ಸುದ್ದಿಗೋಷ್ಠಿ ಮಾಡಿ ಎಲ್ಲವನ್ನೂ ಹೇಳುತ್ತೇನೆ; ರಾಖಿ ಸಾವಂತ್ ಮೇಲೆ ಮಾಜಿ ಪತಿ ಆದಿಲ್ ಖಾನ್ ಕಿಡಿ
ನಟಿ ರಾಖಿ ಸಾವಂತ್ ಅವರ ಮಾಜಿ ಪತಿ ಆದಿಲ್ ಖಾನ್ ದುರಾನಿ ಅವರು ಭಾನುವಾರ ಮುಂಬೈನಲ್ಲಿ ಮಾಧ್ಯಮಗಳ ಕ್ಯಾಮೆರಾ ಕಣ್ಣಿಗೆ ಸಿಕ್ಕಿದ್ದಾರೆ. ಈ ವೇಳೆ ನನಗೆ ಅನ್ಯಾಯವಾಗಿದೆ. ನನ್ನನ್ನು ರಾಖಿ ಮತ್ತು ಅವರ ಕಡೆಯವರು ಸಿಲುಕಿಸಿದ್ದಾರೆ ಎಂದು ಆದಿಲ್ ಮಾಧ್ಯಮಗಳ ಮುಂದೆ ಆರೋಪಿಸಿದ್ದಾರೆ.
ಆದಿಲ್ ಖಾನ್ ದುರಾನಿ ಹೇಳಿದ್ದೇನು?
ಮಾಧ್ಯಮಗಳು ವರದಿ ಮಾಡಿರುವಂತೆ ಕೆಲವು ವರದಿಗಾರರು ಮುಂಬೈನಲ್ಲಿ ಆದಿಲ್ ಖಾನ್ ದುರಾನಿ ಅವರನ್ನು ನೋಡಿದ್ದಾರೆ. ತಮ್ಮ ವಿರುದ್ಧದ ಆರೋಪಗಳಿಗೆ ಪ್ರತಿಕ್ರಿಯಿಸಲು ಅವರನ್ನು ಕೇಳಿದಾಗ, ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, "ನನಗೆ ಅನ್ಯಾಯವಾಗಿದೆ. ನನ್ನ ಸೈಡ್‌ನ ಕಥೆಯನ್ನು ನಾನು ಹಂಚಿಕೊಳ್ಳುತ್ತೇನೆ. ರಾಖಿ ಮತ್ತು ಅವಳ ಕೆಲವು ಪರಿಚಿತರು ನನ್ನನ್ನು ಹೇಗೆ ಸಿಲುಕಿಸಿದ್ದಾರೆ. ನಾನು ಎಲ್ಲವನ್ನೂ ಹೇಳುತ್ತೇನೆ ... ನಾನು ಕೆಲವೇ ದಿನಗಳಲ್ಲಿ ಸುದ್ದಿಗೋಷ್ಠಿಯನ್ನು ಮಾಡುತ್ತೇನೆ.. ನಾನು ಕೋಟ್ಯಾಂತರ ರೂಪಾಯಿಗಳನ್ನು ಪಾವತಿಸಬೇಕೋ ಅಥವಾ ನಾನು ಅವುಗಳನ್ನು ಪಡೆಯಬೇಕೋ ಎಂಬುದು ತಿಳಿಯಲಿದೆ"? ಎಂದು ಹೇಳಿದ್ದಾರೆ.

ರಾಖಿಯನ್ನು ಮತ್ತೆ ಭೇಟಿಯಾಗುತ್ತಾರಾ ಆದಿಲ್?
ತನ್ನ ಮಾಜಿ ಪತ್ನಿ ರಾಖಿ ಸಾವಂತ್ ಅವರನ್ನು ಮತ್ತೆ ಭೇಟಿಯಾಗುತ್ತೀರಾ ಎಂದು ಮಾಧ್ಯಮದವರು ಕೇಳಿರುವ ಪ್ರಶ್ನೆಗೆ ಉತ್ತರಿಸಿರುವ ಅವರು, ನಾನು ಅವರಂತೆ ಮಾಧ್ಯಮಗಳಿಗೆ ಅಲ್ಲಿ ಮತ್ತು ಇಲ್ಲಿ ಎಲ್ಲಾ ವಿಷಯಗಳನ್ನು ಹೇಳುವುದಿಲ್ಲ. ಸುದ್ದಿಗೋಷ್ಠಿಯಲ್ಲಿ ತಮ್ಮ ವಿಚಾರವನ್ನು ಸರಿಯಾಗಿ ಹೇಳುತ್ತೇನೆ ಎಂದಿದ್ದಾರೆ.
ಕೆಲವು ತಿಂಗಳ ಹಿಂದೆ, ತನ್ನ ಮಾಜಿ ಪತಿ ಆದಿಲ್ ಜೀವನದಲ್ಲಿ ಇನ್ನೊಬ್ಬ ಮಹಿಳೆ ಇದ್ದಾರೆ ಎಂದು ರಾಖಿ ಸಾವಂತ್ ಆರೋಪಿಸಿದ್ದರು. "ನಾನು ನಮ್ಮ ವೈಯಕ್ತಿಕ ವಿಚಾರಗಳನ್ನು ಸಾರ್ವಜನಿಕವಾಗಿ ಪ್ರಸ್ತಾಪಿಸಬಾರದು ಎಂದು ಆದಿಲ್ ಹೇಳುತ್ತಾರೆ. ಆದರೆ ನಾನು ಸುಮ್ಮನೆ ಎಲ್ಲವನ್ನು ಸಹಿಸುವುದಿಲ್ಲ ಅಥವಾ ಎಲ್ಲವನ್ನೂ ಖಾಸಗಿಯಾಗಿ ಇಟ್ಟುಕೊಂಡು ಫ್ರಿಜ್‌ನಲ್ಲಿ ಕೊನೆಗೊಳ್ಳುವುದಿಲ್ಲ" ಎಂದು ಚಾಟಿ ಬೀಸಿದ್ದರು.
ಬಳಿಕ ಆದಿಲ್ ಖಾನ್ ಮೇಲೆ, ಹಲ್ಲೆ, ತನಗೆ ತಿಳಿಯದಂತೆ ತನ್ನ ಫ್ಲಾಟ್‌ನಿಂದ ಹಣ ಮತ್ತು ಚಿನ್ನಾಭರಣ ಕಳ್ಳತನ, ಅಸ್ವಾಭಾವಿಕ ಲೈಂಗಿಕ ಕ್ರಿಯೆ ಮತ್ತು ವರದಕ್ಷಿಣೆ ಕಿರುಕುಳ ಸೇರಿದಂತೆ ಇತರ ಆರೋಪಗಳನ್ನು ಮಾಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಆದಿಲ್‌ನನ್ನು ವಿಚಾರಣೆಗಾಗಿ ಮುಂಬೈನ ಉಪನಗರದ ಓಶಿವಾರಾ ಪೊಲೀಸ್ ಠಾಣೆಗೆ ಕರೆತಂದು ನಂತರ ಬಂಧಿಸಿದ್ದರು.

2022 ರ ಜನವರಿಯಲ್ಲಿ ರಾಖಿ ಸಾವಂತ್ ಆದಿಲ್‌ನೊಂದಿಗೆ ಹೇಗೆ ಸಂಪರ್ಕದಲ್ಲಿದ್ದರು ಮತ್ತು ಇಬ್ಬರೂ ಜಂಟಿ ವ್ಯವಹಾರ ಖಾತೆಯನ್ನು ತೆರೆದರು ಎಂಬುದನ್ನು ಪೊಲೀಸ್ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ. ಆಕೆಗೆ ತಿಳಿಯದೆ ಕಾರು ಖರೀದಿಸುವುದಾಗಿ ಜೂನ್‌ನಲ್ಲಿ ಖಾತೆಯಿಂದ 1.5 ಕೋಟಿ ರೂಪಾಯಿಗೂ ಹೆಚ್ಚು ಹಣ ಡ್ರಾ ಮಾಡಿದರೂ ಆಕೆ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ಏಕೆಂದರೆ ಆದಿಲ್ ಮದುವೆಯಾಗುವುದಾಗಿ ಭರವಸೆ ನೀಡಿದ್ದರು ಎನ್ನಲಾಗಿದೆ.
ಆದಿಲ್ ಖಾನ್ ಅವರು ನಟಿ ರಾಖಿ ಅವರ ಮೇಲೆ ಎರಡು ಸಂದರ್ಭಗಳಲ್ಲಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಆಕೆಯ ಮುಖದ ಮೇಲೆ ಆಸಿಡ್ ಎರಚುವುದಾಗಿ ಅಥವಾ ರಸ್ತೆ ಅಪಘಾತದಲ್ಲಿ ಆಕೆಯನ್ನು ಸಾಯಿಸುವುದಾಗಿ ಆದಿಲ್ ಬೆದರಿಕೆ ಹಾಕಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ. ರಾಖಿ ಸಾವಂತ್ ಮತ್ತು ಆದಿಲ್ ಖಾನ್ ದುರಾನಿ ಕಳೆದ ವರ್ಷ ಜುಲೈನಲ್ಲಿ ವಿವಾಹವಾಗಿದ್ದರು.


Click it and Unblock the Notifications











