For Quick Alerts
  ALLOW NOTIFICATIONS  
  For Daily Alerts

  ಬಂಧನದಿಂದ ತಪ್ಪಿಸಿಕೊಳ್ಳಲು ಪೊಲೀಸರಿಗೆ ಇಷ್ಟೊಂದು ಲಂಚ ನೀಡಿದ್ರಾ ರಾಜ್ ಕುಂದ್ರ?

  |

  ಬಾಲಿವುಡ್ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರ ಬಂಧನದ ಬಳಿಕ ಸಾಕಷ್ಟು ಸ್ಫೋಟಕ ವಿಚಾರಗಳು ಬಹಿರಂಗವಾಗುತ್ತಿವೆ. ಬ್ಲೂ ಫಿಲ್ಮ್ ದಂಧೆಯ ಕರಾಳ ಜಗತ್ತಿನ ಮುಖ ಮತ್ತಷ್ಟು ತೆರೆದುಕೊಳ್ಳುತ್ತಿದೆ. ಮಾಡೆಲ್ ಮತ್ತು ಅಡಲ್ಟ್ ನಟಿ ಪೂನಂ ಪಾಂಡೆ, ರಾಜ್ ಕುಂದ್ರ ಅವರನ್ನು ಸೆಕ್ಸ್ ದಂಧೆಯ ಮಾಸ್ಟರ್ ಮೈಂಡ್ ಎಂದು ಕರೆದಿದ್ದಾರೆ.

  ಮುಂಬೈ ಪೊಲೀಸರು ಕಳೆದ 2019ರಿಂದ ಬ್ಲೂ ಫಿಲ್ಮ್ ದಂಧೆಯ ಹಿಂದೆ ಬಿದ್ದಿದ್ದರು. ಕಳೆದ ಎರಡು ವರ್ಷಗಳಿಂದ ಈ ದಂಧೆಯ ಪ್ರಮುಖ ರುವಾರಿಯನ್ನು ಬಂಧಿಸಲು ಸಾಕಷ್ಟು ಸಾಕ್ಷಿಗಳನ್ನು ಕಲೆಹಾಕಿದ್ದಾರೆ. ಆಂಗ್ಲ ಮಾಧ್ಯಮವೊಂದು ವರದಿ ಮಾಡಿರುವ ಪ್ರಕಾರ, ರಾಜ್ ಕುಂದ್ರ ಬಂಧನದಿಂದ ತಪ್ಪಿಸಿಕೊಳ್ಳಲು ಪೊಲೀಸರಿಗೆ ಲಂಚ ನೀಡುತ್ತಿದ್ದರು ಎನ್ನುವ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.

  ಸ್ಫೋಟಕ ಮಾಹಿತಿ: ನೀಲಿ ಚಿತ್ರ ಲೈವ್ ಸ್ಟ್ರೀಮ್‌ಗೆ ಪ್ಲಾನ್ ಮಾಡಿದ್ದ ರಾಜ್ ಕುಂದ್ರಸ್ಫೋಟಕ ಮಾಹಿತಿ: ನೀಲಿ ಚಿತ್ರ ಲೈವ್ ಸ್ಟ್ರೀಮ್‌ಗೆ ಪ್ಲಾನ್ ಮಾಡಿದ್ದ ರಾಜ್ ಕುಂದ್ರ

  ರಾಜ್ ಕುಂದ್ರ ಮುಂಬೈ ಅಪರಾಧ ವಿಭಾಗಕ್ಕೆ 25 ಲಕ್ಷ ರೂ. ಲಂಚ ನೀಡುವುದು ಬೆಳಕಿಗೆ ಬಂದಿದೆ. ಬಂಧನದಿಂದ ತಪ್ಪಿಸಿಕೊಳ್ಳಲು ರಾಜ್ ಕುಂದ್ರ ಪೊಲೀಸ್ ಇಲಾಖೆಗೆ ದೊಡ್ಡ ಮೊತ್ತದ ಹಣ ನೀಡುತ್ತಿದ್ದರು ಎನ್ನುವ ಮಾಹಿತಿ ತಿಳಿದುಬಂದಿದೆ.

  ಅಶ್ಲೀಲ ದಂಧೆ ಸಂಬಂಧ ಪೊಲೀಸರು ಮಾರ್ಚ್ ತಿಂಗಳಲ್ಲಿ ಕೆಲವರನ್ನು ಬಂಧಿಸಿದ್ದರು. ಅದರಲ್ಲಿ ಪ್ರಮುಖ ಆರೋಪಿಯಾಗಿದ್ದ ಯಶ್ ಠಾಕೂರ್ ಅಲಿಯಾಸ್ ಅರವಿಂದ್ ಶ್ರೀವಾಸ್ತವ, ರಾಜ್ ಕುಂದ್ರ ವಿರುದ್ಧ ಲಂಚದ ಆರೋಪ ಮಾಡಿದ್ದರು ಎನ್ನುವ ವಿಚಾರ ಬಹಿರಂಗವಾಗಿದೆ.

  ಶಿಲ್ಪಾ ಶೆಟ್ಟಿ ಪತಿ ವಿರುದ್ಧ ಆಘಾತಕಾರಿ ವಿಷಯಗಳನ್ನು ಬಿಚ್ಚಿಟ್ಟ ಪೂನಂ ಪಾಂಡೆ

  ರಾಜ್ ಕುಂದ್ರ ಅಶ್ಲೀಲ ವಿಡಿಯೋಗಳಿಂದ ದಿನಕ್ಕೆ ಲಕ್ಷಾಂತರ ಹಣ ಗಳಿಸುತ್ತಿದ್ದರು. ಅಲ್ಲದೆ ಬ್ಲೂ ಫಿಲ್ಮ್ ಉದ್ಯಮವನ್ನು ಬಾಲಿವುಡ್‌ನಷ್ಟೇ ದೊಡ್ಡ ಉದ್ಯಮವಾಗಿ ಮಾಡಲು ರಾಜ್ ಕುಂದ್ರ ಪ್ಲಾನ್ ಮಾಡಿದ್ದರು. ಅಲ್ಲದೆ ಮುಂದಿನ ದಿನಗಳಲ್ಲಿ ಅಶ್ಲೀಲ ಚಿತ್ರಣವನ್ನು ಲೈವ್ ಸ್ಟ್ರೀಮ್ ಮಾಡುುವ ಬಗ್ಗೆಯೂ ರಾಜ್ ಕುಂದ್ರ ಯೋಜನೆ ಹಾಕಿಕೊಂಡಿದ್ದರು ಎನ್ನುವ ಮಹತ್ವದ ವಿಚಾರವನ್ನು ಮುಂಬೈ ಪೊಲೀಸರು ಬಹಿರಂಗ ಪಡಿಸಿದ್ದಾರೆ.

  ರಾಜ್ ಕುಂದ್ರ ಅವರನ್ನು ಮುಂಬೈ ಪೊಲೀಸರು ಜುಲೈ 19ರಂದು ರಾತ್ರಿ ಬಂಧಿಸಿದ್ದು, ಜುಲೈ 23ರ ವರೆಗೂ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ರಾಜ್ ಕುಂದ್ರ ಬಂಧನದ ಬಳಿಕ ಸಾಕಷ್ಟು ಸ್ಫೋಟಕ ಮಾಹಿತಿಗಳು ಬಹಿರಂಗವಾಗುತ್ತಿದೆ. ನೀಲಿ ಚಿತ್ರದಿಂದ ಹೇಗೆಲ್ಲ ವ್ಯವಹಾರ ಮಾಡುತ್ತಿದ್ದರು, ದೊಡ್ಡ ಮೊತ್ತದ ಹಣ ಹೇಗೆ ಸಂಪಾದನೆ ಮಾಡುತ್ತಿದ್ದರು ಎಂದು ರಾಜ್ ಕುಂದ್ರ ಮತ್ತು ಅವರ ಪಾರ್ಟನರ್ ನಡೆಸಿದ ವಾಟ್ಸಪ್ ಚಾಟ್‌ಗಳಿಂದ ಬಹಿರಂಗವಾಗಿದೆ.

  English summary
  Raj Kundra Bribed Rs 25 Lakhs to Crime Branch Officers To Avoid Arrest In The Pornography Case; Report.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X