twitter
    For Quick Alerts
    ALLOW NOTIFICATIONS  
    For Daily Alerts

    ರಜನಿಕಾಂತ್ ರಾಜಕೀಯ ಪ್ರವೇಶಕ್ಕೆ ಬಿಗ್‌ ಬಿ ಅಂತಿಮ ಸಲಹೆ ಬೇಕಂತೆ!

    By Suneel
    |

    ಸ್ಟಂಟ್ ಗಾಡ್ ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶದ ಬಗ್ಗೆ ದಿನದಿಂದ ದಿನಕ್ಕೆ ಸುದ್ದಿ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ರಜನಿಯೇ ಹೊಸ ಪಕ್ಷ ಕಟ್ಟಲಿದ್ದಾರೆ ಎಂಬ ಸುದ್ದಿ ಈಗಾಗಲೇ ಹರಿದಾಡಿದೆ.

    ಅಂದಹಾಗೆ ಈಗಿನ ಲೇಟೆಸ್ಟ್ ಸುದ್ದಿ ಏನಂದ್ರೆ ರಜನಿಕಾಂತ್ ರವರು ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ರಲ್ಲಿ ಅಂತಿಮ ಸಲಹೆ ಕೇಳಲು ನಿರ್ಧಿರಿಸಿದ್ದಾರಂತೆ. ಅವರೊಂದಿಗೆ ಮಾತುಕತೆ ನಡೆಸಿದ ನಂತರ ರಜನಿಕಾಂತ್ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರಂತೆ. ಮುಂದೆ ಓದಿರಿ..

    ರಜನಿ ರಾಜಕೀಯ ಪ್ರವೇಶ

    ರಜನಿ ರಾಜಕೀಯ ಪ್ರವೇಶ

    ಸೂಪರ್ ಸ್ಟಾರ್ ರಜನಿಕಾಂತ್ ವಯಸ್ಸನ್ನು ಲೆಕ್ಕಿಸದೇ ಸಿನಿಮಾದಲ್ಲಿ ಯಾವುದೇ ಸ್ಟಂಟ್ ಮಾಡಲು ಮುಂದಾಗುತ್ತಾರೆ. ಇತ್ತೀಚಿನ ದಿನಗಳಲ್ಲಿ ಅವರ ಅಪಾರ ಅಭಿಮಾನಿಗಳ ಒತ್ತಡದಿಂದ ರಾಜಕೀಯದ ಕಡೆ ಒಲವು ತೋರಿದ್ದಾರೆ. ಆದರೂ ತಾವು ರಾಜಕೀಯಕ್ಕೆ ಪ್ರವೇಶ ಮಾಡುವುದೋ ಬೇಡವೋ ಎಂಬ ಗೊಂದಲದಲ್ಲಿದ್ದು ಈಗ ಬಣ್ಣದ ಜಗತ್ತಿನ ನೆಚ್ಚಿನ ಗೆಳೆಯ ಅಮಿತಾಬ್ ಬಚ್ಚನ್ ರನ್ನು ಅಂತಿಮ ಸಲಹೆ ಕೇಳಲು ನಿರ್ಧರಿಸಿದ್ದಾರಂತೆ.

    ಅಮಿತಾಬ್ ರಲ್ಲಿ ಸಲಹೆ ಬಯಸಲು ಕಾರಣ

    ಅಮಿತಾಬ್ ರಲ್ಲಿ ಸಲಹೆ ಬಯಸಲು ಕಾರಣ

    ಬಾಲಿವುಡ್ ನಟ ಅಮಿತಾಬ್ ಬಚ್ಚನ್ ರವರಿಗೆ ರಾಜಕೀಯದ ನಂಟು ಹಳೆಯದು. 1984 ರಲ್ಲಿ ಕಾಂಗ್ರೆಸ್ ಪಕ್ಷ ಸೇರಿ ಉತ್ತರ ಪ್ರದೇಶದ ಅಲಹಾಬಾದ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಅಲ್ಲದೇ ಆ ಕ್ಷೇತ್ರದ ಮಾಜಿ ಮುಖ್ಯಮಂತ್ರಿ ಎಚ್‌.ಎನ್‌.ಬಹುಗುಣ ವಿರುದ್ಧ ದಾಖಲೆಯ ಅಂತರದಿಂದ ವಿಜಯ ಸಾಧಿಸಿದ್ದರು. ಆದರೆ ಬೊಪೋರ್ಸ್ ಹಗರಣದ ನಂತರ ಕಾಂಗ್ರೆಸ್ ತೊರೆದಿದ್ದರು. ತದನಂತರ ರಾಜಕೀಯದ ಕಡೆಗೆ ಮುಖಮಾಡಿಲ್ಲ. ಒಬ್ಬ ನಟನಾಗಿ ಅವರಿಗೆ ರಾಜಕೀಯದ ಅನುಭವ ಇರುವ ಕಾರಣ ರಜನಿಕಾಂತ್ ಈಗ ಅವರ ಸಲಹೆ ಕೇಳಲು ಮುಂದಾಗಿದ್ದಾರೆ.

    ರಜನಿ ಕುಟುಂಬದವರಿಂದ ವಿರೋಧ

    ರಜನಿ ಕುಟುಂಬದವರಿಂದ ವಿರೋಧ

    ಅಂದಹಾಗೆ ರಜನಿಕಾಂತ್ ರಾಜಕೀಯಕ್ಕೆ ಒಲವು ತೋರಿದ್ದರು ಅವರ ಕುಟುಂಬ ಸದಸ್ಯರು ಸಂಪೂರ್ಣ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅಮಿತಾಬ್ ಬಚ್ಚನ್ ರಾಜಕೀಯಕ್ಕೆ ಪಾದಾರ್ಪಣೆ ಮಾಡಿ ಹಿಂದಿರಿಗಿದ್ದಾರೆ. ಅವರು ಇಂದಿಗೂ ಸಹ ರಾಜಕೀಯದ ಕಹಿ ನೆನಪುಗಳನ್ನು ಇವತ್ತಿಗೂ ಬೇಸರದಿಂದ ಸ್ಮರಿಸುತ್ತಿದ್ದಾರೆ ಎಂದು ರಜನಿಗೆ ಉದಾಹರಣೆ ನೀಡಿ ರಾಜಕೀಯ ಪ್ರವೇಶ ಬೇಡ ಎನ್ನುತ್ತಿದ್ದಾರೆ.

    ಬಚ್ಚನ್ ಸಲಹೆ ನಂತರ ಅಂತಿಮ ತೀರ್ಮಾನ

    ಬಚ್ಚನ್ ಸಲಹೆ ನಂತರ ಅಂತಿಮ ತೀರ್ಮಾನ

    ತಮ್ಮಲ್ಲಿನ ಗೊಂದಲಗಳಿಗೆ ರಜನಿಕಾಂತ್ ರವರು ಅಮಿತಾಬ್ ಬಚ್ಚನ್ ರಲ್ಲಿ ಸಲಹೆ ಕೇಳಲು ಮುಂದಾಗಿದ್ದು, ಅವರ ಜೊತೆ ಮಾತುಕತೆ ನಂತರ ರಜನಿಕಾಂತ್ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.

    ರಜನಿ-ಅಮಿತಾಬ್

    ರಜನಿ-ಅಮಿತಾಬ್

    ರಜನಿಕಾಂತ್ ಮತ್ತು ಅಮಿತಾಬ್ ಬಚ್ಚನ್ ರವರು 1991 ಫೆಬ್ರವರಿ ಯಲ್ಲಿ ಬಿಡುಗಡೆ ಆದ 'ಹಮ್' ಹಿಂದಿ ಚಿತ್ರದಲ್ಲಿ ಒಟ್ಟಿಗೆ ತೆರೆಹಂಚಿಕೊಂಡಿದ್ದರು. ಈ ಚಿತ್ರದಲ್ಲಿ ರಜನಿಕಾಂತ್ 'ಕುಮಾರ್ ಮಲ್ಹೋತ್ರ' ಎಂಬ ರೋಲ್ ನಿರ್ವಹಿಸಿದ್ದರು. ಅಂದಿನಿಂದ ರಜನಿ ಮತ್ತು ಬಿಗ್ ಬಿ ನಡುವೆ ಉತ್ತಮ ಗೆಳತನವಿದೆ.

    ರಾಜಕೀಯಕ್ಕೆ ಸೇರಿದ ಮೇಲು ಸಿನಿಮಾ ಮಾಡ್ತಾರಾ ರಜನಿ?

    ರಾಜಕೀಯಕ್ಕೆ ಸೇರಿದ ಮೇಲು ಸಿನಿಮಾ ಮಾಡ್ತಾರಾ ರಜನಿ?

    ಅಭಿಮಾನಿಗಳ ಈ ಕುತೂಹಲಕಾರಿ ಪ್ರಶ್ನೆಗೆ ರಜನಿಕಾಂತ್ ರವರೇ ಉತ್ತರಿಸಬೇಕು. ಅವರು ಇನ್ನು ರಾಜಕೀಯಕ್ಕೆ ಅಧಿಕೃತವಾಗಿ ಪಾದಾರ್ಪಣೆ ಮಾಡಿಲ್ಲ. ಒಂದು ವೇಳೆ ಅವರು ಅಮಿತಾಬ್ ಭೇಟಿ ನಂತರ ರಾಜಕೀಯ ಪ್ರವೇಶಕ್ಕೆ ಮುಂದಾದಲ್ಲಿ ನಂತರ ಸಿನಿಮಾ ಮಾಡುತ್ತಾರಾ? ಇಲ್ಲವಾ? ಎಂಬುದಕ್ಕೆ ಅವರೇ ಉತ್ತರಿಸಲಿದ್ದಾರೆ. ಆದರೆ ಅವರ ಆರೋಗ್ಯ ಸಮಸ್ಯೆ ಬಗ್ಗೆ ಕುಟುಂಬದವರಿಗೆ ಹೆಚ್ಚು ಕಳವಳ ಇದೆ. ಹೀಗಾಗಿ ಪುತ್ರಿ ಒಂದು ವರ್ಷದಲ್ಲಿ ಒಂದೇ ಸಿನಿಮಾ ಮಾಡುವಂತೆ ನಿರ್ಬಂಧ ಹೇರಿದ್ದಾರೆ.

    'ಕಾಲ ಕರಿಕಾಲನ್' ನಲ್ಲಿ ರಜನಿ ಬ್ಯುಸಿ

    'ಕಾಲ ಕರಿಕಾಲನ್' ನಲ್ಲಿ ರಜನಿ ಬ್ಯುಸಿ

    ರಾಜಕೀಯ ಪ್ರವೇಶಕ್ಕೆ ಮುಂದಾಗಿರುವ ರಜನಿಕಾಂತ್ ರವರು ಇತ್ತ ಪಾ ರಂಜಿತ್ ನಿರ್ದೇಶನದ 'ಕಾಲ ಕರಿಕಾಲನ್' ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಅಲ್ಲದೇ ಅವರ ಅಭಿನಯದ ಬಹುನಿರೀಕ್ಷಿತ ಚಿತ್ರ '2.0' ಅಕ್ಟೋಬರ್ ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

    English summary
    Rajinikanth To Meet Amitabh Bachchan To Get Some Advice On Joining Active Politics.
    Thursday, June 29, 2017, 13:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X