ನೀಲಿ ಚಿತ್ರ ನಿರ್ಮಾಣಕ್ಕೂ ನನಗೂ ಸಂಬಂಧವಿಲ್ಲ: ಶಿಲ್ಪಾ ಶೆಟ್ಟಿ ಪತಿ ರಾಜ್‌ಕುಂದ್ರಾ!

ಇತ್ತೀಚೆಗೆ ಬಾಲಿವುಡ್‌ನಲ್ಲಿ ಅತಿ ಹೆಚ್ಚಾಗಿ ಸದ್ದು ಮಾಡಿದ್ದ ವಿವಾದ ಅಂದ್ರೆ ನಟ ಶಾರುಖ್ ಖಾನ್ ಪುತ್ರ ಆರ್ಯನ್‌ ಖಾನ್‌ ಡ್ರಗ್‌ ಪ್ರಕರಣ. ಅದು ಬಿಟ್ಟರೆ ಶಿಲ್ಪಾ ಶೆಟ್ಟಿ ಪತಿ ರಾಜ್‌ಕುಂದ್ರಾ ನೀಲಿ ಚಿತ್ರಗಳ ನಿರ್ಮಾಣ ವಿಚಾರದಲ್ಲಿ ಜೈಲು ಸೇರಿ ಸದ್ಯ ಜಾಮೀನು ಪಡೆದು ರಾಜ್‌ ಕುಂದ್ರಾ ಜೈಲಿನಿಂದ ಹೊರ ಬಂದಿದ್ದಾರೆ.

ಆದರೆ ಜೈಲಿನಿಂದ ಹೊರ ಬಂದ ಬಳಿಕ ರಾಜ್‌ಕುಂದ್ರಾ ಈ ಪ್ರರಕರಣದ ಬಗ್ಗೆ ಎಲ್ಲೂ ಮಾತನಾಡಿರಲಿಲ್ಲ. ಈಗ ಇದೇ ಮೊದಲ ಬಾರಿಗೆ ಈ ಬಗ್ಗೆ ಮಾತನಾಡಿದ್ದು, ಅಚ್ಚರಿ ಹೇಳಿಕೆಗಳನ್ನು ನೀಡಿದ್ದಾರೆ. ರಾಜ್‌ಕುಂದ್ರಾ ಈ ಪ್ರಕರಣಕ್ಕೂ ತಮಗೂ ಸಂಬಂಧವೆ ಇಲ್ಲ ಎಂದು ಹೇಳಿದ್ದಾರೆ.

ಜೊತೆಗೆ ಈ ವಿಚಾರವಾಗಿ ಹಬ್ಬಿರುವ ಎಲ್ಲಾ ಊಹಾ-ಪೋಹಗಳಿಗೆ ಉತ್ತರಿಸಿದ್ದಾರೆ. ಇದರಿಂದ ತಮ್ಮ ಕುಟುಂಬ ಅನುಭವಿಸಿದ ನೋವು ಎಂಥದ್ದು ಎನ್ನುವುದನ್ನು ರಾಜ್‌ಕುಂದ್ರಾ ವಿವರಿಸಿದ್ದಾರೆ.

ನಾನು ನೀಲಿ ಚಿತ್ರವನ್ನು ನಿರ್ಮಾಣ, ವಿತರಣೆ ಮಾಡಿಲ್ಲ: ರಾಜ್‌ ಕುಂದ್ರಾ!

ನಾನು ನೀಲಿ ಚಿತ್ರವನ್ನು ನಿರ್ಮಾಣ, ವಿತರಣೆ ಮಾಡಿಲ್ಲ: ರಾಜ್‌ ಕುಂದ್ರಾ!

ನೀಲಿ ಚಿತ್ರ ನಿರ್ಮಾಣ ಮತ್ತು ವಿತರಣೆಯ ಆರೋಪದ ಅಡಿಯಲ್ಲಿ ರಾಜ್‌ಕುಂದ್ರಾ ಜೈಲು ಪಾಲಾಗಿದ್ದರು. ಆದರೆ ಜಾಮೀನು ಪಡೆದು ಹೊರ ಬಂದ ಬಳಿಕ ಹಲವು ದಿನಗಳು ಅವರು ನಾಪತ್ತೆ ಆಗಿದ್ದರು. ಆದರೆ ಕೆಲ ದಿನಗಳ ಹಿಂದೆ ದೇವಸ್ಥಾನ ಒಂದರಲ್ಲಿ ಪತ್ನಿ ಜೊತೆಗೆ ಪ್ರತ್ಯಕ್ಷ ಆಗಿದ್ದರು. ಆಗಲೂ ಅವರು ಈ ವಿವಾದದ ಬಗ್ಗೆ ಏನನ್ನೂ ಹೇಳಿರಲಿಲ್ಲ.

ಈಗ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ಬಿಡುಗಡೆ ಮಾಡಿದ್ದು, ''ನನಗೂ ಈ ಪ್ರಕರಣಕ್ಕೂ ಸಂಬಂಧ ಇಲ್ಲ'' ಎಂದು ಹೇಳಿದ್ದಾರೆ. "ನನ್ನ ಕುರಿತು ಮಾಧ್ಯಮಗಳಲ್ಲಿ ಆಧಾರವಿಲ್ಲದ ಅನೇಕ ಮಾಹಿತಿಗಳು ಬಿತ್ತರ ಆಗಿವೆ. ದಾರಿ ತಪ್ಪಿಸುವಂತಹ ಸುದ್ದಿಗಳನ್ನು ಬಿತ್ತರ ಮಾಡಲಾಗಿದೆ. ನನ್ನ ಜೀವನದಲ್ಲಿ ನಾನು ನೀಲಿ ಸಿನಿಮಾ ನಿರ್ಮಾಣ ಮತ್ತು ವಿತರಣೆ ಮಾಡುವುದರಲ್ಲಿ ಭಾಗಿ ಆಗಿಲ್ಲ. ನನ್ನ ಮೌನವನ್ನು ದೌರ್ಬಲ್ಯ ಎಂದು ಪರಿಗಣಿಸಲಾಗಿದೆ. ಈ ಪ್ರಕರಣ ಈಗ ವಿಚಾರಣೆಯ ಹಂತದಲ್ಲಿದೆ. ಹಾಗಾಗಿ ನಾನು ಸ್ಪಷ್ಟನೆ ನೀಡಲಾಗುವುದಿಲ್ಲ. ನ್ಯಾಯಾಂಗ ವ್ಯವಸ್ಥೆಯ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ" ಎಂದು ರಾಜ್​ ಕುಂದ್ರಾ ಹೇಳಿದ್ದಾರೆ.

ನಾನು ಮುಖ ಮುಚ್ಚಿಕೊಂಡು ಓಡಾಡುವುದಿಲ್ಲ : ರಾಜ್‌ ಕುಂದ್ರಾ!

ನಾನು ಮುಖ ಮುಚ್ಚಿಕೊಂಡು ಓಡಾಡುವುದಿಲ್ಲ : ರಾಜ್‌ ಕುಂದ್ರಾ!

ವಿಚಾರಣೆಗೂ ಮುನ್ನವೇ ತನ್ನನ್ನು ಆಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗಿದೆ ಎಂದು ಹೇಳಿದ್ದಾರೆ. "ದುರದೃಷ್ಟ ಏನೆಂದರೆ, ವಿಚಾರಣೆ ಮುಗಿಯುವುದಕ್ಕಿಂತಲೂ ಮುನ್ನವೇ ಮಾಧ್ಯಮದವರು ನನ್ನನ್ನು ಆರೋಪಿಯ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ಇದರಿಂದ ನನಗೂ ಮತ್ತು ನನ್ನ ಕುಟುಂಬದವರಿಗೆ ನಿರಂತರವಾಗಿ ನೋವಾಗಿದೆ. ಟ್ರೋಲ್​ಗಳಿಂದ, ನೆಗೆಟಿವ್​ ಮಾತುಗಳಿಂದ, ಕೆಟ್ಟ ಸಾರ್ವಜನಿಕ ಅಭಿಪ್ರಾಯದಿಂದ ನಮಗೆ ತೊಂದರೆ ಆಗಿದೆ. ನಾನು ಮುಖ ಮುಚ್ಚಿಕೊಂಡು ಓಡಾಡುವುದಿಲ್ಲ. ಆದರೆ ನನ್ನ ಖಾಸಗಿತನಕ್ಕೆ ಬೆಲೆ ನೀಡಿ ಎಂದು ಬಯಸುತ್ತೇನೆ. ನನ್ನ ಕುಟುಂಬವೇ ನನಗೆ ಮುಖ್ಯ. ಈ ಸಂದರ್ಭದಲ್ಲಿ ಅದಕ್ಕಿಂತ ಬೇರೆ ಏನೂ ನನಗೆ ಮುಖ್ಯವಲ್ಲ" ಎನ್ನುವುದನ್ನು ಅವರು ತಮ್ಮ ಹೇಳಿಕೆಯಲ್ಲಿ ಸ್ಪಷ್ಟ ಪಡಿಸಿದ್ದಾರೆ.

ಪತಿಯ ಬಂಧನದಿಂದ ಆಘಾತಕ್ಕೆ ಒಳಗಾಗಿದ್ದ ನಟಿ ಶಿಲ್ಪಾ ಶೆಟ್ಟಿ!

ಪತಿಯ ಬಂಧನದಿಂದ ಆಘಾತಕ್ಕೆ ಒಳಗಾಗಿದ್ದ ನಟಿ ಶಿಲ್ಪಾ ಶೆಟ್ಟಿ!

ಇನ್ನು ಪತಿ ರಾಜ್ ಕುಂದ್ರಾ ಈ ರೀತಿಯ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಸಂದರ್ಭದಲ್ಲಿ ಶಿಲ್ಪಾ ಶೆಟ್ಟಿ ಮೌನ ವಹಿಸಿದ್ದರು. ಪತಿಯ ಬಗ್ಗೆ ವಹಿಸಿಕೊಂಡು ಶಿಲ್ಪಾ ಶೆಟ್ಟಿ ಎಲ್ಲೂ ಮಾತನಾಡಲಿಲ್ಲ. ಆದರೆ ಕೆಲದಿನಗಳ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ತನ್ನ ಮನದಾಳದ ನೋವನ್ನು ಹಂಚಿಕೊಂಡಿದ್ದರು. ಆ ಬಳಿಕ ಕೆಲ ಕಾಲ ಕಿರುತೆರೆ ರಿಯಾಲಿಟಿ ಶೋ ನಿಂದಲೂ ಶಿಲ್ಪಾ ಶೆಟ್ಟಿ ಬ್ರೇಕ್ ತೆಗೆದು ಕೊಂಡಿದ್ದರು. ಆದರೆ ಮತ್ತೆ ಹೊಸ ಹುರುಪಿನೊಂದಿಗೆ ಶಿಲ್ಪಾ ಶೆಟ್ಟಿ ರಿಯಾಲಿಟಿ ಶೋಗೆ ವಾಪಸ್‌ ಆದರು. ಜೊತೆಗೆ ಪತಿ ಜೈಲು ಸೇರಿದ್ದರು ಶಿಲ್ಪಾ ಶೆಟ್ಟಿ ಯಾವುದೇ ರೀತಿಯ ವಿವಾದಗಳಿಗೆ ಎಡೆಮಾಡಿಕೊಡದೆ ಸೂಕ್ಷ್ಮವಾಗಿ ಈ ವಿಚಾರದಲ್ಲಿ ನಡೆದುಕೊಂಡಿದ್ದಾರೆ.

ಜುಲೈನಲ್ಲಿ ಅರೆಸ್ಟ್‌ ಆಗಿದ್ದ ರಾಜ್‌ ಕುಂದ್ರಾ!

ಜುಲೈನಲ್ಲಿ ಅರೆಸ್ಟ್‌ ಆಗಿದ್ದ ರಾಜ್‌ ಕುಂದ್ರಾ!

ನೀಲಿ ಚಿತ್ರ ನಿರ್ಮಾಣದ ವಿಚಾರವಾಗಿ 2021ರ ಫೆಬ್ರವರಿಯಲ್ಲಿ ದೂರು ದಾಖಲಾಗಿತ್ತು. ತನಿಖೆ ವೇಳೆ ಪ್ರಮುಖ ಆರೋಪಿ ರಾಜ್‌ಕುಂದ್ರಾ ಎಂದು ತಿಳಿದು ಬಂದಿದ್ದು, ಅವರನ್ನು ಮುಂಬೈ ಪೊಲೀಸರು ಜುಲೈನಲ್ಲಿ ಬಂಧಿಸಿದ್ದರು. ನಂತರ ಸೆಪ್ಟಂಬರ್ ನಲ್ಲಿ ಜೈಲಿನಿಂದ ಜಾಮೀನು ಪಡೆದು ರಾಜ್‌ ಕುಂದ್ರಾ ಹೊರ ಬಂದರು. ಈ ಪ್ರಕರಣದ ಬಗ್ಗೆ ಈ ಬಾಯ್ಬಿಟ್ಟಿರುವ ರಾಜ್‌ಕುಂದ್ರಾ ಈ ವಿಚಾರದ ಬಗ್ಗೆ ಇಲ್ಲ ಸಲ್ಲದ ಸುದ್ದಿಗಳನ್ನು ಹಬ್ಬಿಸಬೇಡಿ ಎಂದು ಮನವಿ ಮಾಡಿದ್ದಾರೆ.

More from Filmibeat

English summary
Raj Kundra Said I Have Never Been Involved In Production, Distribution Of Pornography.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X