For Quick Alerts
  ALLOW NOTIFICATIONS  
  For Daily Alerts

  ಸೂಪರ್ ಸ್ಟಾರ್ ರಜನಿ ಖಾತೆಗೆ ನೂತನ ದಾಖಲೆ.! ಅದು '2.0' ಚಿತ್ರದಿಂದಾಗಿ..

  By Harshitha
  |

  ದಕ್ಷಿಣ ಭಾರತದ ಸ್ಟಂಟ್ ಗಾಡ್... ಸೂಪರ್ ಸ್ಟಾರ್ ರಜನಿಕಾಂತ್ ಖಾತೆಗೆ ಹೊಸ ದಾಖಲೆ ಸೇರ್ಪಡೆ ಆಗಿದೆ. ಬಿಡುಗಡೆಗೂ ಮುನ್ನವೇ 'ತಲೈವಾ' ರಜನಿಕಾಂತ್ ಅಭಿನಯದ ರೋಬೋ '2.0' ಚಿತ್ರ ಹೊಸ ರೆಕಾರ್ಡ್ ಕ್ರಿಯೇಟ್ ಮಾಡಿದೆ.

  ಶಂಕರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ.. ರಜನಿಕಾಂತ್, ಆಮಿ ಜಾಕ್ಸನ್, ಅಕ್ಷಯ್ ಕುಮಾರ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ '2.0' ಚಿತ್ರದ ಹಿಂದಿ ಥಿಯೇಟ್ರಿಕಲ್ ರೈಟ್ಸ್ ದಾಖಲೆ ಮೊತ್ತಕ್ಕೆ ಸೇಲ್ ಆಗಿದೆ.

  ಮೂಲಗಳ ಪ್ರಕಾರ, ಬರೋಬ್ಬರಿ 80 ಕೋಟಿ ಮೊತ್ತಕ್ಕೆ '2.0' ಚಿತ್ರದ ಹಿಂದಿ ಥಿಯೇಟ್ರಿಕಲ್ ರೈಟ್ಸ್ ಬಿಕರಿ ಆಗಿದೆ. ಅಷ್ಟಕ್ಕೂ, '2.0' ಚಿತ್ರದ ನಿರ್ಮಾಪಕರು 100 ಕೋಟಿ ಡಿಮ್ಯಾಂಡ್ ಮಾಡಿದ್ದರಂತೆ. ಕಡೆಗೆ 80 ಕೋಟಿ ರೂಪಾಯಿಗೆ ಡೀಲ್ ಕುದುರಿದೆ.

  '2.0' ಚಿತ್ರದಲ್ಲಿ ಅಕ್ಷಯ್ ಕುಮಾರ್ ಕೂಡ ಪ್ರಮುಖ ಪಾತ್ರ ನಿರ್ವಹಿಸಿರುವುದರಿಂದ, ಬಿಟೌನ್ ನಲ್ಲೂ ಈ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡಲಿದೆ ಎಂಬ ನಂಬಿಕೆ ವಿತರಕರು ಹಾಗೂ ಪ್ರದರ್ಶಕರಿಗೆ ಇದೆ. '2.0' ಸಿನಿಮಾ ಮುಂದಿನ ವರ್ಷ ತೆರೆಗೆ ಬರಲಿದೆ.

  English summary
  Super Star Rajinikanth and Akshay Kumar starrer '2.0' hindi theatrical rights has been sold to a whopping 80 crores.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X