ನಟಿಯರ ಮೇಲೆ ಅಶ್ಲೀಲ ವಿಡಿಯೋ ಆರೋಪ ಹೊರಿಸಿದ ರಾಜ್ ಕುಂದ್ರಾ

ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಅಶ್ಲೀಲ ವಿಡಿಯೋ ನಿರ್ಮಾಣ, ಪ್ರಸಾರ, ಮಾರಾಟ ಪ್ರಕರಣ ಸಂಬಂಧ ಜೈಲು ಪಾಲಾಗಿ ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದು, ಇದೀಗ ಹೊಸದಾಗಿ ನಡೆದ ಬೆಳವಣಿಗೆಯಲ್ಲಿ ನಟಿಯರಿಬ್ಬರ ಮೇಲೆ ಅಶ್ಲೀಲ ವಿಡಿಯೋ ನಿರ್ಮಾಣ ಮಾಡಿದ ಆರೋಪ ಹೊರಿಸಿದ್ದಾರೆ.

ಸ್ವತಃ ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದ ಆರೋಪಿಯಾಗಿರುವ ರಾಜ್ ಕುಂದ್ರಾ, ನಟಿಯರಾದ ಶೆರ್ಲಿನ್ ಚೋಪ್ರಾ ಹಾಗೂ ಪೂನಂ ಪಾಂಡೆ ಅವರುಗಳು ಹಣದ ಆಸೆಯಿಂದ ತಮ್ಮದೇ ಅಶ್ಲೀಲ ವಿಡಿಯೋಗಳನ್ನು ಮಾಡಿದ್ದರು ಎಂದು ರಾಜ್ ಕುಂದ್ರಾ ಆರೋಪಿಸಿದ್ದಾರೆ.

ರಾಜ್ ಕುಂದ್ರಾ ನಿರೀಕ್ಷಣಾ ಜಾಮೀನಿಗಾಗಿ ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಅರ್ಜಿಯಲ್ಲಿ ಶೆರ್ಲಿನ್ ಚೋಪ್ರಾ ಹಾಗೂ ಪೂನಂ ಪಾಂಡೆ ಅವರುಗಳು ಸ್ವತಃ ತಾವೇ ತಮ್ಮ ಅಶ್ಲೀಲ ವಿಡಿಯೋ ಚಿತ್ರೀಕರಿಸಿ ಅಪ್ಲಿಕೇಶನ್‌ನಲ್ಲಿ ಹಾಕಿದ್ದರೆಂದು ದೂರಿದ್ದಾರೆ. ಅವರ ಆ ವಿಡಿಯೋಗಳಿಗೂ ನನಗೆ ಸಂಬಂಧವಿಲ್ಲವೆಂದು ಅರ್ಜಿಯನ್ನು ರಾಜ್ ಕುಂದ್ರಾ ಹೇಳಿದ್ದಾರೆ.

Raj Kundra Alleged That Sherlyn Chopra And Poonam Pandey Made Indecent Videos Of Their Own

ಇದೇ ಶೆರ್ಲಿನ್ ಚೋಪ್ರಾ ಹಾಗೂ ಪೂನಂ ಪಾಂಡೆ ಅವರುಗಳು ರಾಜ್ ಕುಂದ್ರಾ ಜೈಲಿಗೆ ಹೋದಾಗ ಅವರ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ಶೆರ್ಲಿನ್ ಚೋಪ್ರಾ ಅಂತೂ ರಾಜ್ ಕುಂದ್ರಾ ವಿರುದ್ಧ ಲೈಂಗಿಕ ದೌರ್ಜನ್ಯದ, ವಂಚನೆಯ ದೂರುಗಳನ್ನು ಸಹ ನೀಡಿದ್ದರು. ರಾಜ್ ಕುಂದ್ರಾ ಕೇಳಿದ್ದಕ್ಕಾಗಿಯೇ ತಾವು ಅಶ್ಲೀಲ ವಿಡಿಯೋ ನೀಡಿದ್ದಾಗಿಯೂ ನಟಿಯರು ಹೇಳಿದ್ದರು.

ಆದರೆ ಇದೀಗ ಬಾಂಬೆ ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಇದನ್ನು ವಿರೋಧಿಸಿರುವ ರಾಜ್ ಕುಂದ್ರಾ, ''ನಟಿಯರು ಹಾಕಿರುವ ವಿಡಿಯೋ ಅವರ ಸ್ವ ಇಚ್ಛೆಯಿಂದ ಹಾಕಲಾಗಿದೆ. ಆ ವಿಡಿಯೋಗಳ ನಿರ್ಮಾಣ ಅಥವಾ ಅಪ್‌ಲೋಡ್‌ನಲ್ಲಿ ನನ್ನ ಪಾತ್ರವೇನೂ ಇಲ್ಲ. ಅವರಿಬ್ಬರೂ ವೈಯಕ್ತಿಕ ಲಾಭಕ್ಕಾಗಿ ಆ ವಿಡಿಯೋಗಳನ್ನು ನಿರ್ಮಾಣ ಮಾಡಿದ್ದಾರೆ ಮತ್ತು ಪ್ರಸಾರ ಮಾಡಿದ್ದಾರೆ. ಆ ವಿಡಿಯೋಗಳಿಗೂ ನನಗೆ ಸಂಬಂಧವಿಲ್ಲ'' ಎಂದಿದ್ದಾರೆ ಕುಂದ್ರಾ.

''ಇದೀಗ ಚಾಲ್ತಿಯಲ್ಲಿರುವ ಹಾಟ್‌ಶಾಟ್ಸ್ ಅಪ್ಲಿಕೇಶನ್‌ನಲ್ಲಿಯೂ ಶೆರ್ಲಿನ್ ಚೋಪ್ರಾ ಹಾಗೂ ಪೂನಂ ಪಾಂಡೆಯವರ ಆ ಅಶ್ಲೀಲ ವಿಡಿಯೋಗಳನ್ನು ಪ್ರಸಾರ ಮಾಡಿರಲಿಲ್ಲ. ನಮ್ಮ ಸಂಸ್ಥೆಯ ಮೂಲಕ ಆ ನಟಿಯರಿಗೆ ಅವರಿಗೆಂದೇ ಖಾಸಗಿ ಒಟಿಟಿ ವೇದಿಕೆ ನಿರ್ಮಾಣ ಮಾಡಿಕೊಡಲಾಗಿತ್ತು. ಆ ಒಟಿಟಿಗಳಲ್ಲಿ ಆ ನಟಿಯರು ತಮ್ಮದೇ ವಿಡಿಯೋಗಳನ್ನು ಹಂಚಿಕೊಂಡಿದ್ದರು'' ಎಂದಿದ್ದಾರೆ.

ಇದೀಗ ಪ್ರಶ್ನೆಯಲ್ಲಿರುವ ಆ ವಿಡಿಯೋಗಳಲ್ಲಿರುವುದು ಲೈಂಗಿಕತೆಗೆ ಸಂಬಂಧಿಸಿದ ದೃಶ್ಯಗಳೇ ಆದರು ಅವು ಶೃಂಗಾರದ ವಿಡಿಯೋಗಳೇ ಹೊರತು ಲೈಂಗಿಕ ವಿಡಿಯೋಗಳಲ್ಲ. ಆ ವಿಡಿಯೋಗಳಲ್ಲಿ ಇಬ್ಬರು ವ್ಯಕ್ತಿಗಳ ನಡುವೆ ಪರಸ್ಪರ ಸ್ಪರ್ಷವಿಲ್ಲ. ವಿಡಿಯೋದಲ್ಲಿರುವ ವ್ಯಕ್ತಿಗಳು ಕಾಮಕೇಳಿಯಲ್ಲಿ ಭಾಗಿಯಾಗಿಲ್ಲ. ಹಾಗಾಗಿ ಇದು ಐಟಿ ಕಾಯ್ದೆಯ ಸೆಕ್ಷನ್ 67 ಎ ಅಡಿಯಲ್ಲಿ ಬರುವುದಿಲ್ಲ'' ಎಂದು ಕುಂದ್ರಾ ಪರ ವಕೀಲರು ಅರ್ಜಿಯಲ್ಲಿ ತಿಳಿಸಿದ್ದಾರೆ.

ರಾಜ್ ಕುಂದ್ರಾ ಭಾರತದಲ್ಲಿ ಅಶ್ಲೀಲ ವಿಡಿಯೋಗಳನ್ನು ನಿರ್ಮಾಣ ಮಾಡಿ ಅವನ್ನು ಬ್ರಿಟನ್‌ನ ತನ್ನ ಸಹೋದರ ಸಂಬಂಧಿಯ ಸಂಸ್ಥೆಯ ಮೂಲಕ ಹಾಟ್‌ಶಾಟ್ಸ್ ಹೆಸರಿನ ಶೃಂಗಾರಮಯ ವಿಡಿಯೋಗಳನ್ನು ಪ್ರದರ್ಶಿಸುವ ಅಪ್ಲಿಕೇಶನ್‌ಗೆ ಅಪ್‌ಲೋಡ್ ಮಾಡಿಸುತ್ತಿದ್ದರೆಂಬ ಆರೋಪದಲ್ಲಿ ಮುಂಬೈ ಪೊಲೀಸರು ಕುಂದ್ರಾ ಅವರನ್ನು ಮುಂಬೈ ಪೊಲೀಸರು ಫೆಬ್ರವರಿ 4 ರಂದು ಬಂಧಿಸಲಾಯ್ತು. ರಾಜ್ ಕುಂದ್ರಾ ವಿರುದ್ಧ ನಟಿಯರಾದ ಪೂನಂ ಪಾಂಡೆ, ಶೆರ್ಲಿನ್ ಚೋಪ್ರಾ, ಮಾಡೆಲ್ ಸಾಗರಿಕ ಸುಮನ್ ಇನ್ನೂ ಕೆಲವರು ಕುಂದ್ರಾ ವಿರುದ್ಧ ಆರೋಪ ಮಾಡಿದರು. ಆದರೆ ನಟಿ ಗೆಹನಾ ವಸಿಷ್ಠ ಮಾತ್ರ ಕುಂದ್ರಾ ಪರವಾಗಿ ಹೇಳಿಕೆಗಳನ್ನು ನೀಡಿದರು. ಆದರೆ ಗೆಹನಾ ವಸಿಷ್ಠರೆ ಮೊದಲಿಗೆ ಈ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದರು. ಅವರ ಬಂಧನದಿಂದಲೇ ರಾಜ್ ಕುಂದ್ರಾ ಹೆಸರು ಆಚೆ ಬಂದಿತ್ತು. ರಾಜ್ ಕುಂದ್ರಾ ಬಂಧನದ ಬಳಿಕ ಹಲವು ವಿಡಿಯೋಗಳನ್ನು ಮಾಡಿದ ಗೆಹನಾ ವಸಿಷ್ಠ ತಮ್ಮ ಬಂಧನ, ತಮ್ಮ ಮೇಲೆ ಹೊರಿಸಲಾದ ಪ್ರಕರಣಗಳ ಸತ್ಯಾಸತ್ಯತೆ ಬಗ್ಗೆ ಮಾತನಾಡಿದ್ದರು.

More from Filmibeat

English summary
Raj Kundra said in an application filled to Bombay high court that Sherlyn Chopra and Poonam Pandey made indecent videos of their own and published them for commercial gain.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X