Don't Miss!
- Sports RCB: ಇದೇ ಆರ್ಸಿಬಿ ಸಮಸ್ಯೆ ಮೂಲ; ವಿದೇಶಿ ಕೋಚಿಂಗ್ ಸ್ಟಾಫ್ ವಿರುದ್ಧ ಸಿಡಿಮಿಡಿಗೊಂಡ ವೀರೇಂದ್ರ ಸೆಹ್ವಾಗ್
- Lifestyle ಸಲ್ಮಾನ್ ಹತ್ಯೆಗೆ ಪದೇ ಪದೇ ಯತ್ನ ಆಗುತ್ತಿರೋದೇಕೆ..? ಬಿಷ್ಣೋಯ್ ಗ್ಯಾಂಗ್ ದಶಕಗಳ ವೈರತ್ವವೇನು?
- News ಕಾಂಗ್ರೆಸ್ ಬಿಗ್ ಶಾಕ್ : ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಬಿಜೆಪಿ ಸೇರ್ಪಡೆ
- Finance BBMP: ಬೆಂಗಳೂರಿನಲ್ಲಿ 138 ಕಿಮೀ ರಸ್ತೆ ನಿರ್ಮಾಣ, 5 ಕಂಪೆನಿಗಳಿಂದ ಟೆಂಡರ್
- Automobiles ಫ್ಯಾಮಿಲಿ ಕಾರಾಗಿ ಜನರ ಮನಗೆದ್ದ ಇನ್ನೋವಾ ಹೈಕ್ರಾಸ್ನ ಹೊಸ ರೂಪಾಂತರದ ವಿಶೇಷತೆಗಳೇನು?
- Technology ಇದೇ ಏಪ್ರಿಲ್ 22 ರಂದು ರಿಯಲ್ಮಿ ಈ ಹೊಸ ಫೋನ್ ಸೇಲ್ ಪ್ರಾರಂಭ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತೆಲುಗಿನ 'HIT' ಸಿನಿಮಾದ ಹಿಂದಿ ರಿಮೇಕ್ ನಲ್ಲಿ ರಾಜ್ ಕುಮಾರ್ ರಾವ್
ತೆಲುಗಿನ ಸೂಪರ್ ಹಿಟ್ ಅರ್ಜುನ್ ರೆಡ್ಡಿ, ಜರ್ಸಿ ಸಿನಿಮಾದ ನಂತರ ತೆಲುಗಿನ ಮತ್ತೊಂದು ಸಿನಿಮಾ ಬಾಲಿವುಡ್ ಗೆ ರಿಮೇಕ್ ಆಗುತ್ತಿದೆ. ಇತ್ತೀಚಿಗೆ ಟಾಲಿವುಡ್ ನ ಅನೇಕ ಸಿನಿಮಾಗಳು ಹಿಂದಿಯಲ್ಲಿ ರಿಮೇಕ್ ಆಗಿ ಸಕ್ಸಸ್ ಕಾಣುತ್ತಿವೆ. ಇದೀಗ ತೆಲುಗಿನ ಥ್ರಿಲ್ಲಿಂಗ್ ಹೆಚ್ ಐ ಟಿ ಸಿನಿಮಾ ಹಿಂದಿಗೆ ರಿಮೇಕ್ ಆಗುತ್ತಿದ್ದು ಬಾಲಿವುಡ್ ನ ಖ್ಯಾತ ನಟ ರಾಜ್ ಕುಮಾರ್ ರಾವ್ ಕಾಣಿಸಿಕೊಳ್ಳುತ್ತಿದ್ದಾರೆ.
Recommended Video
ಇದೆ ವರ್ಷ ಫೆಬ್ರವರಿಯಲ್ಲಿ ರಿಲೀಸ್ ಆದ ಹೆಚ್ ಐ ಟಿ: ದಿ ಫಸ್ಟ್ ಕೇಸ್ ಸಿನಿಮಾ ನೋಡಿ ಇಂಪ್ರೆಸ್ ಆಗಿರುವ ನಟ ರಾಜ್ ಕುಮಾರ್ ರಾವ್ ಸಿನಿಮಾ ಮಾಡಲು ಉತ್ಸುಕರಾಗಿದ್ದಾರೆ. ನಿರ್ದೇಶಕ ಸೈಲೇಶ್ ಕೊಲನು ಸಾರಥ್ಯದಲ್ಲಿ ಮೂಡಿಬಂದ ಸಿನಿಮಾದಲ್ಲಿ ವಿಶ್ವಕ್ ಸೇನ್ ಮತ್ತು ರುಹಾನಿ ಶರ್ಮಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಬಾಲಿವುಡ್ ಗೆ ರಿಮೇಕ್ ಆಗ್ತಿದೆ 'ಅಲಾ ವೈಕುಂಠಪುರಂಲೋ': ಅಲ್ಲು ಪಾತ್ರದಲ್ಲಿ ಸ್ಟಾರ್ ನಟ
ಹಿಂದಿಯಲ್ಲಿಯೂ ಸೈಲೇಶ್ ಕೊಲನು ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಿಶೇಷ ಅಂದರೆ ದಿಲ್ ರಾಜು ನಿರ್ಮಾಣ ಮಾಡುತ್ತಿದ್ದಾರೆ. ಹೆಚ್ ಐ ಟಿ: ದಿ ಫಸ್ಟ್ ಕೇಸ್ ಸಿನಿಮಾ ಕಾಣೆಯಾದ ಮಹಿಳೆಯರನ್ನು ಪತ್ತೆಹಚ್ಚುವ ಪೊಲೀಸ್ ಮೇಲೆ ಸಿನಿಮಾ ಸಾಗುತ್ತೆ. ಪೊಲೀಸ್ ಆಗಿ ನಟ ರಾಜ್ ಕುಮಾರ್ ರಾವ್ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜ್ ಕುಮಾರ್ ರಾವ್ "ಇದು ತುಂಬಾ ಆಕರ್ಷಕವಾದ ಕಥೆಯಾಗಿದೆ. ಇಂದಿನ ಪರಿಸರಕ್ಕೆ ಪ್ರಸ್ತುತಪಡಿಸುವ ಕಥೆಯಾಗಿದೆ. ನಟನಾಗಿ ನಾನೂ ಈ ರೀತಿಯ ಪಾತ್ರಗಳನ್ನು ಮಾಡಲು ಪ್ರಯತ್ನಿಸುತ್ತಿದ್ದೇನೆ. ಈ ಸಿನಿಮಾ ನನಗೆ ಅವಕಾಶ ನೀಡಿದೆ. ಸೈಲೇಶ್ ಮತ್ತು ದಿಲ್ ರಾಜು ಜೊತೆ ಕೆಲಸ ಮಾಡಲು ಎದರು ನೋಡುತ್ತಿದ್ದೀನಿ" ಎಂದಿದ್ದಾರೆ.
ನಿರ್ದೇಶಕ ಸೈಲೇಶ್ ಈ ಪಾತ್ರವನ್ನು ಹಿಂದಿಯಲ್ಲಿ ರಾಜ್ ಕುಮಾರ್ ಮಾಡಿದ್ರೆ ಚೆನ್ನಾಗಿರುತ್ತೆ ಎಂದು ರಾಜ್ ಕುಮಾರ್ ಬಳಿ ಹೋಗಿದ್ದಾರೆ. "ಇದು ತುಂಬಾ ರಿಸ್ಕಿ ಪಾತ್ರ. ರಾಜ್ ಕುಮಾರ್ ರಾವ್ ಭಯಂಕರ ನಟ ಮತ್ತು ಅಭಿನಯದಿಂದ ಪ್ರತೀ ಬಾರಿಯೂ ವೀಕ್ಷಕರನ್ನು ಅಚ್ಚರಿಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪಾತ್ರವನ್ನು ಅದ್ಭುತವಾಗಿ ನಿಭಾಯಿಸುತ್ತಾರೆ" ಎಂದು ರಾಜ್ ಕುಮಾರ್ ಅವರನ್ನು ಕಾಸ್ಟ್ ಮಾಡಿರುವುದಾಗಿ ನಿರ್ದೇಶಕ ಸೈಲೇಶ್ ಹೇಳಿದ್ದಾರೆ.
ಸದ್ಯ ಪ್ರಿ ಪ್ರೊಡಕ್ಷನ್ ನಲ್ಲಿ ಬ್ಯುಸಿಯಾಗಿದ್ದು, ಮುಂದಿನ ವರ್ಷ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ. ಇನ್ನೂ ಸಿನಿಮಾದಲ್ಲಿ ಯಾರೆಲ್ಲ ಇರಲಿದ್ದಾರೆ, ನಾಯಕಿ ಯಾರು ಎನ್ನುವ ಬಗ್ಗೆ ಮಾಹಿತಿ ರಿವೀಲ್ ಆಗಿಲ್ಲ. ನಾಯಕಿಯಾರಾಗಲಿದ್ದಾರೆ, ದಕ್ಷಿಣ ಭಾರತದ ಕಲಾವಿದರು ಇರಲಿದ್ದಾರಾ ಎನ್ನುವುದನ್ನು ಕಾದು ನೋಡಬೇಕು.