For Quick Alerts
  ALLOW NOTIFICATIONS  
  For Daily Alerts

  ನನ್ನ ತಂಗಿ ಗಂಡನೊಂದಿಗೆ ಆಕೆಗೆ ಅಕ್ರಮ ಸಂಬಂಧ ಇತ್ತು: ಮಾಜಿ ಪತ್ನಿ ಬಗ್ಗೆ ಶಿಲ್ಪಾ ಶೆಟ್ಟಿ ಪತಿ ಮಾತು

  |

  ಬಾಲಿವುಡ್‌ನ ಹ್ಯಾಪಿ ದಂಪತಿಗಳಲ್ಲಿ ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ ಪ್ರಮುಖರು. ತಮಾಷೆಯ ವಿಡಿಯೋಗಳನ್ನು ಮಾಡುತ್ತಾ, ಜೊತೆಯಾಗಿ ಕಾಲ ಕಳೆಯುತ್ತಾ ಮಕ್ಕಳೊಂದಿಗೆ ಆರಾಮವಾಗಿದ್ದಾರೆ.

  ಆದರೆ ಈಗ ಅಚಾನಕ್ಕಾಗಿ ರಾಜ್ ಕುಂದ್ರಾರ ಮೊದಲ ಪತ್ನಿ ಕವಿತಾರ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ವಿಡಿಯೋದಲ್ಲಿ ಮಾತನಾಡಿರುವ ಕವಿತಾ, 'ನನ್ನ ದಾಂಪತ್ಯ ಹಾಳಾಗಲು ನಟಿ ಶಿಲ್ಪಾ ಶೆಟ್ಟಿ ಕಾರಣ' ಎಂದು ಆರೋಪಿಸಿದ್ದಾರೆ.

  ಕವಿತಾ ಈ ಹಿಂದೆ ಮಾಡಿರುವ ಆರೋಪದ ವಿಡಿಯೋ ವೈರಲ್ ಆಗಿರುವ ಬಗ್ಗೆ ಮಾತನಾಡಿರುವ ರಾಜ್ ಕುಂದ್ರಾ, 'ಆ ಸಂದರ್ಶನ ನೀಡಲು ಆಕೆ ಸಾವಿರಾರು ಪೌಂಡ್‌ಗಳ ಹಣವನ್ನು ನ್ಯೂಸ್‌ ಆಫ್‌ ದಿ ವರ್ಲ್ಡ್ ನಿಂದ ಪಡೆದಿದ್ದಳು. ವಿಚ್ಛೇಧನ ವೇಳೆ ಆಕೆ ಸಲ್ಲಿಸಿದ್ದ ಬ್ಯಾಂಕ್‌ ಸ್ಟೇಟ್‌ಮೆಂಟ್‌ಗಳಲ್ಲಿ ಪತ್ರಿಕೆಗಳಿಂದ ಆಕೆಗೆ ಹಣ ಹೋಗಿರುವುದು ಸ್ಪಷ್ಟವಾಗಿತ್ತು. ತನ್ನ ಆತ್ಮವನ್ನು ಮಾರಿಕೊಂಡು ಪತ್ರಿಕೆಗಳಿಗೆ ಬೇಕಾಗಿದ್ದ 'ಮಸಾಲೆ ಸುದ್ದಿ'ಯನ್ನು ಆಕೆ ನೀಡಿದ್ದಳು' ಎಂದಿದ್ದಾರೆ.

  ಸದಾ ನನ್ನ ಕುಟುಂಬದವರೊಟ್ಟಿಗೆ ಜಗಳವಾಡುತ್ತಿದ್ದಳು: ರಾಜ್

  ಸದಾ ನನ್ನ ಕುಟುಂಬದವರೊಟ್ಟಿಗೆ ಜಗಳವಾಡುತ್ತಿದ್ದಳು: ರಾಜ್

  'ಆಕೆ ಸದಾ ನನ್ನೊಂದಿಗೆ, ನನ್ನ ಕುಟುಂಬದವರೊಟ್ಟಿಗೆ ಜಗಳ ಮಾಡುತ್ತಿದ್ದಳು. ಆಕೆಗೆ ಸದಾ ಆಕೆಯದ್ದು, ಆಕೆಯ ಕುಟುಂಬದ್ದೇ ಚಿಂತೆಯಾಗಿರುತ್ತಿತ್ತು. ನಾನು, ನನ್ನ ತಾಯಿ, ತಂದೆ, ಸಹೋದರಿ ಮತ್ತು ಸೋದರಿಯ ಪತಿ ವಂಶ್ ಜೊತೆಗೆ ಲಂಡನ್‌ನಲ್ಲಿ ವಾಸಿಸುತ್ತಿದ್ದೆ. ನನಗೆ ನನ್ನ ಕುಟುಂಬವೆಂದರೆ ಬಹಳ ಮುಖ್ಯ ಆದರೆ ನನ್ನ ಕುಟುಂಬದ ಎಲ್ಲರೊಟ್ಟಿಗೂ ಆಕೆ ಜಗಳವಾಡುತ್ತಿದ್ದಳು' ಎಂದಿದ್ದಾರೆ ಕುಂದ್ರಾ.

  'ಸಹೋದರಿಯ ಪತಿಯ ಜೊತೆ ಸಂಬಂಧ ಹೊಂದಿದ್ದಳು'

  'ಸಹೋದರಿಯ ಪತಿಯ ಜೊತೆ ಸಂಬಂಧ ಹೊಂದಿದ್ದಳು'

  'ಆಕೆ ನನ್ನ ಸಹೋದರಿಯ ಪತಿ ವಂಶ್‌ ಜೊತೆಗೆ ಸಂಬಂಧ ಹೊಂದಿದ್ದಳು. ನಾನು ಬ್ಯುಸಿನೆಸ್‌ ಟ್ರಿಪ್‌ಗಾಗಿ ಹೊರಗೆ ಹೋದಾಗಲೆಲ್ಲ ಆವರಿಬ್ಬರೂ ಭೇಟಿ ಆಗುವುದು ಮಾಡುತ್ತಿದ್ದರು. ನನ್ನ ಕುಟುಂಬದವರಿಗೆ, ನನ್ನ ಡ್ರೈವರ್‌ಗೆ ಸಹ ಇದರ ಬಗ್ಗೆ ಅನುಮಾನ ಬಂದು ನನಗೆ ಹೇಳಿದರು. ಆದರೆ ನಾನು ಪೂರ್ತಿಯಾಗಿ ನಂಬಿರಲಿಲ್ಲ. ನನ್ನ ತಂಗಿಗೂ ಈ ವಿಷಯ ಗೊತ್ತಾಗಿ ಆಕೆ ತನ್ನ ಗಂಡ ವಂಶ್‌ನನ್ನು ಕರೆದುಕೊಂಡು ಭಾರತಕ್ಕೆ ವಾಪಸ್ಸಾದಳು' ಎಂದು ಹಳೆಯ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ ರಾಜ್ ಕುಂದ್ರಾ.

  'ಸಹೋದರಿಯ ಗಂಡ ವಂಶ್‌ ಜೊತೆ ಸಂಪರ್ಕದಲ್ಲಿದ್ದಳು'

  'ಸಹೋದರಿಯ ಗಂಡ ವಂಶ್‌ ಜೊತೆ ಸಂಪರ್ಕದಲ್ಲಿದ್ದಳು'

  'ಕವಿತಾ ಗರ್ಭಿಣಿ ಆದಾಗ ನಾನು ಸಾಕಷ್ಟು ಖುಷಿ ಪಟ್ಟಿದ್ದೆ. ಆದರೆ ಮಗು ಆಗುವ ವೇಳೆಗೆ ಆಕೆ ಪೂರ್ಣ ಬದಲಾಗಿಬಿಟ್ಟಿದ್ದಳು. ಮಗು ಆದ ನಂತರ ಆಕೆ ಗಂಟೆಗಟ್ಟಲೆ ಬಾತ್‌ರೂಂ ನಲ್ಲಿ ಸಮಯ ಕಳೆಯುತ್ತಿದ್ದಳು. ನನಗೆ ಅನುಮಾನ ಬಂದಿತ್ತು ಆದರೆ ಆ ಬಗ್ಗೆ ಕೇಳಿರಲಿಲ್ಲ. ಆದರೆ ಒಂದು ದಿನ ನನ್ನ ತಂಗಿ ಭಾರತದಿಂದ ಕರೆ ಮಾಡಿ ಜೋರಾಗಿ ಅಳಲು ಆರಂಭಿಸಿದಳು. ಆಕೆ ತನ್ನ ಗಂಡನ ಬಳಿ ಎರಡನೇ ಫೋನು ಇರುವುದಾಗಿಯೂ, ಕವಿತಾ ಜೊತೆಗೆ ಆತ ದಿನವೂ ಮಾತನಾಡುತ್ತಿರುವುದಾಗಿಯೂ ಹೇಳಿದಳು. ಪರಸ್ಪರ ಅವರಿಬ್ಬರೂ ಹಂಚಿಕೊಂಡಿದ್ದ ಮೆಸೆಜ್‌ಗಳು ಇತರೆ ವಿಷಯಗಳನ್ನೂ ನನಗೆ ಹೇಳಿದಳು. ನಾನೂ ಬಾತ್‌ರೂಮ್‌ನಲ್ಲಿ ಹುಡುಕಿದಾಗ ಅಲ್ಲಿ ಕವಿತಾ ಬಚ್ಚಿಟ್ಟಿದ್ದ ಫೋನ್‌ ನನಗೆ ದೊರಕಿತು' ಎಂದಿದ್ದಾರೆ ರಾಜ್ ಕುಂದ್ರಾ.

  'ಆಕೆಯನ್ನು ಭಾರತದಲ್ಲಿ ಬಿಟ್ಟು, ಸೋದರಿಯನ್ನು ಕರೆದುಕೊಂಡು ಬಂದೆ'

  'ಆಕೆಯನ್ನು ಭಾರತದಲ್ಲಿ ಬಿಟ್ಟು, ಸೋದರಿಯನ್ನು ಕರೆದುಕೊಂಡು ಬಂದೆ'

  'ಆಗ ನಾನು ಏನೂ ಮಾತನಾಡಲಿಲ್ಲ. ಏಕೆಂದರೆ ನನ್ನ ಸಹೋದರಿ ಗರ್ಭಿಣಿ ಆಗಿದ್ದಳು. ನಾನು ನನ್ನ 40 ದಿನದ ಮಗು ಹಾಗೂ ಕವಿತಾಳನ್ನು ಕರೆದುಕೊಂಡು ಭಾರತಕ್ಕೆ ಬಂದು ಕವಿತಾಳ ಮನೆಯಲ್ಲಿ ಆಕೆಯನ್ನು ಬಿಟ್ಟೆ. ನಂತರ ನನ್ನ ಸೋದರಿಯ ಮನೆಗೆ ಹೋಗಿ ಆಕೆಯನ್ನು ಕರೆದುಕೊಂಡು ಲಂಡನ್‌ಗೆ ವಾಪಸ್ಸಾದೆ. ಅಲ್ಲಿಂದ ನಾನು ಕವಿತಾಗೆ ಹಾಗೂ ನನ್ನ ಸಹೋದರಿ ಆಕೆಯ ಪತಿ ವಂಶ್‌ಗೆ 'ಇಲ್ಲಿಗೆ ನಮ್ಮ ಸಂಬಂಧ ಮುಗಿಯಿತು' ಎಂದು ಸಂದೇಶ ಕಳಿಸಿದೆವು. ನನ್ನ 40 ದಿನದ ಮಗುವನ್ನು ಬಿಟ್ಟು ಬರಲು ನನಗೆ ಬಹಳ ಕಷ್ಟವಾಗಿತ್ತು. ಆ ನಂತರ ನನ್ನ ಸಹೋದರಿ ಇಲ್ಲಿಯೇ ಮಗುವಿನಗೆ ಜನ್ಮ ನೀಡಿದಳು. ವಂಶ್ ಅಂತೂ ಮಗುವನ್ನು ನೋಡಲು ಸಹ ಬರಲಿಲ್ಲ' ಎಂದು ನೆನಪು ಬಿಚ್ಚಿಟ್ಟಿದ್ದಾರೆ ರಾಜ್ ಕುಂದ್ರಾ.

  ಕೊರೊನಾದಿಂದ ಬಚಾವ್ ಆಗಲು 5 ಪವರ್ ಫುಲ್ ಸೂತ್ರಗಳನ್ನು ಹೇಳಿದ Puneeth | Filmibeat Kannada
  ಇಲ್ಲ ಸಲ್ಲದ ಆರೋಪ ಮಾಡಲು ಆರಂಭಿಸಿದಳು: ರಾಜ್

  ಇಲ್ಲ ಸಲ್ಲದ ಆರೋಪ ಮಾಡಲು ಆರಂಭಿಸಿದಳು: ರಾಜ್

  'ನಾನು ವಿಚ್ಛೇಧನ ಅರ್ಜಿಯನ್ನು ಹೂಡಿದೆ, ಕವಿತಾಳದ್ದು ತಪ್ಪಿದ್ದ ಕಾರಣ ಹೆಚ್ಚಿನ ಬೇಡಿಕೆ ಇಟ್ಟಿರಲಿಲ್ಲ ಆಕೆ. ನ್ಯಾಯಾಲಯದ ಒಪ್ಪಿಗೆ ಮೇರೆಗೆ ಮಗುವನ್ನು ನೋಡಲು ಹೋಗುತ್ತಿದ್ದೆ. ವಿಚ್ಛೇಧನ ಅರ್ಜಿ ವಿಚಾರಣೆ ಜಾರಿಯಲ್ಲಿದ್ದಾಗಲೇ ನನಗೆ ಶಿಲ್ಪಾ ಶೆಟ್ಟಿ ಪರಿಚಯವಾಯ್ತು. ಆ ಸುದ್ದಿ ಕವಿತಾಳಿಗೆ ಗೊತ್ತಾಗಿ ಬೇಡಿಕೆಗಳನ್ನು ಹೆಚ್ಚಿಸಿದಳು. ನಾನು ನಿರಾಕರಿಸಿದೆ. ಆಗ ನನ್ನ ವಿರುದ್ಧ, ಶಿಲ್ಪಾ ಶೆಟ್ಟಿ ವಿರುದ್ಧ ಇಲ್ಲ-ಸಲ್ಲದ ಆರೋಪಗಳನ್ನು ಮಾಡಲು ಆರಂಭಿಸಿದಳು' ಎಂದಿದ್ದಾರೆ ರಾಜ್ ಕುಂದ್ರಾ.

  English summary
  Shilpa Shetty's husband Raj Kundra talked about why he separated with his ex wife Kavitha. He said she had relationship with his sister's husband.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X