ರಾಜ್ ಕಪೂರ್ ಪುತ್ರಿ ರಿತು ನಿಧನ: ಬಚ್ಚನ್ ಸಂತಾಪ
ಬಾಲಿವುಡ್ ನಟ ರಾಜ್ ಕಪೂರ್ ಪುತ್ರಿ ನಿಧನ ಹೊಂದಿದ್ದಾರೆ. ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದ ರಿತು ನಂದ ಮಂಗಳವಾರ ವಿಧಿವಶರಾಗಿದ್ದಾರೆ.
ಮಂಗಳವಾರ ಮಧ್ಯರಾತ್ರಿ 1 ಗಂಟೆ 15 ನಿಮಿಷ ಸುಮಾರಿಗೆ ನವದೆಹಲಿ ರಿತು ಕೊನೆಯುಸಿರೆಳೆದಿದ್ದಾರೆ. ರಿತು ನಿಧನದ ಸುದ್ದಿಯನ್ನು ನಟ ಅಮಿತಾಭ್ ಬಚ್ಚನ್ ತಿಳಿಸಿದ್ದಾರೆ. ರಿತುಗೆ ಸಂತಾಪ ಸೂಚಿಸಿದ್ದಾರೆ.
ರಿತು ಸೇರಿದಂತೆ ರಾಜ್ ಕಪೂರ್ ರಿಗೆ 5 ಮಕ್ಕಳಿದ್ದಾರೆ. ರಿತು ರಾಜನ್ ನಂದ ಅವರನ್ನು ವಿವಾಹವಾಗಿದ್ದು, ರಾಜನ್ ಅಮಿತಾಭ್ ಬಚ್ಚನ್ ರ ಸಂಬಂಧಿ. ರಿತು ಸಂಬಂಧಿ ನೀತು ಕಪೂರ್ ಸಹ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ರಿತು ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ.

ರಿಷಿ ಕಪೂರ್ ರಣ್ದೀರ್ ಕಪೂರ್, ರಾಜೀವ್ ಕಪೂರ್ ರಿತು ವರ ಸಹೋದರರಾಗಿದ್ದಾರೆ. ನವ್ಯ ನಂದ ಹಾಗೂ ಅಗಸ್ತ್ಯ ನಂದ ರಿತು ಮೊಮ್ಮಕ್ಕಳು.
English summary
Raj Kapoor daughter Ritu Nanda passes away.


Click it and Unblock the Notifications