For Quick Alerts
  ALLOW NOTIFICATIONS  
  For Daily Alerts

  ಅಶ್ಲೀಲ ವಿಡಿಯೋ ಪ್ರಕರಣ: ಹಳೆಯ ಫೋನ್ ಬಿಸಾಡಿದ್ದೇಕೆ ರಾಜ್ ಕುಂದ್ರ?

  |

  ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರ ಬಗ್ಗೆ ಮತ್ತೊಂದು ವಿಚಾರ ಬಹಿರಂಗವಾಗಿದೆ. ಬ್ಲೂ ಫಿಲ್ಮ್ ದಂಧೆ ಪ್ರಕರಣದಲ್ಲಿ ಮುಂಬೈ ಪೊಲೀಸರು ಜುಲೈ 19 ರಂದು ರಾಜ್ ಕುಂದ್ರ ಅವರನ್ನು ಬಂಧಿಸಲಾಗಿದ್ದು, ಜುಲೈ 20ರಿಂದ ಕುಂದ್ರ ಪೋಲೀಸ್ ಕಸ್ಟಡಿಯಲ್ಲಿದ್ದರು, ಇಂದು ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

  ಪೊಲೀಸ್ ವಿಚಾರಣೆ ವೇಳೆ ರಾಜ್ ಕುಂದ್ರ ಬಗ್ಗೆ ಸಾಕಷ್ಟು ಶಾಕಿಂಗ್ ವಿಚಾರಗಳು ಬಹಿರಂಗವಾಗಿದ್ದು, ಅಶ್ಲೀಲ ಲೋಕದ ಕರಾಳ ಸತ್ಯ ಬಲಯಾಗುತ್ತಿದೆ. ರಾಜ್ ಕುಂದ್ರ ಬಗ್ಗೆ ಮತ್ತೊಂದು ಸುದ್ದಿ ಕೇಳಿಬಂದಿದ್ದು, ಕುಂದ್ರ ತನ್ನ ಹಳೆಯ ಮೊಬೈಲ್ ಅನ್ನು ಬಿಸಾಕಿರುವ ವಿಚಾರ ಬಹಿರಂಗವಾಗಿದೆ.

  ಹಳೆಯ ಮೊಬೈಲ್ ನಲ್ಲಿ ವಿಡಿಯೋ ತುಣುಕುಗಳಿದ್ದ ಕಾರಣ ಪುರಾವೆ ಸಿಗಬಾರದು ಎನ್ನುವ ಕಾರಣಕ್ಕೆ ಮೊಬೈಲ್ ಎಸೆದಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಬ್ಲೂ ಫಿಲ್ಮ್ ದಂಧೆಯ ತನಿಖೆ ಪ್ರಾರಂಭ ಮಾಡುತ್ತಿದ್ದಂತೆ ರಾಜ್ ಕುಂದ್ರ ಎಚ್ಚೆತ್ತುಕೊಂಡಿದ್ದರು. ಮಾರ್ಚ್ ತಿಂಗಳಲ್ಲೇ ತನ್ನ ಬಳಿ ಇದ್ದ ಫೋನ್ ಅನ್ನು ಎಸೆದು ಹೊಸ ಫೋನ್ ಖರೀದಿ ಮಾಡಿದ್ದರು ಎನ್ನುವ ಮಾಹಿತಿ ತಿಳಿದುಬಂದಿದೆ.

  ವಿಚಾರಣೆ ವೇಳೆ ಪೊಲೀಸರು ಹಳೆಯ ಪೋನ್ ಬಗ್ಗೆ ಕೇಳಿದ್ದಾಗ ಎಸೆದಿರುವುದಾಗಿ ರಾಜ್ ಕುಂದ್ರ ಹೇಳಿದ್ದಾರಂತೆ. ಹಳೆಯ ಮೊಬೈಲ್ ನಲ್ಲಿ ಹಲವು ಪ್ರಮುಖ ಸಾಕ್ಷಿಗಳು ಇದ್ದವು ಎನ್ನಲಾಗುತ್ತಿದೆ. ಇನ್ನು ತನಿಖೆ ವೇಳೆ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರ ಜಂಟಿ ಖಾತೆಯಿಂದ ಕೋಟ್ಯಂತರ ಮೌಲ್ಯದ ವಹಿವಾಟು ನಡೆಸಿದ ಬಗ್ಗೆ ತನಿಖಾ ವಿಭಾಗಕ್ಕೆ ತಿಳಿದುಬಂದಿದೆ. ಹಾಟ್ ಶಾಟ್ ಮತ್ತು ಇನ್ನು ಕೆಲವು ಅಪ್ಲಿಕೇಶನ್ ಗಳಿಂದ ಗಳಿಸಿದ ಆದಾಯ ಜಂಟಿ ಖಾತೆಗೆ ಬರುತ್ತಿತ್ತು ಎಂದು ತನಿಖಾತಂಡ ಶಂಕೆ ವ್ಯಕ್ತಪಡಿಸಿದೆ.

  ರಾಜ್ ಕುಂದ್ರ ಅವರ 2 ಬ್ಯಾಂಕ್ ಖಾತೆಯನ್ನು ಸೀಜ್ ಮಾಡಲಾಗಿದೆ. ಸಿಟಿಬ್ಯಾಂಕ್ ಮತ್ತು ಕೊಟಕ್ ಮಹೀಂದ್ರಾ ಬ್ಯಾಂಕ್ ಖಾತೆಯನ್ನು ಸೀಜ್ ಮಾಡಲಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಇನ್ನು ಈ ಪ್ರಕರಣದಲ್ಲಿ ರಾಜ್ ಕುಂದ್ರಗೆ ಇನ್ನು ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಬಾಂಬೆ ಹೈ ಕೋರ್ಟ್ ಜಾಮೀನು ನಿರಾಕರಿಸಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.

  English summary
  Raj Kundra's pornography case: he threw away his old phone which contained pieces of evidence.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X