ಗಂಡನ ಪರಿಚಯ ಮಾಡುವ ಮುನ್ನ ಜಗತ್ತಿಗೆ ಮಗಳನ್ನು ತೋರಿಸಿದ ರಾಖಿ ಸಾವಂತ್.!
ಡ್ರಾಮಾ ಕ್ವೀನ್, ವಿವಾದಾತ್ಮಕ ನಟಿ, ಬಾಯ್ಬಡುಕಿ ಅಂತಲೇ ಫೇಮಸ್ ಆಗಿರುವ ನಟಿ ರಾಖಿ ಸಾವಂತ್. ಸದಾ ಸುದ್ದಿಯಲ್ಲಿ ಇರಲು ರಾಖಿ ಸಾವಂತ್ ಮಾಡುವ ಸರ್ಕಸ್ ಗಳು ಒಂದೆರಡಲ್ಲ ಬಿಡಿ.
ಯಾವುದೇ ವಿವಾದ ಆದರೂ ಮೊದಲು ಮೂಗು ತೂರಿಸುತ್ತಿದ್ದ ರಾಖಿ ಸಾವಂತ್ ಇದೀಗ ಮದುವೆ, ಮನೆ ಮತ್ತು ಮಕ್ಕಳ ಬಗ್ಗೆ ಹೆಚ್ಚು ಸೌಂಡ್ ಮಾಡುತ್ತಿದ್ದಾರೆ. ಬಾಲಿವುಡ್ ನಲ್ಲಿ ಮದುವೆ ಸೀಸನ್ ಜೋರಾಗಿದ್ದಾಗ, ''ನಂದೂ ಮದುವೆ ಆಗಿದೆ'' ಅಂತ ರಾಖಿ ಸಾವಂತ್ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದರು.
ತಾವು ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಬಗ್ಗೆ ರಾಖಿ ಸಾವಂತ್ ಮೂರು ತಿಂಗಳ ಹಿಂದೆಯಷ್ಟೇ ಬಹಿರಂಗ ಪಡಿಸಿದ್ದರು. ಅಷ್ಟು ಬಿಟ್ಟರೆ ವಿವಾಹ ಮಹೋತ್ಸವದ ಫೋಟೋಗಳು ಹಾಗೂ ಪತಿಯೊಂದಿಗೆ ಇರುವ ಫೋಟೋವನ್ನ ರಾಖಿ ಸಾವಂತ್ ಇಲ್ಲಿಯವರೆಗೂ ರಿವೀಲ್ ಮಾಡಿಲ್ಲ.
''ನನ್ನ ಪತಿಯ ಹೆಸರು ರಿತೇಶ್. ಅವರು ಯು.ಕೆನಲ್ಲಿದ್ದಾರೆ. ಸದ್ಯದಲ್ಲೇ ನಾನು ಕೂಡ ಯು.ಕೆ ಗೆ ಹಾರುತ್ತೇನೆ'' ಎಂದು ರಾಖಿ ಸಾವಂತ್ ಹೇಳಿ ಮೂರು ತಿಂಗಳು ಕಳೆದಿಲ್ಲ. ಅಷ್ಟು ಬೇಗ ತಮ್ಮ ಪುತ್ರಿಯನ್ನ ರಾಖಿ ಸಾವಂತ್ ಪರಿಚಯಿಸಿದ್ದಾರೆ. ಅದು ಇನ್ಸ್ಟಾಗ್ರಾಮ್ ನಲ್ಲಿ.!
ಇದೇನಿದು ಹೊಸ ಕಥೆ ಅಂತ ತಲೆ ಕೆರ್ಕೊಳ್ಳುವ ಮುನ್ನ ಪೂರಾ ಮ್ಯಾಟರ್ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ಇವಳೇನಾ ರಾಖಿ ಸಾವಂತ್ ಮಗಳು.?
''ಸ್ನೇಹಿತರೇ.. ಈಕೆ ನನ್ನ ಪುತ್ರಿ. ಇವಳ ಮೇಲೆ ನಿಮ್ಮ ಆಶೀರ್ವಾದ ಇರಲಿ'' ಎಂದು ಕ್ಯಾಪ್ಷನ್ ಕೊಟ್ಟು ಮಗಳ ವಿಡಿಯೋನ ರಾಖಿ ಸಾವಂತ್ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋನ ನೋಡಿ ನೆಟ್ಟಿಗರಂತೂ ರಾಖಿ ಸಾವಂತ್ ಗೆ ಛೀಮಾರಿ ಹಾಕುತ್ತಿದ್ದಾರೆ. ಯಾಕಂದ್ರೆ, ಮಗುವಿನ ಆ ವಿಡಿಯೋದಲ್ಲಿ ರಾಖಿ ಸಾವಂತ್ ಬೇಬಿ ಫಿಲ್ಟರ್ ಬಳಸಿರುವ ಹಾಗಿದೆ.

ಛೀಮಾರಿ ಹಾಕುತ್ತಿರುವ ನೆಟ್ಟಿಗರು.!
ಬೇಬಿ ಫಿಲ್ಟರ್ ಬಳಸಿ ವಿಡಿಯೋ ಕ್ರಿಯೇಟ್ ಮಾಡಿ, ಇನ್ಸ್ಟಾಗ್ರಾಮ್ ನಲ್ಲಿ ಮಗಳು ಅಂತ ಹೇಳಿಕೊಂಡು ಫೂಲ್ ಮಾಡುತ್ತಿರುವ ರಾಖಿ ಸಾವಂತ್ ಗೆ ತಲೆಕೆಟ್ಟಿದೆ ಅಂತ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ರಾಖಿ ಸಾವಂತ್ ಗೆ ಮಾಡಲು ಬೇರೆ ಕೆಲಸ ಇಲ್ಲ. ಚಿತ್ರರಂಗದಿಂದ ಯಾವುದೇ ಅವಕಾಶಗಳು ಸಿಗುತ್ತಿಲ್ಲ. ಹೀಗಾಗಿ, ಸುದ್ದಿಯಲ್ಲಿ ಇರಲು ಹೀಗೆಲ್ಲಾ ಮಾಡುತ್ತಿದ್ದಾರೆ ಅನ್ನೋದು ನೆಟ್ಟಿಗರ ವಾದ.

ರಾಖಿ ಸಾವಂತ್ ಗೆ ಏನಾಗಿದೆ.?
ಒಮ್ಮೆ ಮದುವೆ ಆಗಿದೆ ಅಂತಾರೆ.. ಇನ್ನೊಮ್ಮೆ ವಿಚ್ಛೇದನ ನೀಡಿರುವೆ ಎನ್ನುತ್ತಾರೆ.. ಮತ್ತೊಮ್ಮೆ ಪತಿಯನ್ನ ನೋಡಲು ಯು.ಕೆಗೆ ಹೋಗುತ್ತೇನೆ ಅಂತ ಹೇಳುವ ರಾಖಿ ಸಾವಂತ್ ಇದೀಗ ಏಕಾಏಕಿ 'ಮಗಳು' ಅಂತ ಹೇಳಿಕೊಂಡು ಹೊಸ ಡ್ರಾಮಾ ಮಾಡುತ್ತಿದ್ದಾರೆ. ಒಟ್ನಲ್ಲಿ ಈ ರಾಖಿ ಸಾವಂತ್ ಗೆ ಏನಾಗಿದೆ ಅಂತಲೇ ಸಿನಿ ಪ್ರಿಯರಿಗೆ ಅರ್ಥ ಆಗುತ್ತಿಲ್ಲ.

ಐಟಂ ಗರ್ಲ್ ರಾಖಿ ಸಾವಂತ್
ವಿವಾದವನ್ನು ಪಕ್ಕಕ್ಕಿಟ್ಟರೆ ರಾಖಿ ಸಾವಂತ್ ಉತ್ತಮ ಡ್ಯಾನ್ಸರ್. ಕನ್ನಡದ 'ನನ್ನ ಸ್ಟೈಲು ಬೇರೆನೇ..' ಹಾಡು ಸೇರಿದಂತೆ ಹಿಂದಿ ಅನೇಕ ಐಟಂ ನಂಬರ್ ಗಳಲ್ಲಿ ರಾಖಿ ಸಾವಂತ್ ಸೊಂಟ ಬಳುಕಿಸಿದ್ದಾರೆ. ಹಾಗ್ನೋಡಿದ್ರೆ, ಬಾಲಿವುಡ್ ನಲ್ಲಿ ರಾಖಿ ಸಾವಂತ್ ಐಟಂ ಗರ್ಲ್ ಅಂತಲೇ ಫೇಮಸ್.


Click it and Unblock the Notifications











