ತಲೈವಾ, ಯಶ್, ಮಹೇಶ್ ಬಾಬು ; ಅನಂತ್ ಅಂಬಾನಿ ಮದ್ವೆಯಲ್ಲಿ ಸೌತ್ ಸ್ಟಾರ್ಸ್ ಮಿಂಚಿಂಗೋ ಮಿಂಚಿಂಗು..!
ಭಾರತದ ಅತಂತ್ಯ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಅವರ ಮಗನ ಮದುವೆಯ ಸಮಾರಂಭದ ಸಂಭ್ರಮದ ಮುಂಬೈನಲ್ಲಿ ಮೆಳೈಸಿದೆ. ಮುಂಬೈನ ಜಿಯೋ ವರ್ಲ್ಡ್‌ನಲ್ಲಿ ಮೂರು ದಿನಗಳ ಕಾಲ ನಡೆಯುವ ಸಮಾರಂಭದಲ್ಲಿ ಹಲವು ದೇಶ ಹಾಗೂ ವಿದೇಶಿ ಗಣ್ಯರು ಭಾಗವಹಿಸಿದ್ದಾರೆ. ಇನ್ನೂ.. ಬಾಲಿವುಡ್ ತಾರೆಯರ ಕಲರವದ ನಡುವೆ, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಮಹೋತ್ಸವದಲ್ಲಿ ಸೌತ್ ಸೂಪರ್ ಸ್ಟಾರ್ಸ್ ಕೂಡ ಕಣ್ಮನ ಸೆಳೆದಿದ್ದಾರೆ.
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆ ಕಣ್ತುಂಬಿಕೊಳ್ಳಲು ಸೂಪರ್ ಸ್ಟಾರ್ ರಜಿನಿಕಾಂತ್ ತಮ್ಮ ಪತ್ನಿ ಲತಾ ಹಾಗೂ ಪುತ್ರಿ ಸೌಂದರ್ಯ ಜೊತೆ ತಮಿಳು ಸಂಪ್ರದಾಯದ ಡ್ರೆಸ್‌ನಲ್ಲಿ ಕಂಗೊಳಿಸಿದರೆ, ಬಾಹುಬಲಿಯ ಬಲ್ಲಾಳದೇವ ರಾಣಾ ದಗ್ಗುಬಾಟಿ ತಮ್ಮ ಪತ್ನಿ ಮೀಹಿಕಾ ಜೊತೆ ಮಿಂಚಿದರು. ರಾಣಾ ಬಿಳಿ ಬಣ್ಣದ ಶೆರವಾನಿಯನ್ನೂ ಧರಿಸಿದ್ದರೆ, ಮೀಹಿಕಾ ಕೆಂಪು ಬಣ್ಣದ ಲೆಹೆಂಗಾ ಧರಿಸಿದ್ದರು.

ಇನ್ನೂ ತೆಲುಗು ಚಿತ್ರರಂಗದ ಪ್ರಿನ್ಸ್ ಮಹೇಶ್ ಬಾಬು ತಮ್ಮ ಪುತ್ರಿ ಸಿತಾರ ಮತ್ತು ಪತ್ನಿ ನಮ್ರತಾ ಜೊತೆ ಈ ಈ ವೈಭವೋಪೇತ ಮದುವೆಯಲ್ಲಿ ಭಾಗಿಯಾಗಿದ್ದರು. ರಾಮ್ ಚರಣ್ ತೇಜಾ ತಮ್ಮ ಪತ್ನಿ ಉಪಾಸನಾ ಜೊತೆ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರಿಗೆ ಶುಭಾಶಯವನ್ನೂ ಕೋರಲು ಬಂದಿದ್ದರು.
ಕಾಲಿವುಡ್‌ನಿಂದ ಸೂರ್ಯ ಮತ್ತು ಜ್ಯೋತಿಕಾ ಈ ವಿವಾಹ ಮಹೋತ್ಸವಕ್ಕೆ ಬಂದಿದ್ದರು. ಸೂರ್ಯ ಬಿಳಿ ಬಣ್ಣದ ಪಂಚೆಯಲ್ಲಿ ಮಿಂಚಿದರೆ, ಜ್ಯೋತಿಕಾ ಗೋಲ್ಡನ್ ಸಿಲ್ಕ್ ಕಾಂಚೀಪುರಂ ಸೀರೆಯಲ್ಲಿ ಕಂಗೊಳಿಸಿದರು.

ದಕ್ಷಿಣದ ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ಪತಿ ವಿಘ್ನೇಶ್ ಶಿವನ್ ಜೊತೆ ಅನಂತ್ ಅಂಬಾನಿ ಮದುವೆ ಸಮಾರಂಭಕ್ಕೆ ಬಂದಿದ್ದರು. ನಯನತಾರಾ ಸಿಲ್ಕ್ ಸೀರೆ ಧರಿಸಿದ್ದರೆ ವಿಘ್ನೇಶ್ ಶಿವನ್ ಸಿಲ್ಕ್ ಬಣ್ಣದ ಪಂಚೆ ಮತ್ತು ಶರ್ಟ್ ಧರಿಸಿದ್ದರು. ಕೇವಲ ಇವರಷ್ಟೇ ಅಲ್ಲ ಈ ಭವ್ಯ ಮದುವೆ ಸಮಾರಂಭದಲ್ಲಿ ತೆಲುಗು ಸ್ಟಾರ್ ವೆಂಕಟೇಶ್, ನಟಿ ಪೂಜಾ ಹೆಗ್ಡೆ ಸೇರಿ ಅನೇಕ ದಕ್ಷಿಣ ಭಾರತೀಯ ಚಿತ್ರರಂಗದ ತಾರೆಯರು ಭಾಗಿಯಾಗಿದ್ದರು.
ಇನ್ನೂ ಕನ್ನಡ ಚಿತ್ರರಂಗದ ಪ್ರತಿನಿಧಿಯಾಗಿ ರಾಕಿಂಗ್ ಸ್ಟಾರ್ ಯಶ್ ತಮ್ಮ ಪತ್ನಿ ರಾಧಿಕಾ ಜೊತೆ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಶುಭಾಶಯ ಕೋರಲು ಮದುವೆಗೆ ಬಂದಿದ್ದರು. ಬಾಲಿವುಡ್‌ನಿಂದ ಶಾರುಖ್ ಖಾನ್, ಸಲ್ಮಾನ್ ಖಾನ್, ಸುಹಾನಾ ಖಾನ್, ರೇಖಾ, ಸಂಜಯ್ ದತ್ ಕೂಡ ಬಂದಿದ್ದರು. ಕುಣಿದು ಕುಪ್ಪಳಿಸಿದರು.
ಕೇವಲ ಇವರಷ್ಟೇ ಅಲ್ಲ ಅಕ್ಷಯ್ ಕುಮಾರ್ ಹೊರತು ಪಡಿಸಿ ವಿದ್ಯಾ ಬಾಲನ್, ರಾಜ್ ಕುಮಾರ್ ರಾವ್, ಸಿದ್ಧಾರ್ಥ್ ಆನಂದ್ ಮತ್ತು ಕಿಯಾರಾ ಅಡ್ವಾಣಿ, ಅಮಿತಾಭ್ ಬಚ್ಚನ್ ಕುಟುಂಬ, ಐಶ್ವರ್ಯ ರೈ, ಶನಾಯಾ ಕಪೂರ್, ಅನಿಲ್ ಕಪೂರ್, ಪ್ರಿಯಾಂಕ ಚೋಪ್ರಾ ಮತ್ತು ನಿಕ್ ಜೋನಸ್, ಸಾರಾ ಅಲಿ ಖಾನ್ ಮತ್ತು ಅವರ ಸಹೋದರ ಇಬ್ರಾಹಿಂ ಅಲಿ ಖಾನ್, ಅನನ್ಯ ಪಾಂಡೆ, ಅರ್ಜುನ್ ಕಪೂರ್, ಜೆನಿಲಿಯಾ ಮತ್ತು ರಿತೇಶ್ ದೇಶಮುಖ್, ಟೈಗರ್ ಶ್ರಾಫ್, ಸುನಿಲ್ ಶೆಟ್ಟಿ ಮತ್ತು ಕೆ.ಎಲ್ ರಾಹುಲ್ ಕುಟುಂಬ, ಜಾನ್ ಅಬ್ರಾಹಿಂ, ರಣ್ಭೀರ್ ಕಪೂರ್ ಮತ್ತು ಆಲಿಯಾ ಭಟ್, ಹೀಗೆ ಬಾಲಿವುಡ್‌ನ ಬಹುತೇಕ ಸ್ಟಾರ್ಸ್ ಗಳು ಈ ಅದ್ಧೂರಿ ಮದುವೆಯ ಸಮಾರಂಭಕ್ಕೆ ಆಗಮಿಸಿದ್ದರು. ಮದುವೆಯ ಕಳೆಯನ್ನೂ ಹೆಚ್ಚಿಸಿದರು.


Click it and Unblock the Notifications











