ತನುಶ್ರೀ ದತ್ತಾ ವಿರುದ್ಧ ಕೇವಲ 25 ಪೈಸೆ ಮಾನನಷ್ಟ ಹೂಡಿದ ಖ್ಯಾತ ನಟಿ
ಬಾಲಿವುಡ್ ಮೀಟೂ ವಿವಾದ ಸದ್ದು ಮಾಡುತ್ತಿದ್ದ ವೇಳೆ ಶೀಟೂ ಆರೋಪ ಮಾಡಿದ್ದ ರಾಖಿ ಸಾವಂತ್ ಈಗ ಮತ್ತೊಂದು ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ.
ತನುಶ್ರೀ ದತ್ತಾ ವಿರುದ್ಧ ಮಾತನಾಡಿದ್ದಕ್ಕೆ ತನುಶ್ರೀ ಪರ ವಕೀಲರು 10 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ರಾಖಿ ಸಾವಂತ್ ಈಗ ತನುಶ್ರೀ ದತ್ತಾ ವಿರುದ್ಧ ಕೇವಲ 25 ಪೈಸೆ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ.
ಬುಧವಾರ ಈ ವಿಷ್ಯವನ್ನ ರಾಖಿ ಬಹಿರಂಗಪಡಿಸಿದ್ದಾರೆ. ಬರಿ 25 ಪೈಸೆ ಮಾನನಷ್ಟ ಹೂಡಿರುವ ಬಗ್ಗೆ ಮಾತನಾಡಿದ ರಾಖಿ ''ತನುಶ್ರೀ ಅವರ ಪೋಷಕರಿಗೆ ಯಾವುದೇ ರೀತಿಯ ತೊಂದರೆಯಾಗಬಾರದು'' ಎಂಬ ಕಾರಣ ನೀಡಿದ್ದಾರೆ.

ಇನ್ನು ತನುಶ್ರೀ ಅವರು ಹೂಡಿರುವ 10 ಕೋಟಿ ಮಾನನಷ್ಟ ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡಿದ ರಾಖಿ, ಅದಕ್ಕೆ ಸಂಬಂಧಿಸಿದ ಯಾವುದೇ ನೋಟೀಸ್ ನನಗೆ ಸಿಕ್ಕಿಲ್ಲ ಎಂದಿದ್ದಾರೆ.
ಘಟನೆಯ ಹಿನ್ನೆಲೆ
ತನುಶ್ರೀ ದತ್ತಾ ಅವರು ಅಲೋಕ್ ನಾಥ್, ಅನು ಮಲಿಕ್ ಅವರ ಮೇಲೆ ಮೀಟೂ ಆರೋಪ ಮಾಡಿದ್ದರು. ಅದಕ್ಕೆ ವಿರೋಧಿಸಿದ್ದ ರಾಖಿ, ತನುಶ್ರೀ ದತ್ತಾ ಮೇಲೆ ಅತ್ಯಾಚಾರ ಆರೋಪ ಮಾಡಿದ್ದರು. ನಂತರ ರಾಖಿ ವಿರುದ್ಧ ತನುಶ್ರೀ ಕಿಡಿಕಾರಿದ್ದರು.


Click it and Unblock the Notifications











