ಅಶ್ಲೀಲ ವಿಡಿಯೋ ಪ್ರಕರಣ: ಇನ್ನಷ್ಟು ಆರೋಪಿಗಳ ಬಂಧನ, ಕುಂದ್ರಾಗೆ ಮತ್ತೆ ಸಂಕಷ್ಟ

ಅಶ್ಲೀಲ ವಿಡಿಯೋ ಪ್ರಕರಣ ಕಳೆದ ವರ್ಷ ಬಹುವಾಗಿ ಸದ್ದು ಮಾಡಿತ್ತು. ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಸೇರಿದಂತೆ ಇನ್ನೂ ಕೆಲವರು ಈ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದರು.

ರಾಜ್ ಕುಂದ್ರಾ ಬಂಧನದ ಬೆನ್ನಲ್ಲೆ ಅಶ್ಲೀಲ ವಿಡಿಯೋ ಹಾಗೂ ಶೃಂಗಾರದ ವಿಡಿಯೋ ನಡುವಿನ ಅಂತರ, ಕಾನೂನು, ತಿದ್ದುಪಡಿ ಇತರೆ ವಿಷಯಗಳ ಚರ್ಚೆಯೂ ಆಗಿತ್ತು. ಜೊತೆಗೆ ಹಾಟ್‌ ಕಂಟೆಂಟ್ ನೀಡುವ ಆನ್‌ಲೈನ್‌ ಅಪ್ಲಿಕೇಶನ್, ಒಟಿಟಿಗಳ ಬಗ್ಗೆಯೂ ಬಹುವಾಗಿ ಚರ್ಚೆಗಳಾದವು

ಸತತ ಎರಡು ತಿಂಗಳುಗಳ ಕಾಲ (62 ದಿನ) ಜೈಲಿನಲ್ಲಿದ್ದ ರಾಜ್ ಕುಂದ್ರಾ ಸೆಪ್ಟೆಂಬರ್ 21, 2021 ರಂದು ಜಾಮೀನಿನ ಮೇಲೆ ಬಿಡುಗಡೆ ಹೊಂದಿದರು. ಆ ನಂತರ ಈ ಪ್ರಕರಣ ಬಹುತೇಕ ತಣ್ಣಗಾಗಿತ್ತು. ಆದರೆ ಇದೀಗ ಮತ್ತೆ ಈ ಪ್ರಕರಣ ಮುನ್ನಲೆಗೆ ಬಂದಿದೆ. ಮುಂಬೈ ಪೊಲೀಸರು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಆರೋಪಿಗಳನ್ನು ಬಂಧಿಸಿದ್ದಾರೆ. ಆ ಮೂಲಕ ಮತ್ತೆ ರಾಜ್ ಕುಂದ್ರಾಗೆ ಸಂಕಷ್ಟ ಎದುರಾಗಿದೆ. ವಿಚಾರಣೆ ವೇಳೆ ರಾಜ್ ಕುಂದ್ರಾ ಹೆಸರು ಪ್ರಸ್ತಾಪವಾದರೆ ಜಾಮೀನಿನ ಮೇಲೆ ಹೊರಗಿರುವ ಕುಂದ್ರಾ ಅನ್ನು ಬಂಧಿಸಲು ಪೊಲೀಸರು ಮತ್ತೆ ನ್ಯಾಯಾಲಯದ ಮೊರೆ ಹೋಗಲಿದ್ದಾರೆ.

ನಾಲ್ಕು ಮಂದಿಯನ್ನು ಬಂಧಿಸಿದ ಪೊಲೀಸರು

ನಾಲ್ಕು ಮಂದಿಯನ್ನು ಬಂಧಿಸಿದ ಪೊಲೀಸರು

ರಾಜ್ ಕುಂದ್ರಾರನ್ನು ಬಂಧಿಸಿದ್ದ ಅಶ್ಲೀಲ ವಿಡಿಯೋ ಪ್ರಕರಣದ ತನಿಖೆಯ ಭಾಗವಾಗಿಯೇ ನಾಲ್ಕು ಮಂದಿ ಹೊಸ ಆರೋಪಿಗಳನ್ನು ಇದೀಗ ಬಂಧಿಸಲಾಗಿದೆ. ಮುಂಬೈನ ವರ್ಸೋವಾ ಹಾಗೂ ಬೋರಿವಲಿ ಏರಿಯಾಗಳಿಂದ ಕಾಸ್ಟಿಂಗ್ ಡೈರೆಕ್ಟರ್ ಸೇರಿದಂತೆ ಇನ್ನೂ ಕೆಲವರನ್ನು ಬಂಧಿಸಲಾಗಿದೆ. ಮುಂಬೈ ಪೊಲೀಸ್‌ನ ಕ್ರೈಂ ಬ್ರ್ಯಾಂಚ್‌ ಅಧಿಕಾರಿಗಳು ಈ ಬಂಧನಗಳನ್ನು ಮಾಡಿದ್ದಾರೆ.

ಹಾಟ್‌ಶಾಟ್ಸ್‌ಗಾಗಿ ಅಶ್ಲೀಲ ವಿಡಿಯೋ

ಹಾಟ್‌ಶಾಟ್ಸ್‌ಗಾಗಿ ಅಶ್ಲೀಲ ವಿಡಿಯೋ

ರಾಜ್ ಕುಂದ್ರಾ ಹಾಟ್‌ಶಾಟ್ಸ್ ಹೆಸರಿನ ಅಪ್ಲಿಕೇಶನ್ ಹೊಂದಿದ್ದು ಆ ಶುಲ್ಕಸಹಿತ ಅಪ್ಲಿಕೇಶನ್‌ಗಾಗಿ ಅಶ್ಲೀಲ ವಿಡಿಯೋಗಳನ್ನು ನಿರ್ಮಾಣ ಮಾಡಿ ಲಂಡನ್‌ನಲ್ಲಿನ ತಮ್ಮ ಸಹೋದರ ಸಂಬಂಧಿಯ ಸಂಸ್ಥೆಯ ಮೂಲಕ ಅಪ್ಲಿಕೇಶನ್‌ಗಳನ್ನು ಅಪ್‌ಲೋಡ್ ಮಾಡಿ ದಿನವೊಂದಕ್ಕೆ ಲಕ್ಷಾಂತರ ಹಣ ಸಂಪಾದನೆ ಮಾಡುತ್ತಿದ್ದರು ಎಂದು ಮುಂಬೈ ಪೊಲೀಸರು ಆರೋಪಿಸಿದ್ದರು. ರಾಜ್ ಕುಂದ್ರಾ ಬಂಧನಕ್ಕೆ ಮುನ್ನಾ ಮುಂಬೈನ ಒಂದು ಮನೆಯ ಮೇಲೆ ದಾಳಿ ಮಾಡಿ ಅಶ್ಲೀಲ ವಿಡಿಯೋ ನಿರ್ಮಾಣ ಮಾಡುತ್ತಿದ್ದ ಆರೋಪದಲ್ಲಿ ಮಾಡೆಲ್ ಗೆಹನಾ ವಸಿಷ್ಠ ಸೇರಿದಂತೆ ಹಲವರನ್ನು ಬಂಧಿಸಲಾಗಿತ್ತು.

ಶೆರ್ಲಿನ್ ಚೋಪ್ರಾ, ಪೂನಂ ಪಾಂಡೆ ಆರೋಪ

ಶೆರ್ಲಿನ್ ಚೋಪ್ರಾ, ಪೂನಂ ಪಾಂಡೆ ಆರೋಪ

ರಾಜ್ ಕುಂದ್ರಾ ಬಂಧನದ ಬಳಿಕ ಗ್ಲಾಮರಸ್ ವಿಡಿಯೋ, ಚಿತ್ರಗಳಿಗೆ ಖ್ಯಾತರಾದ ನಟಿ ಶೆರ್ಲಿನ್ ಚೋಪ್ರಾ ಹಾಗೂ ಪೂನಂ ಪಾಂಡೆ ಅವರುಗಳು ರಾಜ್ ಕುಂದ್ರಾ ವಿರುದ್ಧ ಹಲವು ಆರೋಪಗಳನ್ನು ಮಾಡಿದರು. ಕೆಲವು ನಟಿಯರು ಅತ್ಯಾಚಾರ ಯತ್ನದ ಆರೋಪಗಳನ್ನೂ ಮಾಡಿದರು. ಆದರೆ ನಟಿ ಗೆಹನಾ ವಸಿಷ್ಠ ಮಾತ್ರ ರಾಜ್ ಕುಂದ್ರಾ ಪರವಾಗಿ ಹೇಳಿಕೆಗಳನ್ನು ನೀಡಿದರು. ರಾಜ್ ಕುಂದ್ರಾ ಹೊರಗೆ ಬಂದ ಬಳಿಕ ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿದ್ದಕ್ಕೆ ಪೂನಂ ಪಾಂಡೆ ವಿರುದ್ಧ ಮಾನ ನಷ್ಟ ಮೊಕದ್ದಮೆ ಹೂಡಿದರು.

ಪತ್ರಿಕಾ ಹೇಳಿಕೆ ಹೊರಡಿಸಿದ್ದ ರಾಜ್ ಕುಂದ್ರಾ

ಪತ್ರಿಕಾ ಹೇಳಿಕೆ ಹೊರಡಿಸಿದ್ದ ರಾಜ್ ಕುಂದ್ರಾ

ಜಾಮೀನಿನ ಮೇಲೆ ಬಿಡುಗಡೆ ಆದ ಬಳಿಕ ಪತ್ರಿಕಾ ಹೇಳಿಕೆ ಹೊರಡಿಸಿದ ರಾಜ್ ಕುಂದ್ರಾ, ''ನಾನು ತಪ್ಪು ಮಾಡಿಲ್ಲ ಹಾಗಾಗಿ ನಾಚಿಕೆಯಿಂದ ಮುಖ ಮುಚ್ಚಿಕೊಳ್ಳುವ ಕಾರ್ಯ ಮಾಡುವುದಿಲ್ಲ. ನಾನು ನನ್ನ ಜೀವನದಲ್ಲಿ ಅಶ್ಲೀಲ ವಿಡಿಯೋ ನಿರ್ಮಾಣ, ಹಂಚಿಕೆ ಕಾರ್ಯವನ್ನು ಮಾಡಿಲ್ಲ. ನನ್ನ ಬಂಧನದ ಇಡೀಯ ಎಪಿಸೋಡ್ ಒಂದು ವ್ಯವಸ್ಥಿತ ಷಡ್ಯಂತ್ರ. ನನಗೆ ನ್ಯಾಯಾಂಗದಲ್ಲಿ ವಿಶ್ವಾಸವಿದೆ. ನಾನು ನ್ಯಾಯಾಲಯದ ಮೂಲಕವೇ ಈ ವಿಷಯವನ್ನು ಇತ್ಯರ್ಥಗೊಳಿಸಿಕೊಳ್ಳುತ್ತೇನೆ'' ಎಂದಿದ್ದರು.

More from Filmibeat

English summary
Raj Kundra Pornography case: Mumbai police arrested four people of Mumbai. One of them is a casting director.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X