್ದಿದ್ದು ಹಸಿ ಬಿಸಿ ದೃಶ್ಯಗಳೇ. ಈ ಭಾಗದಲ್ಲಿ ಕೂಡ ಈ ಬೋಲ್ಡ್ ಪ್ರಯತ್ನ ಮುಂದುವರೆಯಲಿದೆ. ಈ ಹಿನ್ನೆಲೆ ಹಲವರು ಈ ಚಿತ್ರ ಒಪ್ಪಿಕೊಳ್ಳುವ ಅವಶ್ಯಕತೆಯಾದರೂ ಏನಿತ್ತು ಎಂದು ಪ್ರಶ್ನೆಯನ್ನು ಮಾಡುತ್ತಿದ್ದಾರೆ. ಮೊದಲು ಕೇವಲ ಐಟಂ ಡ್ಯಾನ್ಸ್ ಈಗ ನೋಡಿದರೆ ಇಂತಹ ಚಿತ್ರಗಳು, ಇದೆಲ್ಲಾ ಬೇಕಿತ್ತಾ ಎಂದು ಕಿಡಿ ಕಾರುತ್ತಿದ್ದಾರೆ. ತಮನ್ನಾ ಅವರನ್ನು ಟ್ರೋಲ್ ಕೂಡ ಮಾಡುತ್ತಿದ್ದಾರೆ.

ಇನ್ನುಳಿದಂತೆ ಚಿತ್ರದಲ್ಲಿ ಬೇರೆ ಯಾರೆಲ್ಲಾ ಕಲಾವಿದರು ಇರಲಿದ್ದಾರೆ. ತಮನ್ನಾ ಎದುರು ನಾಯಕನಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಪ್ರಶ್ನೆಗಳಿಗೆ ಉತ್ತರ ಶೀಘ್ರದಲ್ಲಿಯೇ ಸಿಗುವ ನಿರೀಕ್ಷೆ ಇದೆ.

More from Filmibeat

Read more about: tamanna tamanna bhatia
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X