ರಾಕೇಶ್ ಜುಂಜುನ್ ವಾಲಾ ನಿಧನ: ಬಿಗ್‌ಬುಲ್‌ಗೆ ಇತ್ತು ಸಿನಿಮಾ ಜೊತೆ ಸಂಬಂಧ
ಬಿಗ್‌ಬುಲ್, ಭಾರತದ ವಾರೆನ್ ಬಫೆಟ್, ಮನಿ ಮ್ಯಾಗ್ನೆಟ್ ಎಂದೆಲ್ಲ ಕರೆಸಿಕೊಳ್ಳುತ್ತಿದ್ದ ದೈತ್ಯ ಷೇರು ಹೂಡಿಕೆದಾರ, ಉದ್ಯಮಿ ರಾಕೇಶ್ ಜುಂಜುನ್ ವಾಲಾ ಇಂದು ನಿಧನರಾಗಿದ್ದಾರೆ.
ರಾಕೇಶ್ ನಿಧನಕ್ಕೆ ಉದ್ಯಮಿಗಳು, ಹೂಡಿಕೆದಾರರು, ರಾಜಕಾರಣಿಗಳು, ಸಿನಿಮಾ ಕರ್ಮಿಗಳು ಸಹ ಸಂತಾಪ ಸೂಚಿಸಿದ್ದಾರೆ. ಸಣ್ಣ ಹೂಡಿಕೆಯಿಂದ ಪ್ರಾರಂಭಿಸಿ ಭಾರತದ ಬಿಗ್‌ಬುಲ್ ಆಗಿ ಬೆಳೆದ ರಾಕೇಶ್ ಜುನ್‌ಜುನ್ ವಾಲಾ ಕತೆ ರೋಚಕ.
ಷೇರು ಮಾರುಕಟ್ಟೆ, ಹೂಡಿಕೆ, ಉದ್ಯಮವನ್ನೇ ಉಸಿರಾಡುತ್ತಿದ್ದ ರಾಕೇಶ್ ಜುಂಜುನ್‌ವಾಲಾಗೆ ಸಿನಿಮಾಗಳೊಟ್ಟಿಗೂ ಸಂಬಂಧವಿತ್ತು. ಜಾಣ ಹೂಡಿಕೆದಾರ ಆಗಿದ್ದ ರಾಕೇಶ್ ಜುಂಜುನ್‌ವಾಲಾ ಸಿನಿಮಾ ವ್ಯವಹಾರದಲ್ಲಿಯೂ ಹಣ ಗಳಿಸಿಕೊಂಡರು.

ನಟಿ ಶ್ರೀದೇವಿಯ ಕಮ್‌ಬ್ಯಾಕ್ ಸಿನಿಮಾ ಆಗಿದ್ದ 'ಇಂಗ್ಲಿಷ್-ವಿಂಗ್ಲಿಷ್' ಸಿನಿಮಾಕ್ಕೆ ರಾಕೇಶ್ ಜುಂಜುನ್ ವಾಲಾ ಬಂಡವಾಳ ಹೂಡಿದ್ದರು. ಅದು ಮಾತ್ರವೇ ಅಲ್ಲದೆ ಅಮಿತಾಬ್ ಬಚ್ಚನ್, ತಮಿಳಿನ ಧನುಶ್ ನಟನೆಯ 'ಶಮಿತಾಬ್' ಸಿನಿಮಾದ ಮೇಲೂ ಬಂಡವಾಳ ಹೂಡಿದ್ದರು. 2016 ರ ಸೂಪರ್ ಹಿಟ್ ಸಿನಿಮಾ 'ಕಿ ಆಂಡ್ ಕಾ' ಸಿನಿಮಾಕ್ಕೂ ಬಂಡವಾಳ ಹೂಡಿದ್ದರು.
ರಾಕೇಶ್ ಜುಂಜುನ್ ವಾಲಾ ಪೂರ್ಣ ಆಕ್ಷನ್ ಮಸಾಲಾ ಸಿನಿಮಾಗಳ ಬದಲು ಸರಳ, ಸುಂದರ ಕತೆಗಳನ್ನು ಹೊಂದಿದ ಸಿನಿಮಾಗಳ ಮೇಲಷ್ಟೆ ಬಂಡವಾಳ ಹೂಡುತ್ತಿದ್ದರು ಮತ್ತು ಯಶಸ್ಸನ್ನೂ ಪಡೆದರು.
ಇದು ಮಾತ್ರವೇ ಅಲ್ಲದೆ ಕೆಲ ವರ್ಷಗಳ ಹಿಂದೆ ದೀಪಾವಳಿ ದಿನದಂದು ಬಾಲಿವುಡ್‌ನ ನಟಿಯೊಬ್ಬರಿಗೆ ಸಂದರ್ಶನ ಸಹ ನೀಡುತ್ತಿದ್ದರು. ಆ ಸಮಯದಲ್ಲಿ ತಮ್ಮ ಜೀವನದ ಹಲವು ವಿಷಯಗಳನ್ನು ಮಾತನಾಡುತ್ತಿದ್ದರು.
ರಾಕೇಶ್ ಜುಂಜುನ್‌ವಾಲಾಗೆ ಹಲವು ಬಾಲಿವುಡ್ ಸ್ಟಾರ್ ನಟರೊಟ್ಟಿಗೆ ಆತ್ಮೀಯ ಸಂಬಂಧವಿತ್ತು. ಬಾಲಿವುಡ್‌ನ ಹಲವು ನಿರ್ಮಾಪಕರು ರಾಕೇಶ್‌ರ ಆತ್ಮೀಯ ಗೆಳೆಯರಾಗಿದ್ದರು.


Click it and Unblock the Notifications










