twitter
    For Quick Alerts
    ALLOW NOTIFICATIONS  
    For Daily Alerts

    Raj kundra Case Timeline: 62 ದಿನದ ನಂತರ ಜೈಲಿನಿಂದ ಹೊರಬಂದ ಶಿಲ್ಪಾಶೆಟ್ಟಿ ಪತಿ

    |

    ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ಬಂಧನವಾಗಿದ್ದ ಉದ್ಯಮಿ ರಾಜ್ ಕುಂದ್ರಾ ಕೊನೆಗೂ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಸುಮಾರು ಎರಡು ತಿಂಗಳ ಬಳಿಕ ಜೈಲಿನಿಂದ ಹೊರಗೆ ಬಂದಿದ್ದಾರೆ. ಫೆಬ್ರವರಿಯಲ್ಲಿ ದಾಖಲಾಗಿದ್ದ ಎಫ್‌ಐಆರ್ ಆಧರಿಸಿ ಜುಲೈ ತಿಂಗಳಲ್ಲಿ ಕುಂದ್ರಾ ಅವರನ್ನು ಅರೆಸ್ಟ್ ಮಾಡಲಾಗಿತ್ತು. ಶಿಲ್ಪಾ ಶೆಟ್ಟಿ ಜೊತೆ ಇತರೆ 11 ಮಂದಿಯನ್ನು ಸಹ ವಶಕ್ಕೆ ಪಡೆಯಲಾಗಿತ್ತು.

    Recommended Video

    ಕೊನೆಗೂ ಫಲಿಸಿತು ಶಿಲ್ಪಾ ಶೆಟ್ಟಿ ಪ್ರಾರ್ಥನೆ

    ಕಳೆದ ಐದಾರು ತಿಂಗಳಿನಿಂದ ನಡೆಯುತ್ತಿರುವ ತನಿಖೆಯಲ್ಲಿ ಈ ಕೇಸ್ ಸಂಬಂಧಿಸಿದಂತೆ ಹಲವು ಆಘಾತಕಾರಿ ವಿಷಯಗಳು ಬಹಿರಂಗವಾಗಿದೆ. ಹಲವು ಆರೋಪಗಳು ಕೇಳಿ ಬಂದಿದೆ. ಹಲವು ನಟಿಯರು ಹಾಗೂ ಮಾಡೆಲ್‌ಗಳ ಹೆಸರು ತಳುಕು ಹಾಕಿಕೊಂಡಿದೆ. ಜುಲೈ 19 ರಂದು ಮುಂಬೈ ಕ್ರೈಂ ಪೊಲೀಸರು ರಾಜ್ ಕುಂದ್ರಾರನ್ನು ಅರೆಸ್ಟ್ ಮಾಡಿದ್ದರು. ಕುಂದ್ರಾ ಬಂಧನದ ನಂತರ ಅಲ್ಲಿಂದ ಇಲ್ಲಿಯವರೆಗೂ ಈ ಪ್ರಕರಣದ ಸಂಬಂಧ ನಡೆದ ಕೆಲವು ಬೆಳವಣಿಗೆಗಳ ವಿವರ ಇಲ್ಲಿದೆ.

    Raj Kundra released from Byculla jail after getting bail in adult film racket case

    ಜುಲೈ 20: ಜುಲೈ 19 ರಂದು ಮುಂಬೈ ಕ್ರೈಂ ಬ್ರಾಂಚ್‌ನ ಪ್ರಾಪರ್ಟಿ ಸೆಲ್ ರಾಜ್ ಕುಂದ್ರಾರನ್ನು ಬಂಧಿಸಿದರು. ಜುಲೈ 20 ರಂದು ಅವರನ್ನು ಜೆಜೆ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು. ಅದೇ ದಿನ ರಂದು ಕಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

    ಉದ್ಯಮಿ ರಾಜ್ ಕುಂದ್ರಾಗೆ ಜಾಮೀನು ನೀಡಿದ ಕೋರ್ಟ್ಉದ್ಯಮಿ ರಾಜ್ ಕುಂದ್ರಾಗೆ ಜಾಮೀನು ನೀಡಿದ ಕೋರ್ಟ್

    ಜುಲೈ 22: ರಾಜ್ ಕುಂದ್ರಾ ಪಿಎ ಉಮೇಶ್ ಕಾಮತ್ ಚಿತ್ರೀಕರಿಸಿದ 70 ವಿಡಿಯೋಗಳನ್ನು ಕ್ರೈಂ ಬ್ರಾಂಚ್ ಪೊಲೀಸರು ಪತ್ತೆ ಮಾಡಿದೆ ಎಂದು ವರದಿಯಾಗಿದೆ.

    ಜುಲೈ 23: ರಾಜ್ ಕುಂದ್ರಾ ಪತ್ನಿ ಶಿಲ್ಪಾ ಶೆಟ್ಟಿ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು. ತಮ್ಮ ಪತಿಯ ವ್ಯವಹಾರಗಳಲ್ಲಿ ನಿಮ್ಮ ಪಾತ್ರ ಇದ್ಯಾ, ಅವರ ಜೊತೆಗಿನ ಪೋರ್ನ್ ವ್ಯವಹಾರದಲ್ಲಿ ನೀವು ಭಾಗಿಯಾಗಿದ್ದೀರಾ ಎಂದು ಪೊಲೀಸರು ಪ್ರಶ್ನಿಸಿದರು. ಪೊಲೀಸರು ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದ ನಟಿ ಶಿಲ್ಪಾ ಶೆಟ್ಟಿ ಈ ಕೇಸ್‌ನಲ್ಲಿ ನನ್ನದು ಯಾವ ಪಾತ್ರವೂ ಇಲ್ಲ ಎಂದು ಸ್ಪಷ್ಟನೆ ಕೊಟ್ಟರು.

    Raj Kundra released from Byculla jail after getting bail in adult film racket case

    ಜುಲೈ 27: ಮೊದಲು ಜುಲೈ 23ರವರೆಗೂ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ನಂತರ ಪೊಲೀಸ್ ಕಸ್ಟಡಿ ಅವಧಿಯನ್ನು ನ್ಯಾಯಾಲಯವು ಜುಲೈ 27 ರವರೆಗೆ ವಿಸ್ತರಿಸಿತು. ಇದರ ನಂತರ, ಆತನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು.

    ಜುಲೈ 29: ರಾಜ್ ಕುಂದ್ರಾ ತನ್ನ ಬಂಧನ ಅಕ್ರಮ ಎಂದು ಪ್ರಶ್ನಿಸಿ ಮನವಿ ಸಲ್ಲಿಸಿದರು. ಬಂಧನಕ್ಕೂ ಮುಂಚೆ ಪೊಲೀಸರು ಸಮನ್ಸ್ ನೀಡಲಿಲ್ಲ ಎಂದು ದೂರಿದರು.

    ರಾಜ್ ಕುಂದ್ರಾಗೆ ಜಾಮೀನು: ಶಿಲ್ಪಾ ಶೆಟ್ಟಿ ಹಂಚಿಕೊಂಡ ಸುಂದರ ಸಂದೇಶರಾಜ್ ಕುಂದ್ರಾಗೆ ಜಾಮೀನು: ಶಿಲ್ಪಾ ಶೆಟ್ಟಿ ಹಂಚಿಕೊಂಡ ಸುಂದರ ಸಂದೇಶ

    ಆಗಸ್ಟ್ 2: ಕಾನೂನಾತ್ಮಕವಾಗಿ ನೋಟಿಸ್ ನೀಡದ ಕಾರಣ ತಮ್ಮ ಬಂಧನ ಕಾನೂನುಬಾಹಿರ ಎಂದು ಕುಂದ್ರಾ ಮತ್ತು ಆತನ ಸಹಚರ ರಯಾನ್ ಥೋರ್ಪೆ ಸಲ್ಲಿಸಿದ ಮನವಿಯ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ಆದೇಶವನ್ನು ಕಾಯ್ದಿರಿಸಿತು.

    Raj Kundra released from Byculla jail after getting bail in adult film racket case

    ಆಗಸ್ಟ್ 5: ಅಶ್ಲೀಲ ಪ್ರಕರಣದಲ್ಲಿ ರಾಜ್ ಕುಂದ್ರಾ ಮತ್ತು ಆತನ ಆಪ್ತ ಥೋರ್ಪೆಯ ಜಾಮೀನು ಅರ್ಜಿಯನ್ನು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ತಿರಸ್ಕರಿಸಿತು.

    ಆಗಸ್ಟ್ 8: ಬಾಂಬೆ ಹೈಕೋರ್ಟ್ ಉದ್ಯಮಿ ಕುಂದ್ರಾ ಮತ್ತು ಆತನ ಆಪ್ತ ಥೋರ್ಪೆಯ ಮನವಿಯನ್ನು ತಿರಸ್ಕರಿಸಿತು.

    ಆಗಸ್ಟ್ 13: ಉದ್ಯಮಿ ಕುಂದ್ರಾ ಪ್ರಮುಖ ಆರೋಪಿಯಾಗಿರುವ ಅಶ್ಲೀಲ ವಿಡಿಯೋ ಪ್ರಕರಣದ ತನಿಖೆಗಾಗಿ ಮುಂಬೈ ಪೊಲೀಸ್ ಅಪರಾಧ ವಿಭಾಗವು ವಿಶೇಷ ತನಿಖಾ ತಂಡವನ್ನು (SIT) ರಚಿಸಿತು.

    ಆಗಸ್ಟ್ 18: ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಕುಂದ್ರಾ ಬಂಧನಕ್ಕೆ ಮಧ್ಯಂತರ ರಿಲೀಫ್ ನೀಡಿತು.

    ಸೆಪ್ಟೆಂಬರ್ 13: ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಸೆಪ್ಟೆಂಬರ್ 20 ರವರೆಗೆ ಬಂಧನದ ವಿರುದ್ಧ ಮಧ್ಯಂತರ ರಿಲೀಫ್ ವಿಸ್ತರಿಸಿತು.

    ಸೆಪ್ಟೆಂಬರ್ 15: ರಾಜ್ ಕುಂದ್ರಾ ಮತ್ತು ಸಹಚರರ ವಿರುದ್ಧ ಮುಂಬೈ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದರು. ಕುಂದ್ರಾ ಮತ್ತು ಆಪ್ತ ರಯಾನ್ ಥೋರ್ಪೆ ವಿರುದ್ಧ ಸುಮಾರು 1,500 ಪುಟಗಳ ಚಾರ್ಜ್ ಶೀಟ್‌ನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸಲಾಯಿತು. ಈ ಪ್ರಕರಣದಲ್ಲಿ ರಾಜ್ ಕುಂದ್ರಾ "ಮುಖ್ಯ ಆರೋಪಿ" ಎಂದು ಉಲ್ಲೇಖಿಸಿದ್ದರು.

    ಸೆಪ್ಟೆಂಬರ್ 16: ಸೆಷನ್ಸ್ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ರಾಜ್ ಕುಂದ್ರಾ ಹಿಂಪಡೆದರು.

    ಸೆಪ್ಟೆಂಬರ್ 20: ಅಶ್ಲೀಲ ಚಿತ್ರಗಳ ಪ್ರಕರಣದಲ್ಲಿ ರಾಜ್ ಕುಂದ್ರಾಗೆ ಜಾಮೀನು ನೀಡಲಾಯಿತು.

    ಸೆಪ್ಟೆಂಬರ್ 21: ಹೈ ಕೋರ್ಟ್ ಜಾಮೀನು ನೀಡಿದ ಹಿನ್ನೆಲೆ ಸೆಪ್ಟೆಂಬರ್ 21, ಮಂಗಳವಾರ ಬೆಳಿಗ್ಗೆ 10:30 ಕ್ಕೆ ಬೈಕುಲ್ಲಾ ಜೈಲಿನಿಂದ ಹೊರಬಂದರು.

    English summary
    Bollywood Actor Raj Kundra released from Byculla jail after getting bail in adult film racket case.
    Tuesday, September 21, 2021, 14:11
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X