ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಹೃತಿಕ್ ರೋಷನ್ ತಂದೆ
ಬಾಲಿವುಡ್ ನಟ ಹೃತಿಕ್ ರೋಷನ್ ಅವರ ತಂದೆ ನಿರ್ಮಾಪಕ ರಾಕೇಶ್ ರೋಷನ್ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಸಂಗತಿಯನ್ನ ಹೃತಿಕ್ ರೋಷನ್ ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ತಂದೆಯ ಜೊತೆಗೆ ಜಿಮ್ ನಲ್ಲಿ ತೆಗೆಸಿಕೊಂಡ ಫೋಟೋ ಹಾಕಿರುವ ಅವರು ''ನನ್ನ ತಂದೆಗೆ ಒಂದು ಫೋಟೋ ತೆಗೆದುಕೊಳ್ಳೊಣ ಅಂತ ಕೇಳಿದೆ. ನನಗೆ ತಿಳಿದಿದೆ ಅವರು ಸರ್ಜರಿಯ ದಿನ ಜಿಮ್ ನಲ್ಲಿ ಇರಲು ಆಗುವುದಿಲ್ಲ. ಆದರೆ, ಅವರು ತುಂಬ ಶಕ್ತಿದಾಯಕ ವ್ಯಕ್ತಿ. ವಾರಗಳ ಹಿಂದೆ ಅವರು ಸ್ಕ್ವಾಮಸ್ ಸೆಲ್ ಕಾರ್ಸಿನೋಮ ಕಾಯಿಲೆಯ ಆರಂಭಿಕ ಹಂತದಲ್ಲಿ ಇದ್ದಾರೆ. ಅವರನ್ನು ನಮ್ಮ ಕುಟುಂಬದ ಮುಖ್ಯಸ್ಥರನ್ನಾಗಿ ಪಡೆದ ನಾವು ಧನ್ಯರು.'' ಎಂದು ಬರೆದುಕೊಂಡಿದ್ದಾರೆ.
ತಮ್ಮ ತಂದೆಯ ಕಾಯಿಲೆ ವಿಷಯವನ್ನು ಹೃತಿಕ್ ಹೇಳಿಕೊಂಡಿದ್ದು, ಅದನ್ನು ಎದುರಿಸುವ ಶಕ್ತಿ ಹೊಂದಿದ್ದಾರೆ ಎಂಬ ಬರೆದಿದ್ದಾರೆ. ಸದ್ಯದಲ್ಲಿಯೇ ರಾಕೇಶ್ ರೋಷನ್ ಅವರಿಗೆ ಆಪರೇಷ್ ನಡೆಯಲಿದೆಯಂತೆ.

ಸಿನಿಮಾಗಳ ನಿರ್ಮಾಣ, ನಿರ್ದೇಶನ, ಚಿತ್ರಕಥೆ, ಸಂಗೀತ ನಿರ್ದೇಶನ, ಪೋಷಕ ಪಾತ್ರಗಳಲ್ಲಿ ನಟನೆ ಹೀಗೆ ಬಾಲಿವುಡ್ ಚಿತ್ರರಂಗದಲ್ಲಿ ರಾಕೇಶ್ ರೋಷನ್ ಗುರುತಿಸಿಕೊಂಡಿದ್ದಾರೆ.
ರಾಕೇಶ್ ರೋಷನ್ ಮಾತ್ರವಲ್ಲದೆ ನಟಿ ಸೋನಾಲಿ ಬೇಂದ್ರೆ ಕೂಡ ಕ್ಯಾನರ್ ನಿಂದ ಬಳಲುತ್ತಿದ್ದು, ಸೂಕ್ತ ಚಿಕಿತ್ಸೆ ಪಡೆದಿದ್ದಾರೆ.


Click it and Unblock the Notifications











