ಪೋರ್ನ್ ವಿಡಿಯೋಗಳಿಂದ ದಿನವೂ ಲಕ್ಷಾಂತರ ಹಣ ಗಳಿಸುತ್ತಿದ್ದ ಕುಂದ್ರಾ

ಅಶ್ಲೀಲ ವಿಡಿಯೋಗಳನ್ನು ನಿರ್ಮಾಣ ಮಾಡಿ ಮೊಬೈಲ್ ಆಪ್‌ಗಳ ಮೂಲಕ ಪ್ರಸಾರ ಮಾಡುತ್ತಿದ್ದ ಆರೋಪದಲ್ಲಿ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಅನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಅಶ್ಲೀಲ ವಿಡಿಯೋಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮಾಡಿದ್ದಾರೆ ಎನ್ನಲಾದ ವಾಟ್ಸ್‌ಆಪ್‌ ಸಂದೇಶವೂ ಲೀಕ್ ಆಗಿದ್ದು, ರಾಜ್ ಕುಂದ್ರಾ ಬಂಧನಕ್ಕೆ ಇದೇ ಮೂಲ ಸಾಕ್ಷ್ಯವೂ ಆಗಿದೆ. ಆದರೆ ರಾಜ್ ಕುಂದ್ರಾ ತಾವು ಯಾವ ತಪ್ಪನ್ನೂ ಮಾಡಿಲ್ಲವೆಂದು ಹೇಳುತ್ತಿದ್ದಾರೆ.

ರಾಜ್ ಕುಂದ್ರಾ ಬಂಧನದ ನಂತರ ಕೆಲವು ಮಾಡೆಲ್‌ಗಳು, ನಟಿಯರು ರಾಜ್ ಕುಂದ್ರಾ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. ಕೆಲವರು ರಾಜ್ ಪರವಾಗಿಯೂ ಮಾತನಾಡಿದ್ದಾರೆ. ಈ ನಡುವೆ ಈ ರೀತಿಯ ಅಶ್ಲೀಲ ವಿಡಿಯೋಗಳಿಂದ ರಾಜ್ ಕುಂದ್ರಾ ಭಾರಿ ಮೊತ್ತದ ಹಣವನ್ನು ಸಂಪಾದನೆ ಮಾಡುತ್ತಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.

ಬ್ಯಾಂಕ್ ದಾಖಲೆ ವಶಪಡಿಸಿಕೊಂಡಿದ್ದೇವೆ: ಜಂಟಿ ಆಯುಕ್ತ

ಬ್ಯಾಂಕ್ ದಾಖಲೆ ವಶಪಡಿಸಿಕೊಂಡಿದ್ದೇವೆ: ಜಂಟಿ ಆಯುಕ್ತ

ಮುಂಬೈ ಪೊಲೀಸ್ ಕ್ರೈಂ ಬ್ರ್ಯಾಂಚ್‌ನ ಜಂಟಿ ಆಯುಕ್ತ ಮಿಲಿಂದ್ ಬಾರಂಬೆ ಮಾತನಾಡಿ, ''ಈ ರೀತಿಯ ಅಶ್ಲೀಲ ವಿಡಿಯೋಗಳಿಂದಲೇ ರಾಜ್ ಕುಂದ್ರಾ ಪ್ರತಿದಿನವೂ 6 ರಿಂದ 8 ಲಕ್ಷ ಹಣ ಗಳಿಸುತ್ತಿದ್ದ. ಈ ಕುರಿತಂತೆ ಬ್ಯಾಂಕ್ ದಾಖಲೆಗಳನ್ನು ವಶಪಡಿಸಿಕೊಂಡಿದ್ದೇವೆ'' ಎಂದಿದ್ದಾರೆ.

ಲಂಡನ್‌ ಸಂಸ್ಥೆಯ ಮೂಲಕ ವಿಡಿಯೋ ಅಪ್‌ಲೋಡ್

ಲಂಡನ್‌ ಸಂಸ್ಥೆಯ ಮೂಲಕ ವಿಡಿಯೋ ಅಪ್‌ಲೋಡ್

'ಇಲ್ಲಿ ನಿರ್ಮಿಸಲಾದ ವಿಡಿಯೋಗಳನ್ನು ಲಂಡನ್‌ಗೆ 'ವೀ ಟ್ರಾನ್‌ಸ್ಫರ್‌' ಮೂಲಕ ಕಳಿಸಿ ಅಲ್ಲಿ ತಮ್ಮ ಸಹೋದರ ಸಂಬಂಧಿ ಪ್ರದೀಪ್ ಬಕ್ಷಿ ಒಡೆತನದ ಕೆನ್‌ರಿನ್ ಸಂಸ್ಥೆ ಮೂಲಕ 'ಹಾಟ್‌ಶಾಟ್ಸ್' ಎಂಬ ಆಪ್‌ಗೆ ಅಪ್‌ಲೋಡ್ ಮಾಡಿಸಲಾಗುತ್ತಿತ್ತು. ಆಪ್‌ನ ಬಳಕೆದಾರರು ಹಣ ತೆತ್ತು ಆ ವಿಡಿಯೋಗಳನ್ನು ನೋಡುತ್ತಿದ್ದರು'' ಎಂದು ಮಾಹಿತಿ ನೀಡಿದ್ದಾರೆ ಆಯುಕ್ತ ಮಿಲಿಂದ್.

ಪ್ರತಿದಿನ 6 ರಿಂದ 8 ಲಕ್ಷ ಹಣ ಸಂಪಾದನೆ

ಪ್ರತಿದಿನ 6 ರಿಂದ 8 ಲಕ್ಷ ಹಣ ಸಂಪಾದನೆ

''ಈ ವ್ಯವಹಾರದಿಂದ ರಾಜ್ ಕುಂದ್ರಾಗೆ ಪ್ರತಿದಿನವೂ 6 ರಿಂದ 8 ಲಕ್ಷ ಹಣ ಬರುತ್ತಿತ್ತು. ಈ ಬಗ್ಗೆ ಬ್ಯಾಂಕ್ ದಾಖಲೆಗಳನ್ನು ಸಹ ವಶಪಡಿಸಿಕೊಂಡಿದ್ದೇವೆ. ಈ ವರೆಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಬ್ಯಾಂಕ್ ಖಾತೆಗಳಿಂದ 7.20 ಕೋಟಿ ಹಣ ವಶಪಡಿಸಿಕೊಳ್ಳಲಾಗಿದೆ'' ಎಂದಿದ್ದಾರೆ ಪೊಲೀಸ್ ಜಂಟಿ ಆಯುಕ್ತ ಮಿಲಿಂದ್.

Recommended Video

ಇಂದ್ರಜಿತ್ ಮೀಟರ್ ನ ಮೆಚ್ಚಲೇ ಬೇಕು
ಕೆಲವು ನಟಿಯರು ದೂರು ನೀಡಿದ್ದಾರೆ: ಜಂಟಿ ಪೊಲೀಸ್ ಆಯುಕ್ತ ಮಿಲಿಂದ್

ಕೆಲವು ನಟಿಯರು ದೂರು ನೀಡಿದ್ದಾರೆ: ಜಂಟಿ ಪೊಲೀಸ್ ಆಯುಕ್ತ ಮಿಲಿಂದ್

''ರಾಜ್ ಕುಂದ್ರಾ ಬಂಧನದ ವೇಳೆ ಕೆಲವು ವಿಡಿಯೋಗಳು ಸಹ ದೊರೆತಿವೆ. ಜೊತೆಗೆ ಈ ವ್ಯವಹಾರದ ಬಗ್ಗೆ ರಾಜ್ ಕುಂದ್ರಾ ಮಾಡಿದ್ದ ವಾಟ್ಸ್‌ಆಪ್ ಸಂಭಾಷಣೆ ಸಹ ದೊರೆತಿದೆ. ಪಾತ್ರಗಳಿಗಾಗಿ ಕೇಳಿಕೊಂಡು ಬರುವ ನಟಿಯರಿಗೆ ಅಶ್ಲೀಲ ಉಡುಪು ಧರಿಸಿ ನಟಿಸುವಂತೆ ಹೇಳಲಾಗುತ್ತಿತ್ತು. ಅದನ್ನು ವಿಡಿಯೋ ಮಾಡಿಕೊಂಡು ಅವರ ಇಚ್ಛೆಗೆ ವಿರುದ್ಧವಾಗಿ ಅವುಗಳನ್ನು ಹಾಟ್‌ಶಾಟ್ಸ್‌ ಆಪ್‌ನಲ್ಲಿ ಪ್ರಸಾರ ಮಾಡಲಾಗುತ್ತಿತ್ತು. ಈ ಬಗ್ಗೆ ಕೆಲವು ನಟಿಯರು ದೂರು ಸಹ ನೀಡಿದ್ದಾರೆ'' ಎಂದು ಮಾಹಿತಿ ನೀಡಿದ್ದಾರೆ ಮಿಲಿಂದ್.

More from Filmibeat

English summary
Mumbai police said Raj Kundra use to earn 6 to 8 lakh per day by this video business. His bank accounts were seized by police now.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X