ಸಲಾರ್‌ಗೆ ಪೈಪೋಟಿ ನೀಡುತ್ತಿರುವ ಶಾರುಖ್ ಖಾನ್ ನಟನೆಯ 'ಡಂಕಿ' ಎರಡನೇ ದಿನದ ಗಳಿಕೆಯೆಷ್ಟು?

ನಟ ಶಾರುಖ್ ಖಾನ್ ಅಭಿನಯದ 'ಡಂಕಿ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಓಪನಿಂಗ್ ಕಂಡಿದೆ. ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಈ ಚಿತ್ರ ಡಿಸೆಂಬರ್ 21 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಪ್ರಶಾಂತ್ ನೀಲ್ ನಿರ್ದೇಶನದ ಬಹುಕೋಟಿ ರೂಪಾಯಿ ಬಂಡವಾಳದ 'ಸಲಾರ್' ಎದುರು ಪೈಪೋಟಿಗೆ ನಿಂತಿದೆ.

ಈ ವರ್ಷ ಎರಡು ಸೂಪರ್ ಡೂಪರ್ ಹಿಟ್ ಸಿನಿಮಾ ನೀಡಿರುವ ಶಾರುಖ್ ಖಾನ್ ಅವರ ಮೂರನೇ ಸಿನಿಮಾ ವರ್ಷಾಂತ್ಯದಲ್ಲಿ ಬಿಡುಗಡೆಯಾಗಿದೆ. ಪ್ರಭಾಸ್ ಅವರ 'ಸಲಾರ್' ಸಿನಿಮಾದೊಂದಿಗೆ ಬಿಡುಗಡೆಯಾಗಿದ್ದರೂ ಕೂಡ ಸಿನಿಮಾ ತನ್ನ ಗಳಿಕೆಯನ್ನು ಮೆಂಟೈನ್ ಮಾಡುತ್ತಿದೆ. ಉತ್ತರ ಭಾರತ ಅದರಲ್ಲೂ ಮುಂಬೈನಲ್ಲಿ ಸಿನಿಮಾ ಗಳಿಕೆ ಚೆನ್ನಾಗಿದೆ.

Rajkumar Hirani, Shah Rukh Khans Dunki box office collection Day 2

'ಡಂಕಿ' ಎರಡನೇ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್

ಈ ವರ್ಷ ಎರಡು ಬ್ಯಾಕ್-ಟು-ಬ್ಯಾಕ್ ಬ್ಲಾಕ್‌ಬಸ್ಟರ್‌ಗಳಾದ 'ಪಠಾಣ್' ಮತ್ತು 'ಜವಾನ್' ನಂತರ, ಶಾರುಖ್ ಖಾನ್ ಅವರ ಮೂರನೇ ಚಿತ್ರ 'ಡಂಕಿ' ಡಿಸೆಂಬರ್ 21 ರಂದು ಕ್ರಿಸ್‌ಮಸ್‌ಗೆ ಮುಂಚಿತವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ರಜಾದಿನವಲ್ಲದಿದ್ದರೂ ಬಿಡುಗಡೆಯಾದ ದಿನ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಆರಂಭವನ್ನು ಕಂಡಿತು.

120 ರೂಪಾಯಿ ಬಂಡವಾಳದಲ್ಲಿ ನಿರ್ಮಾಣವಾಗಿರುವ 'ಡಂಕಿ' ಮೊದಲ ದಿನದಲ್ಲಿ 29.2 ಕೋಟಿ ರೂಪಾಯಿ ಗಳಿಸಿತ್ತು. ರಾಜ್‌ಕುಮಾರ್ ಹಿರಾನಿ ಚಿತ್ರವು ಆರಂಭಿಕ ಅಂದಾಜಿನ ಪ್ರಕಾರ ಎರಡನೇ ದಿನದಲ್ಲಿ 20 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಒಟ್ಟು 49.20 ಕೋಟಿ ರೂಪಾಯಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.

Rajkumar Hirani, Shah Rukh Khans Dunki box office collection Day 2

ಡಂಕಿ ಸಿನಿಮಾಕ್ಕೆ ಮುಂಬೈನಲ್ಲಿ ಅತ್ಯಧಿಕ ಆಕ್ಯುಪೆನ್ಸಿ ವರದಿಯಾಗಿದೆ. ಇಲ್ಲಿ ಸಿನಿಮಾ 46 ಪ್ರತಿಶತ ತಲುಪಿದೆ. ಚೆನ್ನೈನಲ್ಲಿ 40 ಪ್ರತಿಶತ, ಕೋಲ್ಕತ್ತಾ ಶೇ.38.75ರಷ್ಟು ಆಕ್ಯುಪೆನ್ಸಿ ಇದೆ. ದೆಹಲಿ ಮತ್ತು ಎನ್ಆರ್‌ಸಿಯಲ್ಲಿ 33 ಪ್ರತಿಶತ ಆಕ್ಯುಪೆನ್ಸಿ ದರವನ್ನು ದಾಖಲಿಸಿದೆ. ಇನ್ನು, ಈ ವಾರಾಂತ್ಯದ ರಜಾದಿನಗಳು ಮತ್ತು ಕ್ರಿಸ್‌ಮಸ್ ಹಬ್ಬಗಳ ಜೊತೆಗೆ ಚಿತ್ರಕ್ಕೆ ಉತ್ತಮ ಸ್ಪಂದನೆ ಸಿಗುವ ನಿರೀಕ್ಷೆಯಿದೆ.

'ಡಂಕಿ'

ಮುನ್ನಾಭಾಯ್​ ಎಂಬಿಬಿಎಸ್​, ಪಿಕೆ, 3 ಈಡಿಯಟ್ಸ್​, ಸಂಜು ನಂತಹ ಸಿನಿಮಾಗಳನ್ನು ನೀಡಿರುವ ರಾಜ್‌ಕುಮಾರ್ ಹಿರಾನಿ ನಿರ್ದೇಶನದ 'ಡಂಕಿ' ಸಮಗ್ರ ತಾರಾಗಣವನ್ನು ಹೊಂದಿದೆ. ಶಾರುಖ್ ಖಾನ್ ಜೊತೆಗೆ ಪ್ರತಿಭಾವಂತ ನಟರಾದ ಬೊಮನ್ ಇರಾನಿ, ತಾಪ್ಸಿ ಪನ್ನು, ವಿಕ್ಕಿ ಕೌಶಲ್, ವಿಕ್ರಮ್ ಕೊಚ್ಚರ್ ಮತ್ತು ಅನಿಲ್ ಗ್ರೋವರ್ ಪ್ರಮುಖ ಪಾತ್ರಗಳಲ್ಲಿ ಇದ್ದಾರೆ. ಹಾಡಗಳು ಮನಮುಟ್ಟುವಂತಿವೆ.

ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಸಿನಿಮಾವನ್ನು ನಿರ್ಮಿಸಿದೆ. ಚಿತ್ರವನ್ನು ರಾಜ್‌ಕುಮಾರ್ ಹಿರಾನಿ ಮತ್ತು ಗೌರಿ ಖಾನ್ ಸಿನಿಮಾಕ್ಕೆ ಬಂಡವಾಳ ಹಾಕಿದ್ದಾರೆ. ಚಿತ್ರಕ್ಕೆ ಅಭಿಜತ್ ಜೋಶಿ, ರಾಜ್‌ಕುಮಾರ್ ಹಿರಾನಿ ಮತ್ತು ಕನಿಕಾ ಧಿಲ್ಲೋನ್ ಕತೆ ಬರೆದಿದ್ದಾರೆ.

ಇನ್ನು, ಡಂಕಿ ಬಿಡುಗಡೆಯಾಗಿ ಒಂದು ದಿನದ ನಂತರ ರಿಲೀಸ್ ಆದ 'ಸಲಾರ್' ಸಿನಿಮಾ, ಎಲ್ಲಾ ಭಾಷೆಗಳಲ್ಲಿ ಒಟ್ಟಾರೆ ಆರಂಭಿಕ ದಿನದ ಗಳಿಕೆಯು ಸುಮಾರು 180 ಕೋಟಿ ರೂಪಾಯಿಯಾಗಿದೆ. ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 'ಸಲಾರ್' ಡಿಸೆಂಬರ್ 22 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ. ವರದಿಗಳ ಪ್ರಕಾರ 270 ಕೋಟಿ ರೂಪಾಯಿ ಬಜೆಟ್‌ನಲ್ಲಿ ಚಿತ್ರವನ್ನು ನಿರ್ಮಿಸಲಾಗಿದೆ.

More from Filmibeat

English summary
'Dunki' box office collection Day 2.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X