ಬ್ಲೂ ಫಿಲ್ಮ್ ಆರೋಪಿ ರಾಜ್ ಕುಂದ್ರ ಚಿತ್ರದಲ್ಲಿ ಶಿಲ್ಪಾ ಶೆಟ್ಟಿ ತಂಗಿ ನಟಿಸಲು ಒಪ್ಪಿಕೊಂಡಿದ್ರಾ?
ಬ್ಲೂ ಫಿಲ್ಮ್ ದಂಧೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರ ಬಗ್ಗೆ ಶಾಕಿಂಗ್ ವಿಚಾರಗಳು ಬಹಿರಂಗವಾಗುತ್ತಿವೆ. ಈ ಪ್ರಕರಣದಲ್ಲಿ ಅನೇಕರ ಹೆಸರು ಕೇಳಿಬರುತ್ತಿದೆ. ಬ್ಲೂ ಫಿಲ್ಮ್ ದಂಧೆ ಪ್ರಕರಣದಲ್ಲಿ ನಟಿ, ಮಾಡೆಲ್ ಗೆಹನಾ ವಸಿಸ್ತ್ ಅವರನ್ನು ಈ ವರ್ಷದ ಆರಂಭದಲ್ಲಿ ಬಂಧಿಸಲಾಗಿತ್ತು. ಜಾಮೀನ ಮೇಲೆ ಹೊರಬಂದರೂ ಇದೀಗ ಮತ್ತೆ ಆಕೆಯ ಹೆಸರು ಸದ್ದು ಮಾಡುತ್ತಿದೆ.
ರಾಜ್ ಕುಂದ್ರ ಬಂಧನದ ಬಳಿಕ ಪ್ರತಿಕ್ರಿಯೆ ನೀಡಿರುವ ಗೆಹನಾ, ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿಯನ್ನು ನೀಲಿ ಚಿತ್ರದಲ್ಲಿ ಆಕ್ಟ್ ಮಾಡಿಸಲು ರಾಜ್ ಕುಂದ್ರ ಮುಂದಾಗಿದ್ರು ಎನ್ನುವ ಶಾಕಿಂಗ್ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.
ಹಿಂದಿ ಪತ್ರಿಕೆ ಜೊತೆ ಮಾತನಾಡಿರುವ ಗೆಹನಾ, "ಬಂಧನಕ್ಕೊಳಗಾಗುವ ಕೆಲವು ದಿನಗಳ ಮೊದಲು ರಾಜ್ ಕುಂದ್ರ ಕಚೇರಿಗೆ ಭೇಟಿ ನೀಡಿದ್ದೆ. ಅಲ್ಲಿ ಬಾಲಿಫೇಮ್ ಹೆಸರಿನ ಆಪ್ ಪ್ರಾರಂಭಿಸಲು ಯೋಜಿಸುತ್ತಿದ್ದರು. ರಿಯಾಲಿಟಿ ಶೋ, ಚಾಟ್ ಶೋ, ಮ್ಯೂಸಿಕ್ ವಿಡಿಯೋಗಳು ಮತ್ತು ಬೋಲ್ಡ್ ಅಲ್ಲದ ಸಿನಿಮಾಗಳನ್ನು ಪ್ರದರ್ಶಿಸುವ ಆಪ್ ಆದಾಗಿತ್ತು.

"ಕೆಲವು ಸ್ಕ್ರಿಪ್ಟ್ ಗಳನ್ನು ಚರ್ಚೆ ಮಾಡಿದ್ವಿ. ಅದರಲ್ಲಿ ಒಂದು ಚಿತ್ರದಲ್ಲಿ ಶಮಿತಾ ಶೆಟ್ಟಿ ಅವರು ನಟಿಸುವುದೆಂದು ಪ್ಲಾನ್ ಆಗಿತ್ತು. ಈ ಸಿನಿಮಾವನ್ನು ನಾನು ನಿರ್ದೇಶನ ಮಾಡಬೇಕಿತ್ತು. ಇದಕ್ಕೆ ಶಮಿತಾ ಸಹ ಒಪ್ಪಿಕೊಂಡಿದ್ದರು" ಎಂದು ಆರೋಪಿಸಿದ್ದಾರೆ.
ರಾಜ್ ಕುಂದ್ರ ಬಂಧನದ ಬಳಿಕ ಪೂನಂ ಪಾಂಡೆ, ಶರ್ಲಿನ್ ಚೋಪ್ರಾ, ಗೆಹನಾ ವಸಿಸ್ತ್ ಹೆಸರು ಜೋರಾಗಿ ಸದ್ದು ಮಾಡುತ್ತಿದೆ. ಇದೇ ಪ್ರಕರಣದಲ್ಲಿ ಗೆಹನಾ ಅವರನ್ನು ಫೆಬ್ರವರಿಯಲ್ಲಿ ಬಂಧಿಸಲಾಗಿತ್ತು. ಐದು ತಿಂಗಳ ಕಾಲ ಜೈಲಿನಲ್ಲೇ ಕಳೆದಿದ್ದ ಗೆಹನಾ ಬಳಿಕ ಜಾಮೀನಿನ ಮೇಲೆ ಹೊರಬಂದಿದ್ದಾರೆ.
Recommended Video
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೆಹನಾ, "ನಾನು ಮಾಡದ ಅಪರಾಧಕ್ಕೆ ಅಮೂಲ್ಯವಾದ ಐದು ತಿಂಗಳು ಜೈಲಿನಲ್ಲಿ ಕಳೆದೆ. ನನ್ನ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ. ನನ್ನ ಮೊಬೈಲ್, ಲ್ಯಾಪ್ ಟ್ಯಾಪ್ ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ನನ್ನ ಜೀವನವನ್ನು ನರಕಕ್ಕೆ ತಳ್ಳಲಾಗಿದೆ. ನಾನು ಜೈಲಿನಿಂದ ಹೊರಬಂದ ಬಳಿಕ ನನ್ನ ಬಳಿ ಹಣವಿರಲಿಲ್ಲ. ನಾನು ಹೃದಯಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದೇನೆ. ನಾನು ಆಸ್ಪತ್ರೆಗೂ ದಾಖಲಾಗಿದ್ದೆ" ಎಂದು ತನ್ನ ಅಳಲು ತೋಡಿಕೊಂಡಿದ್ದರು.


Click it and Unblock the Notifications











