ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಜೊತೆ ಸಮಂತಾ ರೊಮ್ಯಾನ್ಸ್?

ನಟಿ ಸಮಂತಾ ಸೈಲೆಂಟ್ ಆಗಿಬಿಟ್ಟಿದ್ದಾರೆ. ಮಯೋಸೈಟಿಸ್ ಸಮಸ್ಯೆಯಿಂದ ಬಳಲುತ್ತಿರುವ ಸ್ಯಾಮ್ ಹೊಸ ಪ್ರಾಜೆಕ್ಟ್ ಯಾವುದು ಒಪ್ಪಿಕೊಳ್ಳುತ್ತಿಲ್ಲ. 'ಸಿಟಾಡೆಲ್' ವೆಬ್‌ ಸೀರಿಸ್‌ನಲ್ಲಿ ಮಾತ್ರ ನಟಿಸುತ್ತಿದ್ದಾರೆ. ಕಳೆದೆರಡು ದಿನಗಳಿಂದ ಆಕೆಯ ಬಗ್ಗೆ ಕ್ರೇಜಿ ನ್ಯೂಸ್ ವೈರಲ್ ಆಗುತ್ತಿತ್ತು. ಅದು ನಿಜಾನಾ? ಸುಳ್ಳಾ? ಎಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದರು.

ಸ್ಯಾಮ್ ಇನ್ನು ಬಾಲಿವುಡ್ ಸಿನಿಮಾದಲ್ಲಿ ನಟಿಸಿಲ್ಲ. ಆದರೆ 'ಸಿಟಾಡೆಲ್' ಸೀರಿಸ್ ಹಿಂದಿಯಲ್ಲೇ ಮೂಡಿ ಬರ್ತಿದೆ. ಆಕೆ ಸ್ಟಾರ್ ಹೀರೊಗೆ ಜೋಡಿಯಾಗಿ ಬಾಲಿವುಡ್ ಪ್ರವೇಶಿಸುತ್ತಾರೆ ಎನ್ನುವ ಸುದ್ದಿ ಕೇಳಿಬಂದಿತ್ತು. ಶಾರುಖ್ ಖಾನ್ - ಸಮಂತಾ ಕಾಂಬಿನೇಷನ್‌ನಲ್ಲಿ ಕ್ರೇಜಿ ಪ್ರಾಜೆಕ್ಟ್ ಸಿದ್ಧವಾಗುತ್ತಿದೆ ಎನ್ನುವ ಗುಸುಗುಸು ಶುರುವಾಗಿತ್ತು. ಕಳೆದ ವರ್ಷ ಮೂರು ಹಿಟ್ ಸಿನಿಮಾಗಳನ್ನು ಕೊಟ್ಟ ಕಿಂಗ್‌ಖಾನ್ ಈ ವರ್ಷ ಸೈಲೆಂಟ್ ಆಗಿದ್ದಾರೆ.

Rajkumar hirani team denies shahrukh khan samantha combo film rumours

ಶಾರುಖ್ ಖಾನ್ ನಟನೆಯ ಯಾವುದೇ ಸಿನಿಮಾ ಈ ವರ್ಷ ತೆರೆಗೆ ಬರುವ ಲಕ್ಷಣಗಳು ಕಾಣುತ್ತಿಲ್ಲ. ಅಸಲಿಗೆ ಕಿಂಗ್ ಖಾನ್ ಹೊಸ ಸಿನಿಮಾ ಕೂಡ ಅನೌನ್ಸ್ ಆಗಿಲ್ಲ. ರಾಜ್‌ಕುಮಾರ್ ಹಿರಾನಿ ಕಾಂಬಿನೇಷನ್‌ನಲ್ಲಿ ಶಾರುಖ್ ಮತ್ತೊಂದು ಚಿತ್ರದಲ್ಲಿ ನಟಿಸುತ್ತಾರೆ, ಆ ಚಿತ್ರಕ್ಕೆ ಸ್ಯಾಮ್ ಹೀರೊಯಿನ್ ಎನ್ನುವ ಗುಸುಗುಸು ಕೇಳಿಬಂದಿತ್ತು. ಕಳೆದ ವರ್ಷ ಶಾರುಖ್- ಹಿರಾನಿ ಜೋಡಿ 'ಡಂಕಿ' ರೀತಿಯ ಹಿಟ್ ಸಿನಿಮಾ ಕೊಟ್ಟಿತ್ತು.

ಸದ್ಯ ರಾಜ್‌ಕುಮಾರ್ ಹಿರಾನಿ ಆಪ್ತ ಮೂಲಗಳಿಂದ ಸಿಗುತ್ತಿರುವ ಮಾಹಿತಿ ಪ್ರಕಾರ ಯಾವುದೇ ಹೊಸ ಸಿನಿಮಾ ಘೋಷಣೆ ಮಾಡಿಲ್ಲ. ಸಮಂತಾ ಕೂಡ ಯಾವುದೇ ಚಿತ್ರಕ್ಕೆ ಆಯ್ಕೆ ಆಗಿಲ್ಲ. ಇದೆಲ್ಲ ಕೇವಲ ವದಂತಿ ಅಷ್ಟೇ. ಹಿರಾನಿ ಸದ್ಯಕ್ಕೆ ಹೊಸ ಸಿನಿಮಾ ಸ್ಕ್ರಿಪ್ಟ್ ಕಥೆ ಬರೆಯುತ್ತಿದ್ದಾರೆ. ನಟ-ನಟಿಯರ ಆಯ್ಕೆ ಮಾಡಿಲ್ಲ. ಕಿಂಗ್ ಖಾನ್ ನಟಿಸುವ ಬಗ್ಗೆಯೂ ಯಾವುದೇ ಮಾಹಿತಿ ಇಲ್ಲ ಎಂದು ಬಾಲಿವುಡ್‌ ಮಾಧ್ಯಮಗಳಲ್ಲಿ ವರದಿಯಾಗಿದೆ.

Rajkumar hirani team denies shahrukh khan samantha combo film rumours

ಸಂದರ್ಶನವೊಂದರಲ್ಲಿ ಸೂರ್ಯ, ಮಹೇಶ್ ಬಾಬು ಹಾಗೂ ಶಾರುಖ್ ಖಾನ್ ತಮ್ಮ ನೆಚ್ಚಿನ ನಟರು, ಶಾರುಖ್ ಜೊತೆ ಇನ್ನು ನಟಿಸಿಲ್ಲ. ಆ ಕನಸು ಕನಸಾಗಿಯೇ ಉಳಿದಿದೆ ಎಂದಿದ್ದರು. ಹಾಗಾಗಿ ಯಾರೋ ಇಂತಾದೊಂದು ಸುದ್ದಿ ಹಬ್ಬಿಸಿರಬಹುದು ಎನ್ನುವ ಮಾತುಗಳು ಕೇಳಿಬರ್ತಿದೆ. ಮತ್ತೊಂದು ಕಡೆ ಶಾರುಖ್ ಮಗಳು ಸುಹಾನಾ ಜೊತೆ ಚಿತ್ರವೊಂದರಲ್ಲಿ ನಟಿಸಲಿದ್ದಾರೆ. ಆದರೆ ಅಧಿಕೃತವಾಗಿ ಆ ಸಿನಿಮಾ ಸಹ ಘೋಷಣೆ ಆಗಿಲ್ಲ.

More from Filmibeat

English summary
Samantha Teaming Up with Shah Rukh Khan, just rumours
Read more about: samantha shahrukh khan bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X