ಜೈಲು ವಾಸದ ಬಳಿಕ ಮೊದಲ ಬಾರಿಗೆ ಶಿಲ್ಪಾ ಶೆಟ್ಟಿ ಜೊತೆ ಕಾಣಿಸಿಕೊಂಡ ರಾಜ್‌ಕುಂದ್ರಾ!

ಬಾಲಿವುಡ್ ತಾರೆ ಶಿಲ್ಪಾಶೆಟ್ಟಿ ಪತಿ ರಾಜ್‌ಕುಂದ್ರಾ ಜೈಲಿನಿಂದ ಬಿಡುಗಡೆಯಾದ ಬಳಿಕ ಎಲ್ಲೂ ಕಾಣಿಸಿ ಕೊಂಡಿರಲಿಲ್ಲ. ಮಾಧ್ಯಮಗಳಿಂದ ಕೂಡ ದೂರ ಉಳಿದು ಬಿಟ್ಟಿದ್ದರು. ರಾಜ್‌ಕುಂದ್ರಾ ಜೈಲಿನಿಂದ ಹೊರಬಂದ ಬಳಿಕವೂ ಶಿಲ್ಪಾ ಶೆಟ್ಟಿ ರಾಜ್‌ಕುಂದ್ರಾ ಅವರನ್ನು ಹೊರತುಪಡಿಸಿ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದು ಸಾಕಷ್ಟು ಜನರಲ್ಲಿ ಅಚ್ಚರಿ ಉಂಟು ಮಾಡಿತ್ತು. ಶಿಲ್ಪಾಶೆಟ್ಟಿ ಪತಿಯ ಜೊತೆಗಿನ ಫೋಟೊಗಳನ್ನು ಯಾಕೆ ಹಂಚಿಕೊಳ್ಳುತ್ತಿಲ್ಲ. ಎನ್ನುವ ಪ್ರಶ್ನೆಗಳು ಕೂಡ ಎದುರಾಗಿದ್ದವು. ರಾಜ್‌ ಕುಂದ್ರಾ ಮಾಧ್ಯಮಗಳ ಕಣ್ಣಿಗೂ ಬೀಳದೆ ದೂರ ಉಳಿದು ಬಿಟ್ಟಿದ್ದರು. ಆದರೆ ಇದೀಗ ಪತ್ನಿ ಶಿಲ್ಪಾ ಶೆಟ್ಟಿ ಜೊತೆಗೆ ಮೊದಲ ಬಾರಿಗೆ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ಜೈಲಿನಿಂದ ಹೊರ ಬಂದ ಬಳಿಕ ಕ್ಯಾಮರಾ ಎದುರು ಕಾಣಿಸಿಕೊಂಡಿದ್ದಾರೆ ರಾಜ್‌ ಕುಂದ್ರಾ. ಶಿಲ್ಪಾ ಶೆಟ್ಟಿ ಮತ್ತು ರಾಜ್‌ ಕುಂದ್ರಾ ಒಟ್ಟಿಗೆ ಕಾಣಿಸಿ ಕೊಂಡಿರುವ ಫೋಟೊಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಶಿಲ್ಪಾಶೆಟ್ಟಿ ಪತಿ ರಾಜ್ ಕುಂದ್ರಾ ಅವರನ್ನು ಕಳೆದ ಜುಲೈನಲ್ಲಿ ಬಂಧಿಸಲಾಗಿತ್ತು. ಅಶ್ಲೀಲ ಚಿತ್ರ ನಿರ್ಮಾಣ ಮತ್ತು ವಿತರಣೆ ಆರೋಪದ ಹಿನ್ನೆಲೆಯಲ್ಲಿ ಜೈಲು ಸೇರಿದ್ದರು. ನಂತರದಲ್ಲಿ ರಾಜ್‌ ಕುಂದ್ರಾ ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದಾರೆ. ಜೈಲಿನಿಂದ ಹೊರಬಂದ ನಂತರ ಹೊರಗಡೆ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಇದೀಗ ಶಿಲ್ಪಾ ಶೆಟ್ಟಿ ಜೊತೆಯಲ್ಲಿಯೇ ಪ್ರತ್ಯಕ್ಷ ಆಗಿದ್ದಾರೆ. ಪತ್ನಿ ಜೊತೆಗೆ ದೇವರ ದರ್ಶನ ಪಡೆಯುತ್ತಿದ್ದಾರೆ. ಬಂದ ಕಷ್ಟಗಳು ತೀರಿ ಹೋಗಲಿ ಎಂದು ದೇವರಲ್ಲಿ ಮೊರೆ ಹೋಗಿದ್ದಾರೆ. ಹಿಮಾಚಲದಲ್ಲಿ ಇರುವಂತಹ ಜ್ವಾಲಾ ದೇವಿ ಮತ್ತು ಚಾಮುಂಡಾ ದೇವಿ ದೇವಸ್ಥಾನಕ್ಕೆ ದಂಪತಿಗಳು ಇಬ್ಬರು ಭೇಟಿ ನೀಡಿದ್ದಾರೆ. ಪತಿ ರಾಜ್ ಕುಂದ್ರಾ ಅವರೊಂದಿಗೆ ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಶಿಲ್ಪಾ ಶೆಟ್ಟಿ ವಿವಿಧ ದೇವಾಲಯಗಳ ಫೋಟೋ ಮತ್ತು ವೀಡಿಯೋಗಳನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆದರೆ ಆ ಫೋಟೊಗಳಲ್ಲಿ ಪತಿ ರಾಜ್‌ ಕುಂದ್ರಾ ಎಲ್ಲೂ ಕಾಣಿಸಿಕೊಂಡಿಲ್ಲ.

Raj Kundra Makes First Public Appiarance Post Bail With Shilpa Shetty

ಇನ್ನು ಪತಿ ರಾಜ್ ಕುಂದ್ರಾ ಈ ರೀತಿಯ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಸಂದರ್ಭದಲ್ಲಿ ಶಿಲ್ಪಾ ಶೆಟ್ಟಿ ಮೌನ ವಹಿಸಿದ್ದರು. ಪತಿಯ ಬಗ್ಗೆ ವಹಿಸಿಕೊಂಡು ಶಿಲ್ಪಾ ಶೆಟ್ಟಿ ಎಲ್ಲೂ ಮಾತನಾಡಲಿಲ್ಲ. ಆದರೆ ಕೆಲದಿನಗಳ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ತನ್ನ ಮನದಾಳದ ನೋವನ್ನು ಹಂಚಿಕೊಂಡಿದ್ದರು. ಆ ಬಳಿಕ ಕೆಲ ಕಾಲ ಕಿರುತೆರೆ ರಿಯಾಲಿಟಿ ಶೋ ನಿಂದಲೂ ಬ್ರೇಕ್ ತೆಗೆದು ಕೊಂಡಿದ್ದರು. ಆದರೆ ಮತ್ತೆ ಹೊಸ ಹುರುಪಿನೊಂದಿಗೆ ಶಿಲ್ಪಾ ಶೆಟ್ಟಿ ರಿಯಾಲಿಟಿ ಶೋಗೆ ವಾಪಸ್‌ ಆಗಿದ್ದಾರೆ. ಜೊತೆಗೆ ಪತಿ ಜೈಲು ಸೇರಿದ್ದರು. ಶಿಲ್ಪಾಶೆಟ್ಟಿ ಯಾವುದೇ ರೀತಿಯ ವಿವಾದಗಳಿಗೆ ಎಡ ಮಾಡಿ ಕೊಡದೆ ಸೂಕ್ಷ್ಮವಾಗಿ ಈ ವಿಚಾರದಲ್ಲಿ ನಡೆದು ಕೊಂಡಿದ್ದಾರೆ. ಇನ್ನು ಗಣಪತಿ ಹಬ್ಬವನ್ನು ಪ್ರತೀ ವರ್ಷ ಕುಟುಂಬದ ಜೊತೆಗೆ ಅದ್ಧೂರಿಯಾಗಿ ಆಚರಿಸುತ್ತಿದ್ದರು. ಆದರೆ ಈ ಬಾರಿ ಪತಿ ಜೈಲಿನಲ್ಲಿ ಇದ್ದ ಕಾರಣ ಮಕ್ಕಳೊಂದಿಗೆ ಶಿಲ್ಪಾ ಶೆಟ್ಟಿ ಸರಳವಾಗಿ ಹಬ್ಬವನ್ನು ಆಚರಿಸಿದ್ದಾರೆ. ಎಲ್ಲೂ ಕೂಡ ಪತಿಯನ್ನು ಮಿಸ್ ಮಾಡಿಕೊಳ್ಳುತ್ತಿರುವುದನ್ನು ಶಿಲ್ಪಾ ಶೆಟ್ಟಿ ತೋರಿಸಿಕೊಂಡಿರಲಿಲ್ಲ.

Raj Kundra Makes First Public Appiarance Post Bail With Shilpa Shetty

ನೀಲಿ ಚಿತ್ರ ನಿರ್ಮಾಣದ ವಿಚಾರವಾಗಿ 2021ರ ಫೆಬ್ರವರಿಯಲ್ಲಿ ದೂರು ದಾಖಲಾಗಿತ್ತು. ತನಿಖೆ ವೇಳೆ ಪ್ರಮುಖ ಆರೋಪಿ ರಾಜ್‌ ಕುಂದ್ರಾ ಎಂದು ತಿಳಿದು ಬಂದಿದ್ದು, ಅವರನ್ನು ಮುಂಬೈ ಪೊಲೀಸರು ಜುಲೈನಲ್ಲಿ ಬಂಧಿಸಿದ್ದರು. ನಂತರ ಸೆಪ್ಟಂಬರ್‌ನಲ್ಲಿ ಜಾಮಿನು ಪಡೆದು ರಾಜ್‌ ಕುಂದ್ರಾ ಜೈಲಿನಿಂದ ಹೊರ ಬಂದಿದ್ದಾರೆ. ಪತಿ ಜೈಲಿನಿಂದ ಹೊರಬಂದ ಬಳಿಕ ಕೂಡ ಶಿಲ್ಪಾ ಶೆಟ್ಟಿ ಜೊತೆಗೆ ಕಾಣಿಸಿಕೊಂಡಿರಲಿಲ್ಲ. ಪತಿಯನ್ನು ಸಂತಸದಿಂದ ಮನೆಗೆ ವೆಲ್ಕಂ ಮಾಡುವ ಅಂತಹ ಸನ್ನಿವೇಶಗಳು ಈ ವರೆಗೂ ಕಂಡು ಬಂದಿರಲಿಲ್ಲ. ರಾಜ್‌ ಕುಂದ್ರಾ ಜೈಲಿನಿಂದ ಬಂದ ಬಳಿಕ ಇದೀಗ ಮೊದಲ ಬಾರಿಗೆ ಶಿಲ್ಪಾ ಶೆಟ್ಟಿ ತನ್ನ ಪತಿಯ ಜೊತೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಇವರ ಫೋಟೋ ಮತ್ತು ವಿಡಿಯೋಗಳು ವೈರಲ್ ಲಿಸ್ಟ್ ಸೇರಿವೆ.

More from Filmibeat

English summary
Shilpa Shetty And Raj Kundra Makes First Public Appearance Together After Porn Film Controversy,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X