For Quick Alerts
  ALLOW NOTIFICATIONS  
  For Daily Alerts

  ಸ್ಫೋಟಕ ಮಾಹಿತಿ: ನೀಲಿ ಚಿತ್ರ ಲೈವ್ ಸ್ಟ್ರೀಮ್‌ಗೆ ಪ್ಲಾನ್ ಮಾಡಿದ್ದ ರಾಜ್ ಕುಂದ್ರ

  By ಫಿಲ್ಮಿಬೀಟ್ ಡೆಸ್ಕ್
  |

  ಅಶ್ಲೀಲ ವಿಡಿಯೋ ನಿರ್ಮಾಣ ಮಾಡಿ ಅದನ್ನು ಮೊಬೈಲ್ ಅಪ್ಲಿಕೇಶನ್ ಮೂಲಕ ಅಪ್ ಲೋಡ್ ಮಾಡುತ್ತಿದ್ದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ರಾಜ್ ಕುಂದ್ರ ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಈ ಪ್ರಕರಣದಲ್ಲಿ ಈಗಾಗಲೇ 11 ಜನರನ್ನು ಬಂಧಿಸಿರುವ ಮುಂಬೈ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

  ಇದೀಗ ಈ ಪ್ರಕರಣಕ್ಕೆ ಸಂಬಂಧಪಟ್ಟಹಾಗೆ ಕೆಲವು ಎಲೆಕ್ಟ್ರಾನಿಕ್ ಪುರಾವೆಗಳು ಸಿಕ್ಕಿದ್ದು, ಇದರಿಂದ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಅಶ್ಲೀಲತೆಯನ್ನು ನೇರ ಪ್ರಸಾರ ಮಾಡುವ ದೊಡ್ಡ ಪ್ಲಾನ್ ರಾಜ್ ಕುಂದ್ರ ಮಾಡಿದ್ದರು ಎನ್ನುವ ವಿಚಾರ ಬಹಿರಂಗವಾಗಿದೆ. ಈ ಮಾಹಿತಿಯನ್ನು ಮುಂಬೈ ಪೊಲೀಸ್ ಮೂಲಗಳು ತಿಳಿಸಿವೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ.

  ಬ್ಲೂ ಫಿಲ್ಮ್ ದಂಧೆಯಿಂದ ದೊಡ್ಡ ಮೊತ್ತದ ಹಣ ಸಂಪಾದನೆ ಮಾಡಬಹುದು ಎನ್ನುವುದು ರಾಜ್ ಕುಂದ್ರಗೆ ಚೆನ್ನಾಗಿ ಗೊತ್ತಿತ್ತು. ಹಾಗಾಗಿ ಅಶ್ಲೀಲ ವ್ಯವಹಾರವನ್ನು ದೊಡ್ಡ ಮಟ್ಟದಲ್ಲಿ ಬೆಳೆಸುವ ಪ್ಲಾನ್ ಮಾಡಿದ್ದರು, ಎಷ್ಟರ ಮಟ್ಟಿಗೆ ಅಂದರೆ ಬಾಲಿವುಡ್ ನಷ್ಟೆ ದೊಡ್ಡದಾಗಿ ಬೆಳೆಸುವ ಯೋಜನೆ ರೂಪಿಸಿದ್ದರು ಎನ್ನುವ ವಿಚಾರ ಪೊಲೀಸ್ ವಿಚಾರಣೆ ವೇಳೆ ಬಹಿರಂಗವಾಗಿದೆ ಎಂದು ಆಂಗ್ಲ ವೆಬ್ ಪೋರ್ಟಲ್‌ಗಳು ವರದಿ ಮಾಡಿವೆ.

  ಹಾಟ್ ಶಾಟ್ ಆಪ್‌ಗಳ ಮೂಲಕ ಅಶ್ಲೀಲ ವಿಡಿಯೋಗಳನ್ನು ನಿರ್ಮಾಣ ಮಾಡಿ ಅಪ್ ಲೋಡ್ ಮಾಡುತ್ತಿದ್ದರು. ಈ ಪ್ರಕರಣದಲ್ಲಿ ರಾಜ್ ಕುಂದ್ರ ಪ್ರಮುಖ ಆರೋಪಿ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.

  ಬ್ಲೂ ಫಿಲ್ಮ್ ದಂಧೆ ಆರೋಪದಲ್ಲಿ ರಾಜ್ ಕುಂದ್ರ ಅವರನ್ನು ಮುಂಬೈ ಪೊಲೀಸರು ಜುಲೈ 19ರಂದು ರಾತ್ರಿ ಬಂಧಿಸಿದ್ದರು. ಇದೀಗ ಜುಲೈ 23ರ ವರೆಗೂ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ರಾಜ್ ಕುಂದ್ರ ಬಂಧನದ ಬಳಿಕ ಸಾಕಷ್ಟು ಸ್ಫೋಟಕ ಮಾಹಿತಿಗಳು ಬಹಿರಂಗವಾಗುತ್ತಿದೆ. ನೀಲಿ ಚಿತ್ರದಿಂದ ಹೇಗೆಲ್ಲ ವ್ಯವಹಾರ ಮಾಡುತ್ತಿದ್ದರು, ದೊಡ್ಡ ಮೊತ್ತದ ಹಣ ಹೇಗೆ ಸಂಪಾದನೆ ಮಾಡುತ್ತಿದ್ದರು ಎಂದು ರಾಜ್ ಕುಂದ್ರ ಮತ್ತು ಅವರ ಪಾರ್ಟನರ್ ನಡೆಸಿದ ವಾಟ್ಸಪ್ ಚಾಟ್‌ಗಳಿಂದ ಬಹಿರಂಗವಾಗಿದೆ.

  ಪತಿ ಅರೆಸ್ಟ್ ಆದ ಬಳಿಕ ಮೊದಲ ಬಾರಿಗೆ ಮೌನ ಮುರಿದ ಶಿಲ್ಪಾ ಶೆಟ್ಟಿ

  ಸದ್ಯ ಈ ಪ್ರಕರಣದ ವಿಚಾರಣೆ ಇನ್ನು ಮುಂದುವರೆದಿದ್ದು, ಇನ್ನು ಯಾವೆಲ್ಲ ವಿಚಾರಗಳು ಬಹಿರಂಗವಾಗಲಿದೆ ಎಂದು ಕಾದುನೋಡಬೇಕು.

  English summary
  Raj Kundra wanted to make Live adult content business as big as Bollywood – Mumbai police sources.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X