For Quick Alerts
  ALLOW NOTIFICATIONS  
  For Daily Alerts

  ರಾಜ್‌ಕುಂದ್ರಾ ವಿರುದ್ಧ ಆಘಾತಕಾರಿ ವಿಷಯಗಳನ್ನು ಬಿಚ್ಚಿಟ್ಟ ಪೂನಂ ಪಾಂಡೆ

  |

  ಅಶ್ಲೀಲ ವಿಡಿಯೋ ನಿರ್ಮಾಣ ಕೇಸ್‌ನಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾರನ್ನು ಬಂಧಿಸಲಾಗಿದೆ. ರಾಜ್ ಕುಂದ್ರಾ ಅರೆಸ್ಟ್ ಬಳಿಕ ಪೂನಂ ಪಾಂಡೆ ನೀಡುತ್ತಿರುವ ಹೇಳಿಕೆಗಳು ಸಂಚಲನ ಸೃಷ್ಟಿಸುತ್ತಿವೆ.

  'ರಾಜ್ ಕುಂದ್ರಾ ಭಾರತೀಯ ಆಶ್ಲೀಲ ಜಗತ್ತಿನ ಮಾಸ್ಟರ್‌ಮೈಂಡ್' ಎಂದು ಆರೋಪಿಸಿದ್ದಾರೆ. ಫೆಬ್ರವರಿ ತಿಂಗಳಲ್ಲಿ ದಾಖಲಾಗಿರುವ ದೂರಿನ ಅನ್ವಯ ರಾಜ್‌ಕುಂದ್ರಾರನ್ನ ಜುಲೈ 19 ರಂದು ಮುಂಬೈ ಪೊಲೀಸರು ಬಂಧಿಸಿದ್ದರು. ನಂತರ ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಜುಲೈ 23ರವರೆಗೂ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.

  ರಾಜ್ ಕುಂದ್ರ ಸೆಕ್ಸ್ ರಾಕೆಟ್ ನ 'ಮಾಸ್ಟರ್ ಮೈಂಡ್'; ಪೂನಂ ಪಾಂಡೆ ರಾಜ್ ಕುಂದ್ರ ಸೆಕ್ಸ್ ರಾಕೆಟ್ ನ 'ಮಾಸ್ಟರ್ ಮೈಂಡ್'; ಪೂನಂ ಪಾಂಡೆ

  ಈ ಹಿಂದೆ 2019ರಲ್ಲಿ ರಾಜ್ ಕುಂದ್ರಾ ವಿರುದ್ಧ ವಂಚನೆ, ಕಳ್ಳತನ ಆರೋಪದಲ್ಲಿ ಪೂನಂ ಪಾಂಡೆ ದೂರು ನೀಡಿದ್ದರು. ಅದೇ ವಿಚಾರವನ್ನು ಮುಂದಿಟ್ಟು ಮತ್ತೊಮ್ಮೆ ಕುಂದ್ರಾ ವಿರುದ್ಧ ಗಂಭೀರ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.

  ಈ ಟೈಮ್ಸ್ ಜೊತೆ ಮಾತನಾಡಿರುವ ಪೂನಂ ಪಾಂಡೆ, ''ನನ್ನನ್ನು ಬೆದರಿಸಿ ಒಪ್ಪಂದಕ್ಕೆ ಸಹಿ ಮಾಡಿಸಿಕೊಂಡಿದ್ದರು. ಅವರು ಹೇಳಿದಂತೆ ಚಿತ್ರೀಕರಣ ಮಾಡಬೇಕಿತ್ತು. ಫೋಸ್ ಕೊಡಬೇಕಿತ್ತು. ಇಲ್ಲವಾದಲ್ಲಿ ನನ್ನ ಖಾಸಗಿ ಸಂಗತಿಗಳನ್ನು ಸೋರಿಕೆ ಮಾಡುವುದಾಗಿ ಹೇಳುತ್ತಿದ್ದರು'' ಎಂಬ ವಿಚಾರ ಹೊರಹಾಕಿದ್ದಾರೆ.

  ರಾಜ್ ಕುಂದ್ರ ಬ್ಲ್ಯೂ ಫಿಲ್ಮ್ ದಂಧೆ ಪ್ರಕರಣ; ಪೂನಂ ಪಾಂಡೆ - ಶರ್ಲಿನ್ ಚೋಪ್ರಾ ನಂಟುರಾಜ್ ಕುಂದ್ರ ಬ್ಲ್ಯೂ ಫಿಲ್ಮ್ ದಂಧೆ ಪ್ರಕರಣ; ಪೂನಂ ಪಾಂಡೆ - ಶರ್ಲಿನ್ ಚೋಪ್ರಾ ನಂಟು

  ''ನಾನು ಅವರ ಒಪ್ಪಂದಿಂದ ಹಿಂದಕ್ಕೆ ಸರಿದಾಗ ನನ್ನ ಖಾಸಗಿ ಸಂದೇಶಗಳನ್ನು ಲೀಕ್ ಮಾಡಿದರು. 'ಕಾಲ್ ಮಾಡಿ, ನಿಮಗಾಗಿ ನಾನು ನಗ್ನವಾಗಲು ಸಿದ್ದ' ಅಂತಹ ಸಂಭಾಷೆಗಳೊಂದಿಗೆ ವೈಯಕ್ತಿಕ ನಂಬರ್ ಸೋರಿಕೆ ಮಾಡಿದರು'' ಎಂದು ದೂರಿದ್ದಾರೆ.

  Pornography case: Raj Kundra leaked my number online with message, Ill strip for you alleges Poonam Pandey

  ''ಇದಾದ ಮೇಲೆ ನನಗೆ ಎಲ್ಲಾ ಕಡೆಯಿಂದಲೂ ಫೋನ್ ಕಾಲ್ ಬರುವುದಕ್ಕೆ ಶುರುವಾಯಿತು. ಸಾವಿರಾರು ಸಂಖ್ಯೆಯಲ್ಲಿ ಫೋನ್ ಕಾಲ್ ಬಂತು. ಜನರು ನನಗೆ ಅಶ್ಲೀಲ ವಿಡಿಯೋ ಮತ್ತು ಫೋಟೋಗಳನ್ನು ಕಳುಹಿಸಲು ಶುರು ಮಾಡಿದರು. ಅಸಭ್ಯವಾಗಿ ವರ್ತಿಸಿದರು. ಆ ಸಮಯದಲ್ಲಿ ನನಗೆ ಏನಾದರೂ ತೊಂದರೆ ಉಂಟಾಗಬಹುದು ಎಂಬ ಭಯದಿಂದ ಮನೆ ಬಿಟ್ಟು ಹೋದೆ'' ಎಂದು ಪೂನಂ ಬಹಿರಂಗಪಡಿಸಿದ್ದಾರೆ.

  ಶಿಲ್ಪಾ ಶೆಟ್ಟಿ ಪತಿ ವಿರುದ್ಧ ಆಘಾತಕಾರಿ ವಿಷಯಗಳನ್ನು ಬಿಚ್ಚಿಟ್ಟ ಪೂನಂ ಪಾಂಡೆ

  ರಾಜ್ ಕುಂದ್ರಾ ಅವರ ಅರ್ಮ್ಸ್ ಪ್ರೈಮ್ ಮೀಡಿಯಾ ಸಂಸ್ಥೆ ಜೊತೆ ಪೂನಂ ಪಾಂಡೆ ಒಪ್ಪಂದ ಮಾಡಿಕೊಂಡಿದ್ದರು. ಈ ಒಪ್ಪಂದ ಮುಗಿದ ಬಳಿಕವೂ ರಾಜ್ ಕುಂದ್ರ ಮತ್ತು ಅವರ ಸಹಚರರು ತನ್ನ ವಿಡಿಯೋ ತುಣುಕುಗಳನ್ನು ಮತ್ತು ಸಿನಿಮಾಗಳನ್ನು ನಿರ್ದಾಕ್ಷಿಣ್ಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಪೂನಂ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದರು. ಆಗ ರಾಜ್ ಕುಂದ್ರಾ ಈ ಆರೋಪಗಳನ್ನು ನಿರಾಕರಿಸಿದರು.

  English summary
  Pornography case: Raj Kundra leaked my number online with message, 'I'll strip for you alleges Poonam Pandey.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X