For Quick Alerts
  ALLOW NOTIFICATIONS  
  For Daily Alerts

  ದೆಹಲಿ ಚಿತ್ರಮಂದಿರದಲ್ಲಿ ಟಿಕೆಟ್ ಮಾರಾಟ ಮಾಡಿದ ರಾಜ್ ಕುಮಾರ್ ರಾವ್

  |

  ಬಾಲಿವುಡ್ ನಟ ರಾಜ್ ಕುಮಾರ್ ರಾವ್ ಚಿತ್ರಮಂದಿರದಲ್ಲಿ ಟಿಕೆಟ್ ಮಾರಾಟ ಮಾಡಿರುವ ದೃಶ್ಯ ಸೆರೆಯಾಗಿದೆ. ದೆಹಲಿಯಲ್ಲಿ ತಮ್ಮ ಹೊಸ ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗಿದ್ದ ನಟ ರಾಜ್ ಕುಮಾರ್ ಟಿಕೆಟ್ ಕೌಂಟರ್‌ಗೆ ಹೋಗಿ ಟಿಕೆಟ್ ಸೇಲ್ ಮಾಡಿದ್ದಾರೆ.

  ರೂಹಿ ಸಿನಿಮಾ ಜಾಹ್ನವಿ ಕಪೂರ್ ಮತ್ತು ರಾಜ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮಾರ್ಚ್ 11 ರಂದು ರೂಹಿ ಎಲ್ಲೆಡೆ ಬಿಡುಗಡೆಯಾಗಿದೆ. ಕಾಮಿಡಿ ಹಾರರ್ ಥ್ರಿಲ್ಲಿಂಗ್ ಕಥೆ ಹೊಂದಿರುವ ರೂಹಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡಿದೆ.

  ಹಾಲಿವುಡ್ ದಿಗ್ಗಜರಿಂದ ಬಾಲಿವುಡ್ ದಿಗ್ಗಜ ಅಮಿತಾಬ್ ಬಚ್ಚನ್‌ಗೆ ಗೌರವ ಹಾಲಿವುಡ್ ದಿಗ್ಗಜರಿಂದ ಬಾಲಿವುಡ್ ದಿಗ್ಗಜ ಅಮಿತಾಬ್ ಬಚ್ಚನ್‌ಗೆ ಗೌರವ

  ಹಾರ್ದಿಕ್ ಮೆಹ್ತಾ ಈ ಚಿತ್ರ ನಿರ್ದೇಶನ ಮಾಡಿದ್ದು, ವರುಣ್ ಶರ್ಮಾ, ಅಲೆಕ್ಸ್ ಓ ನೆಲ್, ಮನವ್ ವಿಜ್, ಸರಿತಾ ಜೋಶಿ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.

  ಕಳೆದ ವರ್ಷ ಕೊರೊನಾ ಕಾರಣಕ್ಕೆ ಬಾಲಿವುಡ್‌ನಲ್ಲಿ ಹೆಚ್ಚು ಸಿನಿಮಾಗಳು ಬಿಡುಗಡೆಯಾಗಿಲ್ಲ. ಆದರೆ, ಅಮೇಜಾನ್ ಪ್ರೈಮ್, ನೆಟ್‌ಫ್ಲಿಕ್ಸ್‌ನಲ್ಲಿ ಹಲವು ವೆಬ್ ಸಿರೀಸ್ ಹಾಗೂ ಸಿನಿಮಾಗಳು ತೆರೆಕಂಡಿದೆ.

  ರಾಜ್ ಕುಮಾರ್ ರಾವ್ ಅಭಿನಯದ ದಿ ವೈಟ್ ಟೈಗರ್, ಚಲಾಂಗ್, ಲುಡೊ, ಶಿಮ್ಲಾ ಮಿರ್ಚಿ ಸಿನಿಮಾಗಳು ಕಳೆದ ವರ್ಷ ಬಿಡುಗಡೆಯಾಗಿತ್ತು.

  Roberrt Box Office Collection : ಅಭಿಮಾನಿಗಳ ಆರ್ಭಟಕ್ಕೆ ಬಾಕ್ಸ್ ಆಫೀಸ್ ಲೂಟಿ | Filmibeat Kannada

  ರೂಹಿ ಬಳಿಕ ರಾಜ್ ಕುಮಾರ್ ರಾವ್ ನಟನೆಯ ಮತ್ತೆರಡು ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿದೆ. ಹಮ್ ದೋ ಹಮಾರೆ ದೋ ಹಾಗೂ ಬದಾಯಿ ದೋ ಎಂಬ ಚಿತ್ರಗಳಲ್ಲಿ ರಾಜ್ ಕುಮಾರ್ ರಾವ್ ಅಭಿನಯಿಸುತ್ತಿದ್ದಾರೆ.

  English summary
  Bollywood actor Raj Kumar Rao sells tickets of Roohi movie during promotion in delhi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X