ದೇಶದಲ್ಲಿ ಸಲಾರ್ ಅಬ್ಬರ: ವಿದೇಶದಲ್ಲಿ 'ಸಲಾರ್' ಎದುರು ಶಾರುಖ್ ಖಾನ್ ನಟನೆಯ 'ಡಂಕಿ' ಪ್ರಾಬಲ್ಯ!

ಬಾಹುಬಲಿ ಸಿನಿಮಾಗಳಿಂದ ಪ್ಯಾನ್ ಇಂಡಿಯಾ ಸ್ಟಾರ್ ಆದ ನಟ ಪ್ರಭಾಸ್ ಅಭಿನಯದ 'ಸಲಾರ್' ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉತ್ತಮ ಆರಂಭ ಪಡೆದುಕೊಂಡಿದೆ. ಉತ್ತರ ಅಮೆರಿಕಾದಲ್ಲಿನ ಪ್ರೀಮಿಯರ್ ಶೋ‌ಗಳಿಂದ ಸಲಾರ್ ಚಿತ್ರವು 2.5 ಮಿಲಿಯನ್ ಡಾಲರ್‌ಗಳನ್ನು ಸಂಗ್ರಹಿಸಿದೆ.

ವಿದೇಶಗಳಲ್ಲಿ 'ಸಲಾರ್' ಸಿನಿಮಾ ತನ್ನ ಮೊದಲ ದಿನದಲ್ಲಿ 6 ಮಿಲಿಯನ್ ಡಾಲರ್‌ಗಳ ಬೃಹತ್ ಪ್ರಾರಂಭ ಕಂಡಿತ್ತು. ಇದು ಭಾರತೀಯ ಕರೆನ್ಸಿಯಲ್ಲಿ ಸರಿಸುಮಾರು 50 ಕೋಟಿ ರೂಪಾಯಿಯಾಗಲಿದೆ. ಸಲಾರ್‌ಗೆ ಹೋಲಿಸಿದರೆ, ಶಾರುಖ್ ಖಾನ್ ಅಭಿನಯದ 'ಡಂಕಿ' ವಿದೇಶದಲ್ಲಿ 2.8 ಮಿಲಿಯನ್ ಡಾಲರ್‌ಗಳ ಕಡಿಮೆ ಓಪನಿಂಗ್ ಪಡೆದಿತ್ತು. ಆದರೆ, ಈಗ, ಶಾರುಖ್ ಖಾನ್ ಅವರ ಚಿತ್ರವು ಪ್ರಮುಖ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ 'ಸಲಾರ್' ವಿರುದ್ಧ ಪ್ರಾಬಲ್ಯ ಸಾಧಿಸಲು ಪ್ರಾರಂಭಿಸಿದೆ.

Rajkumar Hirani’s Dunki starts dominating Prashanth Neel’s Salaar in international markets

ಸಲಾರ್ ಎದುರು ಪ್ರಾಬಲ್ಯ ಸಾಧಿಸುತ್ತಿದೆ 'ಡಂಕಿ'!

ಈಗಾಗಲೇ, ಆಸ್ಟ್ರೇಲಿಯಾ, ಯುಕೆ, ಉತ್ತರ ಅಮೆರಿಕಾ ಮತ್ತು ನ್ಯೂಜಿಲೆಂಡ್‌ನಲ್ಲಿ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾ ಒಳ್ಳೆ ಓಪನಿಂಗ್ ಪಡೆದಿದೆ. ಈಗ ಭಾನುವಾರದಿಂದ ಈ ಪ್ರದೇಶಗಳಲ್ಲಿ 'ಡಂಕಿ' ಮುನ್ನಡೆ ಸಾಧಿಸಲು ಪ್ರಾರಂಭಿಸಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಉತ್ತರ ಅಮೆರಿಕಾದಲ್ಲಿ ಡಂಕಿಯ ಟಿಕೆಟ್ ದರಗಳು ಅತ್ಯಂತ ಕಡಿಮೆ.

ಇಲ್ಲಿಯವರೆಗೆ, ಸಲಾರ್ ಮತ್ತು ಡಂಕಿ ಸಿನಿಮಾಗಳು ವಿದೇಶದಿಂದ ಸುಮಾರು 8 ಮಿಲಿಯನ್ ಡಾಲರ್‌ಗಳನ್ನು ವ್ಯಾಪ್ತಿಯಲ್ಲಿ ಸಂಗ್ರಹಿಸಿದೆ ಮತ್ತು ಡಂಕಿ ಶೀಘ್ರದಲ್ಲೇ ಮತ್ತಷ್ಟು ಕಡೆಗಳಲ್ಲಿ ಸಲಾರ್‌ಗಿಂತ ಹೆಚ್ಚು ಪ್ರದರ್ಶನ ನಡೆಯಲಿದೆ. ಇದಕ್ಕೆ ಶಾರುಖ್ ಖಾನ್ ಅವರ ಸ್ಟಾರ್‌ಡಂ ಕೂಡ ಕಾರಣ.

ವಿದೇಶಗಳಲ್ಲಿ ಶಾರುಖ್ ಖಾನ್ ದೊಡ್ಡ ಭಾರತೀಯ ತಾರೆ ಹೀಗಾಗಿಯೇ ಅವರ ಸಿನಿಮಾಗಳ ವ್ಯಾಪ್ತಿಯು ಹೆಚ್ಚಿದೆ. ಅದೇ 'ಡಂಕಿ' ಸಿನಿಮಾ ಮೂಲಕ ಮತ್ತೊಮ್ಮೆ ಸಾಬೀತಾಗುತ್ತಿದೆ. ಆದರೆ ಡಂಕಿ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ 'ಪಠಾಣ್' ಮತ್ತು 'ಜವಾನ್' ಸಿನಿಮಾ‌ಗಳಷ್ಟು ಹೆಚ್ಚಿಲ್ಲ. ಇವೆರಡೂ ವಿದೇಶಗಳಲ್ಲಿ ಸುಮಾರು 400 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿವೆ. ಶಾರುಖ್ ಖಾನ್ ವಿದೇಶಗಳಲ್ಲಿ ಮುಂಚೂಣಿಯಲ್ಲಿದ್ದರೆ, ಪ್ರಭಾಸ್‌ನ 'ಸಲಾರ್' ಭಾರತದಲ್ಲಿ 'ಡಂಕಿ'ಗಿಂತ ದೊಡ್ಡ ಅಂತರದಿಂದ ಮುನ್ನಡೆ ಸಾಧಿಸಿದೆ.

More from Filmibeat

English summary
Dunki starts dominating Salaar in overseas!.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X