»   » ಅದ್ಭುತ..! 324 ವರ್ಷದ ವ್ಯಕ್ತಿ ಪಾತ್ರದಲ್ಲಿ ರಾಷ್ಟ್ರ ಪ್ರಶಸ್ತಿ ನಟ

ಅದ್ಭುತ..! 324 ವರ್ಷದ ವ್ಯಕ್ತಿ ಪಾತ್ರದಲ್ಲಿ ರಾಷ್ಟ್ರ ಪ್ರಶಸ್ತಿ ನಟ

Posted By:
Subscribe to Filmibeat Kannada

ಬಿ ಟೌನ್ ನಲ್ಲಿ ಸದ್ಯಕ್ಕೆ ಟ್ರೈಲರ್ ನಿಂದಲೇ ಅತೀ ಹೆಚ್ಚು ಕ್ಯೂರಿಯಾಸಿಟಿ ಹುಟ್ಟಿಸಿರುವ ಸಿನಿಮಾ 'ರಾಬ್ತಾ'. ನಟ ಸುಶಾಂತ್ ಸಿಂಗ್ ರಜಪೂತ್ ಮತ್ತು ಕ್ರಿತಿ ಸನೋನ್ ಅಭಿನಯದ 'ರಾಬ್ತಾ' ಟ್ರೈಲರ್ ಮೊನ್ನೆಯಷ್ಟೇ ಬಿಡುಗಡೆ ಆಗಿದ್ದು ಎರಡೇ ದಿನಗಳಲ್ಲಿ ಅತಿ ಹೆಚ್ಚು ಜನರಿಂದ ವೀಕ್ಷಣೆ ಪಡೆದಿದೆ.

ನಿರ್ದೇಶಕ ದಿನೇಶ್ ವಿಜನ್ ಆಕ್ಷನ್ ಕಟ್ ಹೇಳಿರುವ 'ರಾಬ್ತಾ' ಚಿತ್ರ ಅದ್ಭುತ ಚಿತ್ರಕಥೆ ಹೊಂದಿರುವ ಬಗ್ಗೆ ಭರವಸೆ ಮೂಡಿಸಿದ್ದು, ಟ್ರೈಲರ್ ನ ಅಂತಿಮ ಕ್ಷಣದಲ್ಲಿ ಸಿನಿ ಪ್ರಿಯರಿಗೆ ಅಚ್ಚರಿಯೊಂದನ್ನು ಮೂಡಿಸಲಾಗಿದೆ. ಅದೇನಂದ್ರೆ ಚಿತ್ರದಲ್ಲಿ ರಾಷ್ಟ್ರ ಪ್ರಶಸ್ತಿ ನಟರೊಬ್ಬರನ್ನು 324 ವರ್ಷ ವಯಸ್ಸಿನ ಪ್ರಾಚೀನ ಕಾಲದ ವ್ಯಕ್ತಿ ಪಾತ್ರದಲ್ಲಿ ತೋರಿಸಿರುವುದು. ಅವರು ಯಾರು ಗೊತ್ತಾ?

ರಾಜ್ ಕುಮಾರ್ ರಾವ್

ಹೌದು. 'ರಾಬ್ತಾ' ಚಿತ್ರದ ಟ್ರೈಲರ್ ನ ಕೊನೆಯಲ್ಲಿ ಅಚ್ಚರಿದಾಯಕ ಪಾತ್ರದಲ್ಲಿ ಕಾಣಿಸಿಕೊ೦ಡಿರುವುದು ರಾಷ್ಟ್ರ ಪ್ರಶಸ್ತಿ ವಿಜೇತ ನಟ ರಾಜ್ ಕುಮಾರ್ ರಾವ್. ಕಂಗನಾ ರನೌತ್ ಅಭಿನಯದ 'ಕ್ವೀನ್' ಚಿತ್ರ ನೋಡಿದವರಿಗೆ ಬಹುಶಃ ಇವರ ಗುರುತು ಸಿಕ್ಕೇ ಸಿಗುತ್ತದೆ.

ರಾಜ್ ಕುಮಾರ್ ರಾವ್ ಪಾತ್ರಕ್ಕೆ 16 ವಿಭಿನ್ನ ಲುಕ್ ಟೆಸ್ಟ್

ಅಂದಹಾಗೆ 'ರಾಬ್ತಾ'ದಲ್ಲಿ ರಾಜ್ ಕುಮಾರ್ ರಾವ್ ಕಾಣಿಸಿಕೊಂಡಿರುವ ನಿಗೂಢ ಲುಕ್ ಫೈನಲೈಸ್ ಮಾಡುವುದಕ್ಕೂ ಮುನ್ನ 16 ವಿಭಿನ್ನ ಲುಕ್ ಗಳನ್ನು ಟೆಸ್ಟ್ ಮಾಡಿಸಲಾಗಿತ್ತಂತೆ. ಹಲವು ದಿನಗಳ ನಂತರ ಲಾಸ್ ಏಂಜಲೀಸ್ ನ 'Dirty Hands' ಕಂಪನಿಯ ಝುಬಿ ಜೋಹಲ್ ಅವರ ವಿಶೇಷ ತಂಡವೊಂದು ಇವರಿಗೆ 324 ವರ್ಷ ವಯಸ್ಸಿನ ಪ್ರಾಚೀನ ಕಾಲದ ಲುಕ್ ನೀಡಿದೆ.

ಕೃತಕ ಗೆಟಪ್ ಗಾಗಿ 6 ಗಂಟೆಗಳ ಸಮಯ ಕೂರುತಿದ್ದ ರಾಜ್ ಕುಮಾರ್ ರಾವ್

ರಾಷ್ಟ್ರ ಪ್ರಶಸ್ತಿ ವಿಜೇತ ನಟ ರಾಜ್ ಕುಮಾರ್ ರಾವ್ 'ರಾಬ್ತಾ' ಚಿತ್ರದ ವಿಶೇಷ ಲುಕ್ ಗಾಗಿ ಮತ್ತು ವಾಯ್ಸ್ ಮಾಡುಲೇಷನ್ ವ್ಯವಸ್ಥೆಗಾಗಿ ಹಲವು ದಿನಗಳ ಕಾಲ ದಿನನಿತ್ಯ 5 ರಿಂದ 6 ಗಂಟೆಗಳ ಕಾಲ ಪ್ರಾಸ್ತೆಟಿಕ್ ಟ್ರೀಟ್ ಮೆಂಟ್ ಗೆ ಕೂರುತ್ತಿದ್ದರಂತೆ. ಚಿತ್ರದಲ್ಲಿ ಇವರ ಶೈಲಿ ಹೆಚ್ಚು ಮುಖ್ಯವಾಗಿದ್ದು, ಟ್ಯಾಟೂಗಳನ್ನು ಹಾಕಿಸಿಕೊಂಡಿದ್ದಾರಂತೆ.

ಪಾತ್ರದ ಬಗ್ಗೆ ರಾಜ್ ಕುಮಾರ್ ರಾವ್ ಹೇಳಿದ್ದೇನು?

ಇನ್ನೂ ತಮ್ಮ ವಿಶೇಷ ಪಾತ್ರದ ಬಗ್ಗೆ ಮಾತನಾಡಿರುವ ರಾಜ್ ಕುಮಾರ್ ರಾವ್, "ನನ್ನ ಪಾತ್ರ ತುಂಬಾ ಹಾಸ್ಯಮಯವು ಆಗಿದ್ದು, ನಿರ್ದೇಶಕ ದಿನೇಶ್ ವಿಜನ್ ಸ್ಪಷ್ಟವಾದ ದೃಷ್ಟಿ ಹೊಂದಿದ್ದಾರೆ. ನನ್ನ ಅಭಿನಯಕ್ಕೆ ಸಂಪೂರ್ಣ ಸ್ವತಂತ್ರ ನೀಡಿದ್ದಾರೆ" ಎಂದು ಹೇಳಿದ್ದಾರೆ.

'ರಾಬ್ತಾ' ಬಿಡುಗಡೆ ದಿನಾಂಕ

'ರಾಬ್ತಾ' ಚಿತ್ರದ ಹಾಡುಗಳಿಗೆ ಪ್ರೀತಮ್ ಸಂಗೀತ ಸಂಯೋಜನೆ ನೀಡಿದ್ದು, ಸಚಿನ್ ಜಿಗರ್ ಹಿನ್ನೆಲೆ ಸಂಗೀತ ಸಂಯೋಜನೆ ನಿರ್ವಹಣೆ ಮಾಡಿದ್ದಾರೆ. ಚಿತ್ರ ಜೂನ್ 9 ರಂದು ದೇಶದಾದ್ಯಂತ ಬಿಡುಗಡೆ ಆಗಲಿದೆ. ಚಿತ್ರದ ಟ್ರೈಲರ್ ನೋಡಲು ಕ್ಲಿಕ್ ಮಾಡಿ.

ಈ ಲೇಖನವನ್ನು ಇಂಗ್ಲಿಷ್ ನಲ್ಲಿ ಓದಲು ಕ್ಲಿಕ್ ಮಾಡಿ

English summary
National Film Award-winning actor Rajkummar Rao will be seen playing a man aged 324 in the forthcoming film 'Raabta'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada