For Quick Alerts
  ALLOW NOTIFICATIONS  
  For Daily Alerts

  ಅಶ್ಲೀಲ ವಿಡಿಯೋ ಕೇಸ್: ರಾಜ್ ಕುಂದ್ರಾ ಜೊತೆ ಶಿಲ್ಪಾ ಶೆಟ್ಟಿ ಪಾತ್ರ ಇದ್ಯಾ?

  |

  ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ಮುಂಬೈ ಉದ್ಯಮಿ, ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಬಂಧನವಾಗಿದೆ. ಜುಲೈ 19 ರಂದು ರಾತ್ರಿ ಮುಂಬೈ ಪೊಲೀಸರು ರಾಜ್ ಕುಂದ್ರಾರನ್ನು ಅರೆಸ್ಟ್ ಮಾಡಿದ್ದರು. ಈ ಕೇಸ್ ವಿಚಾರಣೆ ನಡೆಸಿದ ನ್ಯಾಯಾಲಯ ಜುಲೈ 23ರವರೆಗೂ ಕುಂದ್ರಾರನ್ನು ಪೋಲಿಸ್ ವಶಕ್ಕೆ ನೀಡಿದೆ.

  ರಾಜ್ ಕುಂದ್ರಾ ಜೊತೆ ಸ್ನೇಹಿತ ಹಾಗು ಆಪ್ತನಾಗಿದ್ದ ರೈನ್ ಥರ್ಪ್ ಸಹ ಅರೆಸ್ಟ್ ಆಗಿದ್ದು, ಮತ್ತಷ್ಟು ಜನರ ಹೆಸರು ಈ ಕೇಸ್‌ನಲ್ಲಿ ಕೇಳಿ ಬರ್ತಿದೆ. ಸ್ವತಃ ಮುಂಬೈ ಪೊಲೀಸ್ ಆಯುಕ್ತ ನೀಡಿರುವ ಮಾಹಿತಿ ಪ್ರಕಾರ, ರಾಜ್ ಕುಂದ್ರಾ ವಿರುದ್ಧ ಪ್ರಮುಖ ಸಾಕ್ಷ್ಯಗಳಿವೆ. ಇದೀಗ, ಈ ಕೇಸ್‌ನಲ್ಲಿ ನಟಿ ಶಿಲ್ಪಾ ಶೆಟ್ಟಿ ಪಾತ್ರ ಏನಾದರೂ ಇದ್ಯಾ? ಕುಂದ್ರಾ ಪತ್ನಿಗೆ ಏನಾದರೂ ಕಂಟಕ ಆಗಲಿದ್ಯಾ ಎಂಬ ಅನುಮಾನ ಕಾಡ್ತಿದೆ. ಆದರೆ, ಈ ಕುರಿತು ಪೊಲೀಸರು ಸ್ಪಷ್ಟನೆ ಕೊಟ್ಟಿದ್ದಾರೆ. ಮುಂದೆ ಓದಿ...

  ರಾಜ್ ಕುಂದ್ರ ಬ್ಲ್ಯೂ ಫಿಲ್ಮ್ ದಂಧೆ ಪ್ರಕರಣ; ಪೂನಂ ಪಾಂಡೆ - ಶರ್ಲಿನ್ ಚೋಪ್ರಾ ನಂಟುರಾಜ್ ಕುಂದ್ರ ಬ್ಲ್ಯೂ ಫಿಲ್ಮ್ ದಂಧೆ ಪ್ರಕರಣ; ಪೂನಂ ಪಾಂಡೆ - ಶರ್ಲಿನ್ ಚೋಪ್ರಾ ನಂಟು

  ನಟಿ ಶಿಲ್ಪಾ ಶೆಟ್ಟಿ ಸೇಫ್

  ನಟಿ ಶಿಲ್ಪಾ ಶೆಟ್ಟಿ ಸೇಫ್

  ಅಶ್ಲೀಲ ವಿಡಿಯೋ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ರಾಜ್ ಕುಂದ್ರಾ ವಿರುದ್ಧ ಪ್ರಮುಖ ಸಾಕ್ಷ್ಯಗಳಿವೆ ಎಂದು ಪೊಲೀಸ್ ಇಲಾಖೆ ಹೇಳಿದೆ. ಹಾಗಾಗಿ, ಪತ್ನಿಗೂ ಈ ಕೇಸ್‌ನಲ್ಲಿ ನಂಟಿದ್ಯಾ ಎಂಬ ಅನುಮಾನ ಇತ್ತು. ಈ ಬಗ್ಗೆ ಮುಂಬೈ ಪೊಲೀಸ್ ಆಯುಕ್ತ ಪ್ರತಿಕ್ರಿಯಿಸಿ, ''ಶಿಲ್ಪಾ ಶೆಟ್ಟಿ ಅವರ ಪಾತ್ರ ಇರುವ ಬಗ್ಗೆ ನಮಗೆ ಯಾವುದೇ ಸಾಕ್ಷ್ಯ ಇಲ್ಲ'' ಎಂದಿದ್ದಾರೆ.

  ಸಂತ್ರಸ್ಥರಿದ್ದರೆ ಮುಂದೆ ಬನ್ನಿ

  ಸಂತ್ರಸ್ಥರಿದ್ದರೆ ಮುಂದೆ ಬನ್ನಿ

  ''ಶಿಲ್ಪಾ ಶೆಟ್ಟಿ ವಿರುದ್ಧ ಯಾವುದೇ ಸಾಕ್ಷ್ಯ ಇಲ್ಲ. ತನಿಖೆ ಮುಂದುವರಿಯುತ್ತಿದೆ. ಈ ಪ್ರಕರಣದಲ್ಲಿ ಯಾರಾದರೂ ಸಂತ್ರಸ್ಥರಿದ್ದರೆ ದಯವಿಟ್ಟು ಮುಂಬೈ ಪೊಲೀಸರನ್ನು ಸಂಪರ್ಕಿಸಿ. ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು'' ಎಂದು ಕಮಿಷನರ್ ಹೇಮಂತ್ ವಿನಂತಿಸಿದ್ದಾರೆ.

  ಬ್ಲ್ಯೂ ಫಿಲ್ಮ್ ದಂಧೆ ಪ್ರಕರಣ; ಜುಲೈ 23ರವರೆಗೂ ಪೊಲೀಸ್ ಕಸ್ಟಡಿಯಲ್ಲಿ ರಾಜ್ ಕುಂದ್ರಬ್ಲ್ಯೂ ಫಿಲ್ಮ್ ದಂಧೆ ಪ್ರಕರಣ; ಜುಲೈ 23ರವರೆಗೂ ಪೊಲೀಸ್ ಕಸ್ಟಡಿಯಲ್ಲಿ ರಾಜ್ ಕುಂದ್ರ

  ಕುಂದ್ರಾ ಮಾಡಿದ್ದು ಅಶ್ಲೀಲ ಸಿನಿಮಾ ಅಲ್ಲ

  ಕುಂದ್ರಾ ಮಾಡಿದ್ದು ಅಶ್ಲೀಲ ಸಿನಿಮಾ ಅಲ್ಲ

  ರಾಜ್ ಕುಂದ್ರಾ ಅಶ್ಲೀಲ ಸಿನಿಮಾ ಮಾಡುವ ಜೊತೆಗೆ ಸಿನಿಮಾದಲ್ಲಿ ನಟಿಸಿದ ನಟಿಯರನ್ನು ಶೋಷಿಸುತ್ತಾರೆ ಎಂಬ ಆರೋಪ ಇದೆ. ಈ ಪ್ರಕರಣದ ಬಗ್ಗೆ ಬಾಲಿವುಡ್ ನಟಿ ಗೆಹೆನಾ ವಸಿಷ್ಠ್ ಪ್ರತಿಕ್ರಿಯಿಸಿ, ''ರಾಜ್ ಕುಂದ್ರಾ ಅಶ್ಲೀಲ ಸಿನಿಮಾ ಮಾಡಿಲ್ಲ, ಅದು ಬೋಲ್ಡ್ ಸಿನಿಮಾ. ನಾನು ಅವರ ಜೊತೆ ಮೂರು ಸಿನಿಮಾ ಮಾಡಿದ್ದೇನೆ. ಶೋಷಣೆಯೂ ಮಾಡಿಲ್ಲ. ಸರಿಯಾದ ವೇತನವೂ ಕೊಟ್ಟಿದ್ದಾರೆ. ಇದು ನಟಿಯರ ಸಮ್ಮತಿಯಿಂದಲೇ ಆಗಿರುವುದು'' ಎಂದಿದ್ದಾರೆ.

  ಪತಿ ಅರೆಸ್ಟ್ ಆದ ಬಳಿಕ ಮೊದಲ ಬಾರಿಗೆ ಮೌನ ಮುರಿದ ಶಿಲ್ಪಾ ಶೆಟ್ಟಿ
  2021 ಫೆಬ್ರವರಿಯಲ್ಲಿ ದೂರು ದಾಖಲು

  2021 ಫೆಬ್ರವರಿಯಲ್ಲಿ ದೂರು ದಾಖಲು

  ''ಅಶ್ಲೀಲ ಚಿತ್ರಗಳ ನಿರ್ಮಾನ ಮತ್ತು ಅವುಗಳನ್ನು ಕೆಲವು ಅಪ್ಲಿಕೇಶನ್‌ಗಳ ಮೂಲಕ ಪ್ರಕಟಿಸುವ ಬಗ್ಗೆ ಫೆಬ್ರವರಿ 2021 ರಲ್ಲಿ ಮುಂಬೈ ಅಪರಾಧ ವಿಭಾಗದಲ್ಲಿ ಪ್ರಕರಣವೊಂದು ದಾಖಲಾಗಿದೆ. ಈ ಕೇಸ್‌ನಲ್ಲಿ ರಾಜ್ ಕುಂದ್ರಾ 19/7/21 ರಂದು ಬಂಧಿಸಿದ್ದೇವೆ, ಪ್ರಾಥಮಿಕ ತನಿಖೆ ವೇಳೆ ರಾಜ್ ಕುಂದ್ರಾ ಈ ಕೇಸ್‌ನಲ್ಲಿ ಪ್ರಮುಖ ಆರೋಪಿ ಎಂದು ತಿಳಿದಿದೆ'' ಎಂದು ಪೊಲೀಸರು ಮಾಹಿತಿ ನೀಡಿದ್ದರು.

  English summary
  Raj Kundra Case: No Evidence Yet Against Shilpa Shetty says Mumbai Police.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X