For Quick Alerts
  ALLOW NOTIFICATIONS  
  For Daily Alerts

  ಶಾರುಖ್ ಜೊತೆ ಸಿನಿಮಾ ಮಾಡುವುದು ಬಿಟ್ಟಿದ್ದಕ್ಕೆ ಕಾರಣ ನೀಡಿದ ರಾಕೇಶ್ ರೋಷನ್

  |

  ಶಾರುಖ್ ಖಾನ್‌ಗಾಗಿ ಕೆಲವು ಅತ್ಯುತ್ತಮ ಸಿನಿಮಾಗಳನ್ನು ನಿರ್ಮಾಣ, ನಿರ್ದೇಶನ ಎರಡೂ ಮಾಡಿದ್ದ ರಾಕೇಶ್ ರೋಷನ್ ಹಠಾತ್ತಾಗಿ ಅವರೊಟ್ಟಿಗೆ ಕೆಲಸ ಮಾಡುವುದನ್ನು ನಿಲ್ಲಿಸಿದ್ದರು. ಇದಕ್ಕೆ ಕಾರಣವನ್ನು ಈಗ ಬಹಿರಂಗಪಡಿಸಿದ್ದಾರೆ ರಾಕೇಶ್ ರೋಷನ್.

  ಶಾರುಖ್ ಖಾನ್ ನಟನೆಯ 'ಕಿಂಗ್ ಅಂಕಲ್', 'ಕರಣ್ ಅರ್ಜುನ್', 'ಕೋಯ್ಲಾ' ಈ ಮೂರೂ ಸಿನಿಮಾಗಳನ್ನು ರಾಕೇಶ್ ರೋಷನ್ ನಿರ್ದೇಶನ ಮಾಡಿ ನಿರ್ಮಾಣ ಸಹ ಮಾಡಿದ್ದರು. ಈ ಮೂರೂ ಸಿನಿಮಾಗಳು ಸೂಪರ್ ಡೂಪರ್ ಹಿಟ್ ಆಗಿದ್ದವು. ಆದರೆ 'ಕೋಯ್ಲಾ' ಸಿನಿಮಾದ ಬಳಿಕ ರಾಕೇಶ್ ರೋಷನ್ ಶಾರುಖ್ ಖಾನ್ ಜೊತೆ ಕೆಲಸ ಮಾಡಲಿಲ್ಲ.

  ಈ ಬಗ್ಗೆ ಇತ್ತೀಚೆಗೆ ಮಾಧ್ಯಮವೊಂದರಲ್ಲಿ ಉತ್ತರಿಸಿರುವ ರಾಕೇಶ್ ರೋಷನ್, 'ಶಾರುಖ್ ಖಾನ್ ಜೊತೆ ನಾನು ಕೆಲಸ ಮಾಡದೇ ಇರಲು ಕಾರಣ ನನ್ನ ಮಗ ಹೃತಿಕ್ ರೋಷನ್' ಎಂದಿದ್ದಾರೆ.

  'ಹೃತಿಕ್ ನಟನಾಗದಿದ್ದಿರೆ ಶಾರುಖ್ ಜೊತೆ ಕೆಲಸ ಮಾಡುತ್ತಲಿರುತ್ತಿದ್ದೆ'

  'ಹೃತಿಕ್ ನಟನಾಗದಿದ್ದಿರೆ ಶಾರುಖ್ ಜೊತೆ ಕೆಲಸ ಮಾಡುತ್ತಲಿರುತ್ತಿದ್ದೆ'

  'ನನ್ನ ಮಗ ಹೃತಿಕ್ ರೋಷನ್ ನಟನಾಗಿ ಸಿನಿಮಾ ಉದ್ಯಮಕ್ಕೆ ಕಾಲಿಟ್ಟ ಬಳಿಕ ಅವನ ಸಿನಿಮಾಗಳ ಮೇಲಷ್ಟೆ ನಾನು ಗಮನವಹಿಸಿದೆ. ಹಾಗಾಗಿ ಶಾರುಖ್ ಖಾನ್ ಜೊತೆ ಕೆಲಸ ಮಾಡಲಿಲ್ಲ. ಹೃತಿಕ್ ಚಿತ್ರರಂಗಕ್ಕೆ ಬರದೇ ಇದ್ದಿದ್ದರೆ ಈಗಲೂ ನಾನು ಶಾರುಖ್ ಜೊತೆ ಕೆಲಸ ಮಾಡುತ್ತಿರುತ್ತಿದ್ದೆ' ಎಂದಿದ್ದಾರೆ ರಾಕೇಶ್ ರೋಷನ್.

  ನಮ್ಮಿಬ್ಬರ ಕುಟುಂಬದ ನಡುವೆ ಒಳ್ಳೆಯ ಆತ್ಮೀಯತೆ ಇದೆ: ರಾಕೇಶ್

  ನಮ್ಮಿಬ್ಬರ ಕುಟುಂಬದ ನಡುವೆ ಒಳ್ಳೆಯ ಆತ್ಮೀಯತೆ ಇದೆ: ರಾಕೇಶ್

  'ನಾನು ಹಾಗೂ ಶಾರುಖ್ ಖಾನ್ ಈಗ ಹೆಚ್ಚು ಭೇಟಿಯಾಗುತ್ತಿಲ್ಲ ಆದರೆ ನಮ್ಮಿಬ್ಬರ ಕುಟುಂಬಗಳ ನಡುವೆ ಬಹಳ ಒಳ್ಳೆ ಬಾಂಧವ್ಯ ಇದೆ. ಶಾರುಖ್ ಪತ್ನಿ ಗೌರಿ ಖಾನ್ ಅದ್ಭುತವಾದ ವ್ಯಕ್ತಿ. ಶಾರುಖ್ ಹಾಗೂ ಹೃತಿಕ್ ಸಹ ಪರಸ್ಪರ ಒಳ್ಳೆಯ ಗೆಳೆಯರು' ಎಂದಿದ್ದಾರೆ ರಾಕೇಶ್ ರೋಷನ್. ಶಾರುಖ್ ಪತ್ನಿ ಹಾಗೂ ಹೃತಿಕ್ ಪತ್ನಿ ಸೂಸನ್ ಒಳ್ಳೆಯ ಗೆಳತಿಯರು ಹಾಗೂ ಬ್ಯುಸಿನೆಸ್ ಪಾರ್ಟನರ್‌ಗಳು ಸಹ.

  ಅವರ ಪ್ರತಿಭೆ ಗುರುತಿಸಿದ್ದು ನನಗೆ ಹೆಮ್ಮೆ: ರಾಕೇಶ್

  ಅವರ ಪ್ರತಿಭೆ ಗುರುತಿಸಿದ್ದು ನನಗೆ ಹೆಮ್ಮೆ: ರಾಕೇಶ್

  'ಶಾರುಖ್ ಖಾನ್ ಒಬ್ಬ ಅತ್ಯದ್ಭುತ ನಟ. ಅವರೊಳಗಿನ ಪ್ರತಿಭೆಯನ್ನು ಗುರುತಿಸಲಿಕ್ಕೆ ಸಾಧ್ಯವಾದುದಕ್ಕೆ ನನಗೆ ಹೆಮ್ಮೆ ಇದೆ. ನಾನು ಮೊದಲ ಬಾರಿಗೆ ಶಾರುಖ್ ಜೊತೆ 'ಕಿಂಗ್ ಅಂಕಲ್' ಸಿನಿಮಾ ಮಾಡಿದಾಗಲೇ ಅವರೊಬ್ಬ ದೊಡ್ಡ ನಟ ಆಗುತ್ತಾರೆ ಎಂದೆನಿಸಿತ್ತು' ಎಂದಿದ್ದಾರೆ ರಾಕೇಶ್ ರೋಷನ್.

  ಪ್ರಭಾಸ್ ಗೆ ಪೌರಾಣಿಕ ಕಥೆ ರೆಡಿ ಮಾಡ್ತಿದ್ದಾರೆ ಪ್ರಶಾಂತ್ ನೀಲ್ | Filmibeat Kannada
  ಶಾರುಖ್ ನಟನೆಯ ಯಾವ ಸಿನಿಮಾ ಇಷ್ಟ?

  ಶಾರುಖ್ ನಟನೆಯ ಯಾವ ಸಿನಿಮಾ ಇಷ್ಟ?

  ಶಾರುಖ್‌ ಖಾನ್ ನಟಿಸಿರುವ ಹಲವು ಸಿನಿಮಾಗಳು ಬಹಳ ಚೆನ್ನಾಗಿವೆ ಆದರೆ ನನಗೆ ಬಹಳ ಇಷ್ಟವಾದುದು 'ಡರ್' ಸಿನಿಮಾ. ಆ ಸಿನಿಮಾದಲ್ಲಿ ಶಾರುಖ್ ಖಾನ್ ವಿಲನ್ ಪಾತ್ರ ಮಾಡಿದ್ದರೂ ಜನರನ್ನು ಸೆಳೆಯಲು ಯಶಸ್ವಿಯಾದರು. ತಮ್ಮ ನಟನೆಯಿಂದ ಆ ಸಿನಿಮಾಕ್ಕೆ ಹೀರೋ ಆದರು. ಅವರೊಬ್ಬ ಅತ್ಯದ್ಭುತ ನಟ ಎಂದಿದ್ದಾರೆ ರಾಕೇಶ್ ರೋಷನ್.

  English summary
  Producer, director Rakesh Roshan said he quit working with Sharukh Khan because of his son Hrithik Roshan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X