For Quick Alerts
  ALLOW NOTIFICATIONS  
  For Daily Alerts

  ರಜನಿ-ಶಿವಣ್ಣ ಸಿನಿಮಾ ಟೈಟಲ್ 'ಜೈಲರ್': ಒಂದೇ ಲೋಕೇಶ್‌ನಲ್ಲಿ ಶೂಟಿಂಗ್? ಫ್ಯಾನ್ಸ್‌ಗೆ ಟೆನ್ಷನ್!

  |

  ಸೂಪರ್‌ಸ್ಟಾರ್ ರಜನಿಕಾಂತ್ 169ನೇ ಸಿನಿಮಾದ ಹಲವು ಕಾರಣಗಳಿಗೆ ಕುತೂಹಲ ಕೆರಳಿಸಿದೆ. ಅದಕ್ಕೆ ಎರಡು ಕಾರಣ. ಒಂದು ಇದೇ ಮೊದಲ ಬಾರಿಗೆ ರಜನಿಕಾಂತ್ ಇಬ್ಬರ ಜೊತೆ ಕೆಲಸ ಮಾಡುತ್ತಿದ್ದಾರೆ. ಒಬ್ಬರು ಸೆಂಚುರಿಸ್ಟಾರ್ ಶಿವರಾಜ್‌ಕುಮಾರ್. ಇನ್ನೊಬ್ಬರು ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್.

  ರಜನಿಕಾಂತ್ 169ನೇ ಸಿನಿಮಾ ನಿರ್ಮಿಸುತ್ತಿರುವ ಸನ್ ಪಿಕ್ಚರ್ ಹೇಳಿದಂತೆ ದೊಡ್ಡ ಅನೌನ್ಸ್‌ಮೆಂಟ್ ಮಾಡಿದೆ. ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ಶಿವರಾಜ್‌ಕುಮಾರ್ ಸಿನಿಮಾ ಟೈಟಲ್ ಅನೌನ್ಸ್ ಮಾಡಿದೆ. ಈ ಸಿನಿಮಾಗೆ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ 'ಜೈಲರ್' ಅಂತ ಫಿಕ್ಸ್ ಮಾಡಿದ್ದು, ಶೀಘ್ರದಲ್ಲಿಯೇ ಶೂಟಿಂಗ್ ಆರಂಭ ಆಗಲಿದೆ.

  Rajinikanth 169: ರಜನಿ ಜೊತೆ ಮತ್ತೆ ಐಶ್ವರ್ಯಾ ರೈ ರೊಮ್ಯಾನ್ಸ್: ಶಿವಕಾರ್ತಿಕೇಯನ್, ಪ್ರಿಯಾಂಕಾ ಪಾತ್ರವೇನು?Rajinikanth 169: ರಜನಿ ಜೊತೆ ಮತ್ತೆ ಐಶ್ವರ್ಯಾ ರೈ ರೊಮ್ಯಾನ್ಸ್: ಶಿವಕಾರ್ತಿಕೇಯನ್, ಪ್ರಿಯಾಂಕಾ ಪಾತ್ರವೇನು?

  ರಜನಿಕಾಂತ್ ಸಿನಿಮಾ ಟೈಟಲ್ ಅನೌನ್ಸ್ ಆಗಿದ್ದೇನೋ ಹೌದು. ಆದರೆ, 'ಜೈಲರ್' ಅಂತ ಟೈಟಲ್ ಘೋಷಣೆಯಾಗುತ್ತಿದ್ದಂತೆ ರಜನಿ ಅಭಿಮಾನಿಗಳಿಗೆ ಫುಲ್ ಟೆನ್ಷನ್ ಶುರುವಾಗಿದೆ. ಈ ಹಿಂದೆ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶಿಸಿದ 'ಬೀಸ್ಟ್'ವನ್ನು ನೆನಪಿಸಿದೆ. ಅಷ್ಟಕ್ಕೂ ಸೂಪರ್‌ಸ್ಟಾರ್ ಫ್ಯಾನ್ಸ್ ಇಷ್ಟೊಂದು ಗೊಂದಲಕ್ಕೆ ಬೀಳುವುದಕ್ಕೆ ಕಾರಣವೇನು? ಅಂತ ತಿಳಿಯಲು ಮುಂದೆ ಓದಿ.

  'ಜೈಲರ್' ಹೈಲೈಟ್ ಏನು?

  'ಜೈಲರ್' ಹೈಲೈಟ್ ಏನು?

  'ಜೈಲರ್' ನಿರ್ಮಾಣ ಸಂಸ್ಥೆ ಸನ್ ಪಿಕ್ಚರ್ಸ್ ಟೈಟಲ್ ಹಾಗೂ ಫಸ್ಟ್ ಲುಕ್‌ ಅನ್ನು ರಿಲೀಸ್ ಮಾಡಿದೆ. ಫಸ್ಟ್ ಲುಕ್‌ನಲ್ಲಿ ಆಯುಧವೊಂದನ್ನು ಇಟ್ಟಿದ್ದು, ಅದರಲ್ಲಿ ರಕ್ತವನ್ನು ಚೆಲ್ಲಿದೆ. ಈ ಫಸ್ಟ್ ಲುಕ್ ನೋಡಿದ್ಮೇಲೆ 'ಜೈಲರ್' ಸಿನಿಮಾ ಪಕ್ಕಾ ಮಾಸ್ ಸಿನಿಮಾ ಅಂತ ಅಭಿಮಾನಿಗಳೇ ಗೆಸ್ ಮಾಡಿದ್ದಾರೆ. ಆದರೆ, ನೆಲ್ಸನ್ ದಿಲೀಪ್ ಕುಮಾರ್ ಯಾವ ರೀತಿ ಸಿನಿಮಾ ಮಾಡುತ್ತಾರೆ ಎನ್ನುವ ಕುತೂಹಲವಂತೂ ಅಭಿಮಾನಿಗಳಲ್ಲಿದೆ.

  ರಾಜಕೀಯ ಹಾಗೂ ಸ್ನೇಹ ಬೇರೆ ಬೇರೆ ಎಂದ ಬಳಿಕವೇ ರಜನಿ ಭೇಟಿ ಮಾಡಿದ ಕಮಲ್ ಹಾಸನ್!ರಾಜಕೀಯ ಹಾಗೂ ಸ್ನೇಹ ಬೇರೆ ಬೇರೆ ಎಂದ ಬಳಿಕವೇ ರಜನಿ ಭೇಟಿ ಮಾಡಿದ ಕಮಲ್ ಹಾಸನ್!

  ಜೈಲರ್ ಟೈಟಲ್ ನೋಡಿ ಹೌಹಾರಿದ ಫ್ಯಾನ್ಸ್

  ರಜನಿಕಾಂತ್ 169ನೇ ಸಿನಿಮಾದ ಟೈಟಲ್ 'ಜೈಲರ್' ಎನ್ನುತ್ತಿದ್ದಂತೆ ಅಭಿಮಾನಿಗಳು ಹೌಹಾರಿದ್ದಾರೆ. ಅದಕ್ಕೆ ಕಾರಣ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶಿಸಿದ ಸಿನಿಮಾ 'ಬೀಸ್ಟ್'. ದಳಪತಿ ವಿಜಯ್ ಅಭಿನಯದ ಈ ಸಿನಿಮಾ ಒಂದೇ ಮಾಲ್‌ನಲ್ಲಿ ಶೂಟಿಂಗ್ ಮಾಡಲಾಗಿತ್ತು. ಈಗ 'ಜೈಲರ್‌' ಕೂಡ ಒಂದೇ ಲೋಕೇಶ್‌ನಲ್ಲಿ ಶೂಟಿಂಗ್ ಮಾಡುತ್ತಾರಾ ಎಂಬ ಅನುಮಾನ ಕಾಡಲು ಶುರುವಾಗಿದೆ. 'ಬೀಸ್ಟ್' ಸೋಲು ಕಂಡಂತೆ 'ಜೈಲರ್' ಕೂಡ ಒಂದೇ ಲೋಕೇಶ್‌ನಲ್ಲಿ ಶೂಟ್ ಮಾಡಿ ಸೋತರೆ ಅಂತ ಭಯಪಡುತ್ತಿದ್ದಾರೆ. ಇನ್ನು ಕೆಲವರು ಸಿನಿಮಾದಲ್ಲಿ ಪ್ರಯೋಗ ಆಗುತ್ತಿದೆ. ಸಪೋರ್ಟ್ ಮಾಡಿ ಎನ್ನುತ್ತಿದ್ದಾರೆ.

  ಒಂದೇ ಸ್ಥಳದಲ್ಲಿ ಶೂಟಿಂಗ್?

  ಒಂದೇ ಸ್ಥಳದಲ್ಲಿ ಶೂಟಿಂಗ್?

  'ಬೀಸ್ಟ್' ಸಿನಿಮಾದಂತೆ ಒಂದೇ ಜಾಗದಲ್ಲಿಯೇ ಸಿನಿಮಾ ಮೇಜರ್ ಪೋಷನ್‌ ಶೂಟಿಂಗ್ ನಡೆಯಲಿದೆ ಎನ್ನಲಾಗುತ್ತಿದೆ. ಟೈಟಲ್‌ಗೆ ತಕ್ಕಂತೆ ಸೂಪರ್‌ಸ್ಟಾರ್ ರಜನಿಕಾಂತ್ ಜೈಲರ್ ಪಾತ್ರದಲ್ಲಿ ಕಾಣಿಸಿಕೊಳ್ಳಬಹುದು ಎಂದು ಊಹೆ ಮಾಡಲಾಗಿದೆ. ಅಲ್ಲದೆ, ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಕೂಡ ನಟಿಸುತ್ತಿರುವುದರಿಂದ ಸಿನಿಮಾ ಪವರ್‌ಫುಲ್ ಆಗಿರುತ್ತೆ ಎಂದು ಊಹೆ ಮಾಡಲಾಗಿದೆ. ರಜನಿ ಜೊತೆ ಸ್ಟ್ರಾಂಗ್ ವಿಲನ್ ಕೂಡ ಇರುತ್ತಾರೆ ಅಂತ ಕಾಲಿವುಡ್ ಗೆಸ್ ಮಾಡುತ್ತಿದೆ.

  'ಶಿವಾಜಿ'ಗೆ 15 ವರ್ಷ ಹಿನ್ನೆಲೆ ರಜನಿ-ಶಂಕರ್ ಭೇಟಿ: ಇಲ್ಲಿದೆ ಇಂಟ್ರೆಸ್ಟಿಂಗ್ ಮ್ಯಾಟರ್!'ಶಿವಾಜಿ'ಗೆ 15 ವರ್ಷ ಹಿನ್ನೆಲೆ ರಜನಿ-ಶಂಕರ್ ಭೇಟಿ: ಇಲ್ಲಿದೆ ಇಂಟ್ರೆಸ್ಟಿಂಗ್ ಮ್ಯಾಟರ್!

  ಸೂಪರ್‌ ಹಿಟ್ ಆಗಿತ್ತು 'ಅಣ್ಣಾತ್ತೆ'

  ಸೂಪರ್‌ ಹಿಟ್ ಆಗಿತ್ತು 'ಅಣ್ಣಾತ್ತೆ'

  ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ 'ಅಣ್ಣಾತ್ತೆ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೂಪರ್‌ ಹಿಟ್ ಆಗಿತ್ತು. ಶಿವ ನಿರ್ದೇಶಿಸಿದ ಈ ಸಿನಿಮಾಗೆ ಮೊದಲ ದಿನವೇ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೂ, ಜನರು ಮಾತ್ರ ಕೈ ಬಿಡಲಿಲ್ಲ. ಗ್ರಾಮೀಣ ಭಾಗದ ಕಥೆಯಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಮಿಂಚಿದ್ದರು. ರಜನಿ ಅಭಿಮಾನಿಗಳು ಈ ಸಿನಿಮಾ ನೋಡಿ ಎಂಜಾಯ್ ಮಾಡಿದ್ದರು. ಈಗ ರಜನಿಯ 169ನೇ ಸಿನಿಮಾ ಬಗ್ಗೆ ಮತ್ತಷ್ಟು ಕೌತುಕ ಹೆಚ್ಚಾಗಿದೆ.

  English summary
  Rajinikanth 169 Movie Titled Jailer: Nelson Dilipkumar Directorial Film First Look, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X