For Quick Alerts
  ALLOW NOTIFICATIONS  
  For Daily Alerts

  ವಜ್ರದ ಉಂಗುರ ಕೊಟ್ಟು ಪ್ರಪೋಸ್ ಮಾಡಿದ್ದ ಕುಂದ್ರಾ: ಶಿಲ್ಪಾ ನಿರಾಸೆಯಾಗಿದ್ರು!

  |

  ಉದ್ಯಮಿ ರಾಜ್ ಕುಂದ್ರಾ ಜೊತೆ ಶಿಲ್ಪಾ ಶೆಟ್ಟಿಯದ್ದು ಸುಂದರ ಮತ್ತು ಸುಖಕರ ಸಂಸಾರ. ಮದುವೆಯಾಗಿ ಸುಮಾರು 12 ವರ್ಷಗಳು ಕಳೆದಿದೆ. ಇಬ್ಬರು ಮಕ್ಕಳು. ಎಲ್ಲವೂ ಆರಾಮಾಗಿ ಸಾಗಿತ್ತು. ಆದರೀಗ ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಿಂದ ಶಿಲ್ಪಾ ಶೆಟ್ಟಿ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ವರದಿಗಳು ಬೇಸರ ಮೂಡಿಸಿದೆ.

  ಆಶ್ಲೀಲ ಕೇಸ್ ಸಂಬಂಧಿಸಿದಂತೆ ಪೊಲೀಸರ ಎದುರೆಲ್ಲ ರಾಜ್ ಕುಂದ್ರಾ ಜೊತೆ ಶಿಲ್ಪಾ ಶೆಟ್ಟಿ ಜಗಳವಾಡಿದರು. 'ಇಷ್ಟೆಲ್ಲಾ ಇದ್ದರೂ ನಿಮಗೆ ಏಕೆ ಬೇಕಿತ್ತು ಇದೆಲ್ಲಾ' ಎಂದು ಪತಿಯ ಮೇಲೆ ಶಿಲ್ಪಾ ಗರಂ ಆಗಿದ್ದರು ಎಂದು ಹೇಳಲಾಗಿದೆ.

  ಹೇಳಿ ಕೇಳಿ ರಾಜ್ ಕುಂದ್ರಾಗೆ ಇದು ಎರಡನೇ ವಿವಾಹ ಆಗಿತ್ತು. ಮೊದಲ ಪತ್ನಿಯಿಂದ ದೂರವಾಗಿದ್ದ ರಾಜ್ ಕುಂದ್ರಾ, ನಂತರ ನಟಿ ಶಿಲ್ಪಾ ಶೆಟ್ಟಿ ಜೊತೆ ಪ್ರೀತಿಯಲ್ಲಿ ಬಿದ್ದರು. ಕರಾವಳಿ ಬೆಡಗಿ ಶಿಲ್ಪಾ ಸಹ ಕುಂದ್ರಾ ವ್ಯಕ್ತಿತ್ವಕ್ಕೆ ಫಿದಾ ಆದರು. ಶಿಲ್ಪಾ ಶೆಟ್ಟಿಗೆ ಮೊದಲ ಸಲ ಪ್ರಪೋಸ್ ಮಾಡಿದ್ದ ರಾಜ್ ಕುಂದ್ರಾ 5 ಕ್ಯಾರೆಟ್ ವಜ್ರದ ಉಂಗುರವನ್ನು ಉಡುಗೊರೆಯಾಗಿ ಕೊಟ್ಟಿದ್ದಂತೆ. ಆದರೆ, 5 ಕ್ಯಾರೆಟ್ ವಜ್ರದ ಉಂಗುರ ಕಂಡು ನಟಿ ನಿರಾಸೆಯಾಗಿದ್ದರಂತೆ. ಇಷ್ಟು ಚಿಕ್ಕ ಉಂಗುರನಾ ಎಂದು ಬೇಸರ ಮಾಡಿಕೊಂಡಿದ್ದರಂತೆ. ಆಮೇಲೆ ಒಪ್ಪಿಕೊಂಡರು ಎಂದು ಸ್ವತಃ ಅವರೇ ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದರು. ಮುಂದೆ ಓದಿ..

  ಪ್ಯಾರಿಸ್‌ನಲ್ಲಿ ಪ್ರಪೋಸ್ ಮಾಡಿದ್ದ ರಾಜ್ ಕುಂದ್ರಾ

  ಪ್ಯಾರಿಸ್‌ನಲ್ಲಿ ಪ್ರಪೋಸ್ ಮಾಡಿದ್ದ ರಾಜ್ ಕುಂದ್ರಾ

  ಆಗ ಕಾರ್ಯಕ್ರಮವೊಂದರ ಕಾರಣಕ್ಕಾಗಿ ನಟಿ ಶಿಲ್ಪಾ ಶೆಟ್ಟಿ ಕುಟುಂಬದ ಜೊತೆ ಪ್ಯಾರಿಸ್‌ಗೆ ಹೋಗಿದ್ದರು. ಆ ಮುಂಚೆಯಿಂದಲೂ ರಾಜ್ ಕುಂದ್ರಾ ಜೊತೆ ಶಿಲ್ಪಾ ಶೆಟ್ಟಿಗೆ ಪರಿಚಯ ಇತ್ತು. ಹೋಟೆಲ್‌ವೊಂದರಲ್ಲಿ ಸಂಗೀತಗಾರರ (Violinists) ತಂಡದೊಂದಿಗೆ ಬ್ಯಾಂಕೆಟ್ ಹಾಲ್ ಬುಕ್ ಮಾಡಿದ್ದರು. ನನಗೆ ಊಟಕ್ಕೆ ಹೋಗೋಣ ಎಂದಷ್ಟೆ ಹೇಳಿದ್ದರು. ಪ್ರಪೋಸ್ ವಿಷಯವನ್ನು ಪೋಷಕರ ಬಳಿ ಮೊದಲೇ ಈ ತಿಳಿಸಿದ್ದರು. ತಿಂಡಿ ತಿನ್ನುವ ವೇಳೆ 5 ಕ್ಯಾರೆಟ್ ವಜ್ರದ ಉಂಗುರದೊಂದಿಗೆ ಪ್ರಪೋಸ್ ಮಾಡಿದರು. ಆದರೆ, ಶಿಲ್ಪಾ ಶೆಟ್ಟಿ ಇಷ್ಟು ಚಿಕ್ಕ ಉಂಗುರನಾ ಎಂದು ನಿರಾಸೆಯಾದರಂತೆ. ಆಗ ರಾಜ್ ಕುಂದ್ರಾ, ಮದುವೆಗೆ ದೊಡ್ಡ ಉಂಗುರ ಕೊಡುತ್ತೇನೆ ಎಂದು ಹೇಳಿದ್ಮೇಲೆ ಶಿಲ್ಪಾ ಸಮ್ಮತಿ ಕೊಟ್ಟರು ಎಂದು ಹೇಳಿಕೊಂಡಿದ್ದರು.

  ರಾಜ್ ಕುಂದ್ರಾ ಜೊತೆ ಪರಿಚಯ ಹೇಗೆ?

  ರಾಜ್ ಕುಂದ್ರಾ ಜೊತೆ ಪರಿಚಯ ಹೇಗೆ?

  ಬ್ರ್ಯಾಂಡ್‌ವೊಂದರ ಪ್ರಚಾರಕ್ಕೆ ಸಂಬಂಧಪಟ್ಟಂತೆ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ನಡುವೆ ಸ್ನೇಹ ಬೆಳೆಯಿತು. ಈ ಸ್ನೇಹ ಇಬ್ಬರ ನಡುವೆ ಆತ್ಮೀಯತೆ ಹೆಚ್ಚು ಮಾಡಿತು. ರಾಜ್ ಕುಂದ್ರಾಗೆ ಅದಾಗಲೇ ವಿವಾಹವಾಗಿದ್ದ ಸುದ್ದಿ ಕೇಳಿ ಶಿಲ್ಪಾ ನಿರಾಸೆಯಾಗಿದ್ದರು. ಆದರೆ, ಮೊದಲ ಪತ್ನಿಯಿಂದ ದೂರವಿದ್ದಾರೆ ಎಂದು ತಿಳಿದ ಮೇಲೆ ಡೇಟಿಂಗ್ ಮಾಡಿದರು. ಇಬ್ಬರ ಪ್ರೀತಿ ಟಾಕ್ ಆಫ್ ದಿ ಟೌನ್ ಸುದ್ದಿಯಾಯಿತು. ಕೆಲ ಸಮಯ ಗೌಪ್ಯವಾಗಿ ಸುತ್ತಾಡಿದರು.

  2009ರಲ್ಲಿ ನಿಶ್ಚಿತಾರ್ಥ-ಮದುವೆ

  2009ರಲ್ಲಿ ನಿಶ್ಚಿತಾರ್ಥ-ಮದುವೆ

  2009ರಲ್ಲಿ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ವಿವಾಹವಾದರು. 2012ರಲ್ಲಿ ಮೊದಲ ಮಗುವಿಗೆ ಶಿಲ್ಪಾ ಶೆಟ್ಟಿ ಜನ್ಮ ನೀಡಿದರು. ಇನ್ನು ಬಾಡಿಗೆ ತಾಯಿಯ ಮೂಲಕ 2020ರಲ್ಲಿ ಎರಡನೇ ಮಗು ಪಡೆದುಕೊಂಡರು. 2009ರ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಸಹ ಭಾಗಿತ್ವ ಹೊಂದಿದ್ದರು.

  ನನ್ನ ಸಂಸಾರ ಹಾಳಾಗಲು ಶಿಲ್ಪಾ ಶೆಟ್ಟಿ ಕಾರಣ

  ನನ್ನ ಸಂಸಾರ ಹಾಳಾಗಲು ಶಿಲ್ಪಾ ಶೆಟ್ಟಿ ಕಾರಣ

  ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿಯ ಡೇಟಿಂಗ್ ವಿಚಾರ ತಿಳಿದಿದ್ದ ಕುಂದ್ರಾ ಮೊದಲ ಪತ್ನಿ ಕವಿತಾ, ಬಹಿರಂಗವಾಗಿ ಶಿಲ್ಪಾ ವಿರುದ್ಧ ಗಂಭೀರ ಆರೋಪ ಮಾಡಿದರು. ನನ್ನ ಮದುವೆ ಮುರಿದು ಬೀಳಲು ಶಿಲ್ಪಾ ಶೆಟ್ಟಿಯೇ ಕಾರಣ ಎಂದು ಟೀಕಿಸಿದರು.

  ಅಕ್ಷಯ್ ಕುಮಾರ್ ಜೊತೆ ಶಿಲ್ಪಾ ಲವ್?

  ಅಕ್ಷಯ್ ಕುಮಾರ್ ಜೊತೆ ಶಿಲ್ಪಾ ಲವ್?

  ಬಾಲಿವುಡ್ ನಟ ಅಕ್ಷಯ್ ಕುಮಾರ್ ಜೊತೆ ಶಿಲ್ಪಾ ಶೆಟ್ಟಿ ಪ್ರೀತಿಯಲ್ಲಿದ್ದರು. 1994ರಲ್ಲಿ ಬಂದ 'ಮೇನ್ ಖಿಲಾಡಿ ತು ಅನಾರಿ' ಅಕ್ಷಯ್ ಕುಮಾರ್ ಜೊತೆ ಶಿಲ್ಪಾ ನಟಿಸಿದರು. 1997ರಲ್ಲಿ ಬಂದ 'ಇನ್ಸಾಫ್' ಸಿನಿಮಾದ ವೇಳೆ ಇಬ್ಬರು ಪ್ರೀತಿಯಲ್ಲಿರುವ ವಿಚಾರ ಹೊರಬಿತ್ತು. ಈ ಬಗ್ಗೆ ಬಹಿರಂಗವಾಗಿ ಶಿಲ್ಪಾ ಶೆಟ್ಟಿ ಮಾತನಾಡಿದರು. ಇಬ್ಬರು ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದವು. ಮದುವೆ ಆದ್ಮೇಲೆ ಶಿಲ್ಪಾ ನಟಿಸುವುದು ಅಕ್ಷಯ್‌ಗೆ ಇಷ್ಟವಿರಲಿಲ್ಲ. ಈ ವಿಚಾರದ ತಿಳಿದ ಮೇಲೆ ಅಕ್ಷಯ್ ಕುಮಾರ್ ಜೊತೆ ಶಿಲ್ಪಾ ಬ್ರೇಕ್ ಅಪ್ ಮಾಡಿಕೊಂಡರು.

  ಜೈಲಿನಲ್ಲಿ ರಾಜ್ ಕುಂದ್ರಾ

  ಜೈಲಿನಲ್ಲಿ ರಾಜ್ ಕುಂದ್ರಾ

  ಅಶ್ಲೀಲ ವಿಡಿಯೋ ನಿರ್ಮಾಣ ಕೇಸ್‌ನಲ್ಲಿ ಉದ್ಯಮಿ, ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾರನ್ನು ಮುಂಬೈ ಕ್ರೈಂ ವಿಭಾಗದ ಪೊಲೀಸರು ಜುಲೈ 19 ರಂದು ಬಂಧಿಸಿದ್ದಾರೆ. ನಂತರ ಜುಲೈ 27ರವರೆಗೂ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ಮಾಡಲಾಗಿತ್ತು. ಬಳಿಕ ರಾಜ್ ಕುಂದ್ರಾ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

  English summary
  Throwback: Raj Kundra proposed to Shilpa Shetty with diamond ring but left her unimpressed.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X