Rakhi Sawant: ಜಿಮ್ ಡ್ರೆಸ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿದ ರಾಖಿ ಸಾವಂತ್: ಬುರ್ಖಾ ಎಲ್ಲಿ ಹೋಯಿತು ಎಂದ ನೆಟ್ಟಿಗರು!
ಮಾಜಿ ಪತಿ ಆದಿಲ್ ಖಾನ್ ದುರಾನಿಯಿಂದ ದೂರವಾಗಿರುವ ಬಾಲಿವುಡ್ ನಟಿ ರಾಖಿ ಸಾವಂತ್ ಮೆಕ್ಕಾಗೆ ಹೋಗಿ ಬಂದು ಬುರ್ಖಾದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಇನ್ನು ಮುಂದೆ ತಾವು ಹೀಗೆಯೇ ಇರುವುದಾಗಿಯೂ ಹೇಳಿಕೊಂಡಿದ್ದರು. ಈಗ ಮತ್ತೆ ಹೊಸ ವರಸೆ ತೋರಿಸಿರುವ ಅವರು, ಟ್ರೋಲ್‌ಗೆ ಒಳಗಾಗುತ್ತಿದ್ದಾರೆ.
ವಿವಾದಗಳ ರಾಣಿ ರಾಖಿ ಸಾವಂತ್ ಮತ್ತೊಮ್ಮೆ ಟ್ರೋಲ್‌ಗೆ ಒಳಗಾಗಿದ್ದಾರೆ. ಅದು ಕೂಡ ತನ್ನ ಜಿಮ್ ಡ್ರೆಸ್‌ನಿಂದ. ನಿಜ ತಮ್ಮ ಓವರ್ ಆಕ್ಟಿಂಗ್ ಮತ್ತು ಬಾಯಿಗೆ ಬಂದಂತೆ ಮಾತನಾಡುವ ರಾಖಿ ಸಾವಂತ್ ಆಗಾಗ್ಗೆ ಆನ್‌ಲೈನ್ ಟ್ರೋಲಿಂಗ್‌ಗೆ ಒಳಗಾಗಿದ್ದಾರೆ. ಈಗ ಮತ್ತೆ ಅವರ ಇತ್ತೀಚಿನ ಜಿಮ್ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಮೆಕ್ಕಾಗೆ ಭೇಟಿ ನೀಡಿದ್ದ ರಾಖಿ ಸಾವಂತ್
ರಾಖಿ ಸಾವಂತ್ ಇತ್ತೀಚೆಗೆ ಮೆಕ್ಕಾಗೆ ಭೇಟಿ ನೀಡಿದರು. ಅಲ್ಲಿಂದ ಬಂದು ತಾವು ಹೆಚ್ಚು ಸಂಪ್ರದಾಯವಾದಿ ಎಂಬಂತೆ ಬಿಂಬಿಸಿಕೊಂಡಿದ್ದರು. ಬುರ್ಖಾ ಧರಿಸಿ ಮಾಧ್ಯಮದವರಿಗೆ ತನ್ನನ್ನು ಫಾತಿಮಾ ಎಂದು ಕರೆಯುವಂತೆ ವಿನಂತಿಸಿದ್ದರು. ತನ್ನ ಹತ್ತಿರಕ್ಕೆ ಗಂಡಸರು ಬರಬೇಡಿ ಎಂದು ಹೇಳಿದ್ದರು. ಆದರೆ, ಈಗ ಮತ್ತೆ ತಮ್ಮ ಹಳೆಯ ಚಾಳಿ ಮುಂದುವರೆಸಿದ್ದಾರೆ.
ರಾಖಿ ಸಾವಂತ್ ಗ್ರೇ ಕಲರ್ ಜಿಮ್ ಬಟ್ಟೆ ಧರಿಸಿ ಒಂದು ವಿಡಿಯೋವನ್ನು Instagramನಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ರಾಖಿ ಡ್ಯಾನ್ಸ್ ಮಾಡುತ್ತಾ, ದ್ರೋಹ ಮಾಡುವವರನ್ನು ದೂರವಿಡಿ, ಹತ್ತಿರ ಇರುವವರನ್ನು ಹತ್ತಿರಕ್ಕೆ ಇಟ್ಟುಕೊಳ್ಳಿ ಎಂದು ಹೇಳುವ ಬಲರಾಜ್ ಸಿಂಗ್ ಅವ ಲೈನ್ಸ್ ಇವೆ.
ರಾಖಿಯ ಸಾವಂತ್ ಅವರ ಈ ವಿಡಿಯೋದಲ್ಲಿ ತನ್ನ ವಿಚ್ಛೇದಿತ ಪತಿ ಆದಿಲ್ ಖಾನ್ ದುರಾನಿ, ಮಾಜಿ ಆತ್ಮೀಯ ಸ್ನೇಹಿತ ರಾಜಶ್ರೀ ಮೋರ್ ಮತ್ತು ನಟಿ ಶೆರ್ಲಿನ್ ಚೋಪ್ರಾ ಅವರಿಗೆ ಟಕ್ಕರ್ ನೀಡಿರುವಂತಿದೆ. ಈ ಮೂವರ ವಿರುದ್ಧ ಕಾನೂನು ಹೋರಾಟಗಳು ಮತ್ತು ಜಗಳಗಳಿ ನಡೆಯುತ್ತಲೇ ಇದೆ.

ರಾಖಿ ಸಾವಂತ್ ವಿಡಿಯೋಗೆ ನೆಟಿಜನ್‌ಗಳು ಪ್ರತಿಕ್ರಿಯೆ
ರಾಖಿ ಸಾವಂತ್ ಅವರ ವಿಡಿಯೋಗೆ ಭಾರಿ ಕಾಮೆಂಟ್‌ಗಳು ಬಂದಿದ್ದು, ಎಲ್ಲರೂ ಅವರ ಬುರ್ಖಾ ಎಲ್ಲಿ ಹೋಯಿತು ಎಂದು ಪ್ರಶ್ನಿಸುತ್ತಿದ್ದಾರೆ. ಬುರ್ಖಾ ಬಿಟ್ಟು ಜಿಮ್ ಉಡುಪು ಧರಿಸಿರುವುದನ್ನು ನೋಡಿದ ನೆಟಿಜನ್‌ಗಳಲ್ಲಿ ಒಬ್ಬರು, 'ನೀವು ಯಾವತ್ತೂ ಸುಧಾರಿಸುವುದಿಲ್ಲ' ಎಂದಿದ್ದಾರೆ.
ಇನ್ನೊಬ್ಬ ಬಳಕೆದಾರರು "ನಿಮ್ಮ ಬುರ್ಖಾ ಎಲ್ಲಿ ಹೋಯಿತು ಅಕ್ಕಾ? (ಆಪ್ಕಾ ಬುರ್ಖಾ ಕಹಾ ಗಯಾ ದೀದಿ)" ಎಂದು ಕೇಳಿದ್ದಾರೆ. ಇದರ ಜೊತೆಗೆ ಮತ್ತೊಬ್ಬರು "ಯಾಕೆ ಹಿಂಗೆ ಇನ್ನೋಬ್ಬರಿಗೆ ಆಡಿಕೊಳ್ಳುವ ವಸ್ತುವಾಗುತ್ತಿಯಾ?" ಎಂದು ಪ್ರಶ್ನಿಸಿದ್ದಾರೆ. ಇನ್ನು, ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ತಮ್ಮ ಮಾಜಿ ಪತಿ ಆದಿಲ್ ಖಾನ್ ದುರಾನಿಗಾಗಿ ಹಾಡನ್ನು ಹಾಡಿದ್ದರು. ಸದ್ಯ ನಟಿ ರಾಖಿ ಸಾವಂತ್, ಮಿಕಾ ಸಿಂಗ್ ಅವರೊಂದಿಗೆ ಮ್ಯೂಸಿಕ್ ವಿಡಿಯೋವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಅವರೇ ಮಾಹಿತಿ ನೀಡಿದ್ದರು.


Click it and Unblock the Notifications











