For Quick Alerts
  ALLOW NOTIFICATIONS  
  For Daily Alerts

  ಅಶ್ಲೀಲ ವಿಡಿಯೋಗಳಿಂದ ಐದು ತಿಂಗಳಲ್ಲಿ ಕೋಟ್ಯಂತರ ಗಳಿಸಿದ್ದ ರಾಜ್ ಕುಂದ್ರ

  |

  ಉದ್ಯಮಿ ರಾಜ್ ಕುಂದ್ರಾ ಬಂಧನ ಬಾಲಿವುಡ್‌ನಲ್ಲಿ ಸಂಚಲನ ಮೂಡಿಸಿದೆ. ರಾಜ್ ಕುಂದ್ರಾ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಭಿನ್ನ ಮಾದರಿಯ ಅಭಿಪ್ರಾಯಗಳು ಕೇಳಿಬರುತ್ತಿವೆ.

  ರಾಜ್ ಕುಂದ್ರಾ ಅನ್ನು ಬಂಧಿಸಿರುವ ಮುಂಬೈ ಪೊಲೀಸರು ಕುಂದ್ರಾರ ಬ್ಯಾಂಕ್ ಖಾತೆಗಳನ್ನು ಸಹ ಸೀಝ್ ಮಾಡಿದ್ದು ಅವುಗಳ ತನಿಖೆ ನಡೆಸಲೆಂದು ವಿಶೇಷ ಆಡಿಟರ್ ಅನ್ನು ನೇಮಿಸಿಕೊಂಡಿದ್ದಾರೆ.

  ವಿಶೇಷ ಆಡಿಟರ್ ಪೊಲೀಸರಿಗೆ ನೀಡಿರುವ ಮಾಹಿತಿಯಂತೆ ರಾಜ್ ಕುಂದ್ರಾ, ಅಶ್ಲೀಲ ವಿಡಿಯೋಗಳ ಮೂಲಕ ಕೇವಲ ಐದೇ ತಿಂಗಳಲ್ಲಿ 1.17 ಕೋಟಿ ರು. ಹಣ ಸಂಪಾದನೆ ಮಾಡಿದ್ದರಂತೆ. ಕಳೆದ ವರ್ಷ ಆಗಸ್ಟ್‌ನಿಂದ ಡಿಸೆಂಬರ್ ತಿಂಗಳಲ್ಲಿ ಭಾರಿ ದೊಡ್ಡ ಮೊತ್ತವನ್ನೇ ಕುಂದ್ರಾ ಈ ವಿಡಿಯೋಗಳಿಂದ ಸಂಪಾದನೆ ಮಾಡಿದ್ದಾರೆ.

  ಹಣ ತೆತ್ತು ವಿಡಿಯೋ ನೋಡುತ್ತಿದ್ದರು

  ಹಣ ತೆತ್ತು ವಿಡಿಯೋ ನೋಡುತ್ತಿದ್ದರು

  ಕುಂದ್ರಾ ಒಡೆತನದ ಆಪ್‌ಗಳು ಗೂಗಲ್ ಪ್ಲೇ ಸ್ಟೋರ್ ಹಾಗೂ ಆಪಲ್ ಸ್ಟೋರ್‌ನಲ್ಲಿ ಲಭ್ಯವಿದ್ದು ಲಕ್ಷಾಂತರ ಮಂದಿ ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ ಮತ್ತು ಚಂದಾದಾರಿ ವಿಡಿಯೋಗಳನ್ನು ನೋಡುತ್ತಿದ್ದರು. ಇದರಿಂದಲೂ ದೊಡ್ಡ ಮೊತ್ತದ ಹಣವನ್ನು ಕುಂದ್ರಾ ಸಂಪಾದನೆ ಮಾಡುತ್ತಿದ್ದರು.

  34 ಕೋಟಿ ಗಳಿಸುವ ಗುರಿ ಹೊಂದಲಾಗಿತ್ತು

  34 ಕೋಟಿ ಗಳಿಸುವ ಗುರಿ ಹೊಂದಲಾಗಿತ್ತು

  ಕುಂದ್ರಾ ಒಡೆತನದ ಆಪ್‌ಗಳಿಂದ ಬರುತ್ತಿದ್ದ ಲಾಭವು ದಿನೇ-ದಿನೇ ಹೆಚ್ಚಾಗುತ್ತಲೇ ಇತ್ತು. 2023ರ ವೇಳೆಗೆ 34 ಕೋಟಿ ಲಾಭ ಪಡೆಯುವ ಗುರಿಯನ್ನು ರಾಜ್ ಕುಂದ್ರಾ ಹೊಂದಿದ್ದರು. ಪ್ರತಿದಿನ 6 ರಿಂದ 8 ಲಕ್ಷ ಹಣವನ್ನು ಕುಂದ್ರಾ ಗಳಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.

  ಕುಂದ್ರಾ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಪಾತ್ರವೇನು?

  ಕುಂದ್ರಾ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಪಾತ್ರವೇನು?

  ಈ ಪ್ರಕರಣದಲ್ಲಿ ರಾಜ್ ಕುಂದ್ರಾ ಪತ್ನಿ, ನಟಿ ಶಿಲ್ಪಾ ಶೆಟ್ಟಿ ಪಾತ್ರವೇನು ಎಂಬ ಬಗ್ಗೆಯೂ ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ವರೆಗೆ ಶಿಲ್ಪಾ ಶೆಟ್ಟಿಗೆ ಯಾವುದೇ ಸಮನ್ಸ್ ನೀಡಲಾಗಿಲ್ಲವಾದರೂ ಶಿಲ್ಪಾ ಶೆಟ್ಟಿಗೆ ಈ ಪ್ರಕರಣದಲ್ಲಿ ಕ್ಲೀನ್ ಚಿಟ್ ನೀಡಿಲ್ಲ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ. ಹಾಗಾಗಿ ಶಿಲ್ಪಾ ಶೆಟ್ಟಿಗೂ ಪ್ರಕರಣಕ್ಕೂ ಸಂಬಂಧವಿಲ್ಲ ಎಂಬ ನಿರ್ಣಯಕ್ಕೆ ಇನ್ನೂ ಬರುವಂತಿಲ್ಲ.

  ನಟಿಯರಿಂದ ಭಿನ್ನ-ಭಿನ್ನ ಹೇಳಿಕೆಗಳು

  ನಟಿಯರಿಂದ ಭಿನ್ನ-ಭಿನ್ನ ಹೇಳಿಕೆಗಳು

  ರಾಜ್ ಕುಂದ್ರಾ ಪ್ರಕರಣದಲ್ಲಿ ಹಲವು ನಟಿಯರು ಹಲವು ರೀತಿಯಾಗಿ ಬಹಿರಂಗ ಹೇಳಿಕೆಗಳನ್ನು ಈಗಾಗಲೇ ನೀಡಿದ್ದಾರೆ. ಶೆರ್ಲಿನ್ ಚೋಪ್ರಾ ಹಾಗೂ ಪೂನಂ ಪಾಂಡೆ ಅವರುಗಳು ರಾಜ್ ಕುಂದ್ರಾ ವಿರುದ್ಧವಾಗಿ ಹೇಳಿಕೆ ನೀಡಿದ್ದರೆ ನಟಿ ಗೆಹನಾ ವಸಿಷ್ಠ ರಾಜ್ ಕುಂದ್ರಾ ಪರವಾಗಿ ಹೇಳಿಕೆ ನೀಡಿದ್ದಾರೆ. ಮುಂಬೈ ಪೊಲೀಸರ ವಶದಲ್ಲಿರುವ ರಾಜ್ ಕುಂದ್ರಾ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾ ಆಗಿದ್ದು, ಇನ್ನೂ ಕೆಲವು ದಿನ ಅವರು ಜೈಲು ವಾಸ ಅನುಭವಿಸಲೇ ಬೇಕಿದೆ.

  English summary
  Raj Kundra earned 1.17 crore rs in just five months from indecent video business. He aimed to make 32 crore by 2023.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X