For Quick Alerts
  ALLOW NOTIFICATIONS  
  For Daily Alerts

  ರೂಮ್ ಬಾಗಿಲು ಮುಚ್ಚಿ ಟ್ಯಾಲೆಂಟ್ ತೋರಿಸು ಎಂದಿದ್ದ ನಿರ್ದೇಶಕ: ರಾಖಿ ಸಾವಂತ್

  |

  ಸದಾ ಒಂದಲ್ಲಾ ಒಂದು ವಿವಾದಾತ್ಮಕ ಹೇಳಿಕೆ ಕೊಡುವುದರಲ್ಲಿ ನಟಿ ರಾಖಿ ಸಾವಂತ್ ಎತ್ತಿದ ಕೈ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೀಗ ತನ್ನ ಕಷ್ಟದ ದಿನಗಳ ಕುರಿತು ನಟಿ ರಾಖಿ ಸಾವಂತ್ ಮೆಲುಕು ಹಾಕಿದ್ದಾರೆ.

  ''ನನಗೆ ಮದುವೆ ಆಗಿದೆ. ನನ್ನ ಪತಿಯ ಹೆಸರು ರಿತೇಶ್. ನನ್ನ ಗಂಡ ವಿದೇಶದಲ್ಲಿ ಇದ್ದಾರೆ. ಸದ್ಯದಲ್ಲೇ ನಾನು ಫಾರಿನ್ ಗೆ ಹಾರುವೆ'' ಎಂದೆಲ್ಲ ಹೇಳಿಕೊಳ್ಳುತ್ತಿದ್ದ ರಾಖಿ ಸಾವಂತ್ ಇಲ್ಲಿಯವರೆಗೂ ಮದುವೆಯ ಭಾವಚಿತ್ರವನ್ನಾಗಲಿ ಅಥವಾ ಪತಿಯ ಫೋಟೋವನ್ನಾಗಲಿ ರಿವೀಲ್ ಮಾಡಿಲ್ಲ.

  ಈ ಟಾಪಿಕ್ ನ ಇದೀಗ ಪಕ್ಕಕ್ಕೆ ಸರಿಸಿರುವ ರಾಖಿ ಸಾವಂತ್, ಕಾಸ್ಟಿಂಗ್ ಕೌಚ್ ಬಗ್ಗೆ ಗಂಭೀರ ಹೇಳಿಕೆ ನೀಡಿದ್ದಾರೆ. ಚಿತ್ರರಂಗಕ್ಕೆ ಕಾಲಿಡುವ ಸಮಯದಲ್ಲಿ ಎದುರಾದ ಕಾಸ್ಟಿಂಗ್ ಕೌಚ್ ಅನುಭವವನ್ನು ರಾಖಿ ಸಾವಂತ್ ಹೊರಹಾಕಿದ್ದಾರೆ. ಮುಂದೆ ಓದಿರಿ...

  ಕಾಸ್ಟಿಂಗ್ ಕೌಚ್ ಬಗ್ಗೆ ರಾಖಿ ಸಾವಂತ್ ಮಾತು

  ಕಾಸ್ಟಿಂಗ್ ಕೌಚ್ ಬಗ್ಗೆ ರಾಖಿ ಸಾವಂತ್ ಮಾತು

  ''ನನ್ನ ನಿಜನಾಮ ನೀರೂ ಭೇದಾ. ಮನೆಯಿಂದ ನಾನು ಆಗಷ್ಟೇ ಆಚೆ ಕಾಲಿಟ್ಟಿದ್ದೆ. ಇಲ್ಲಿಯವರೆಗೂ ಎಲ್ಲವನ್ನೂ ನಾನು ಸ್ವಂತದಿಂದ ಸಂಪಾದಿಸಿದ್ದೇನೆ. ಪ್ರತಿ ಬಾರಿ ಆಡಿಷನ್ ಗೆ ಹೋದಾಗಲೂ ನನಗೆ ಕೆಟ್ಟ ಅನುಭವ ಆಗಿದೆ. ನಾನು ಚಿತ್ರರಂಗಕ್ಕೆ ಕಾಲಿಡುವ ಸಂದರ್ಭದಲ್ಲಿ ಕೆಟ್ಟ ಉದ್ದೇಶ ಇಟ್ಟುಕೊಂಡು ನಿರ್ಮಾಪಕರು ಮತ್ತು ನಿರ್ದೇಶಕರು ಆಡಿಷನ್ ಗೆ ಕರೆಯುತ್ತಿದ್ದರು'' ಎಂದು ಹೇಳಿದ್ದಾರೆ ರಾಖಿ ಸಾವಂತ್.

  MeToo ಆಯ್ತು ಈಗ SheToo: ರಾಖಿ ಸಾವಂತ್ ಸಿಡಿಸಿದ್ರು ಹೊಸ ಬಾಂಬ್MeToo ಆಯ್ತು ಈಗ SheToo: ರಾಖಿ ಸಾವಂತ್ ಸಿಡಿಸಿದ್ರು ಹೊಸ ಬಾಂಬ್

  ಟ್ಯಾಲೆಂಟ್ ತೋರಿಸು

  ಟ್ಯಾಲೆಂಟ್ ತೋರಿಸು

  ''ಆಡಿಷನ್ ಗೆ ಹೋದಾಗ ಟ್ಯಾಲೆಂಟ್ ತೋರಿಸು ಎಂದು ನಿರ್ಮಾಪಕರು ಮತ್ತು ನಿರ್ದೇಶಕರು ಕೇಳುತ್ತಿದ್ದರು. ಯಾವ ಟ್ಯಾಲೆಂಟ್ ಬಗ್ಗೆ ಅವರು ಮಾತನಾಡುತ್ತಿದ್ದಾರೆ ಅನ್ನೋದು ನನಗೆ ಅರ್ಥ ಆಗುತ್ತಿರಲಿಲ್ಲ. ಆಡಿಷನ್ ಗಾಗಿ ನಾನು ಫೋಟೋ ತೆಗೆದುಕೊಂಡು ಹೋಗುತ್ತಿದ್ದೆ. ಆಗ ನಿರ್ಮಾಪಕ ಮತ್ತು ನಿರ್ದೇಶಕರು ನನ್ನನ್ನ ಒಳಗೆ ಕರೆದು ಬಾಗಿಲು ಮುಚ್ಚುತ್ತಿದ್ದರು. ಹೇಗೋ ನಾನು ಅಲ್ಲಿಂದ ಹೊರಗೆ ಬರುತ್ತಿದ್ದೆ'' ಎಂದು ತಮಗಾದ ಕಾಸ್ಟಿಂಗ್ ಕೌಚ್ ಅನುಭವವನ್ನ ರಾಖಿ ಸಾವಂತ್ ಹೇಳಿಕೊಂಡಿದ್ದಾರೆ.

  ರಾಖಿ ಸಾವಂತ್ ಗೆ ಬೆದರಿಕೆ ಕರೆಗಳು ಬರ್ತಿವ್ಯಂತೆ.! ಯಾರು ಕಾರಣ.?ರಾಖಿ ಸಾವಂತ್ ಗೆ ಬೆದರಿಕೆ ಕರೆಗಳು ಬರ್ತಿವ್ಯಂತೆ.! ಯಾರು ಕಾರಣ.?

  ಬಡತನದಲ್ಲಿ ಬೆಳೆದ ರಾಖಿ ಸಾವಂತ್

  ಬಡತನದಲ್ಲಿ ಬೆಳೆದ ರಾಖಿ ಸಾವಂತ್

  ''ನನ್ನ ತಾಯಿ ಆಗ ಆಸ್ಪತ್ರೆಯಲ್ಲಿ ಇದ್ದರು. ಬಡತನವನ್ನು ನಾನು ನೋಡಿದ್ದೇನೆ. ಹೊತ್ತು ಊಟಕ್ಕೂ ನಾನು ಕಷ್ಟ ಪಟ್ಟಿದ್ದೇನೆ'' ಎಂದು ಸಂದರ್ಶನವೊಂದರಲ್ಲಿ ನಟಿ ರಾಖಿ ಸಾವಂತ್ ಹೇಳಿಕೊಂಡಿದ್ದಾರೆ.

  ವೇದಿಕೆಯಲ್ಲೇ ಬಾಲಿವುಡ್ ನಿರ್ದೇಶಕನಿಗೆ ಕಪಾಳಮೋಕ್ಷವೇದಿಕೆಯಲ್ಲೇ ಬಾಲಿವುಡ್ ನಿರ್ದೇಶಕನಿಗೆ ಕಪಾಳಮೋಕ್ಷ

  ಐಟಂ ಗರ್ಲ್ ರಾಖಿ

  ಐಟಂ ಗರ್ಲ್ ರಾಖಿ

  ನೃತ್ಯಗಾರ್ತಿ ಆಗಿರುವ ರಾಖಿ ಸಾವಂತ್ ಹಿಂದಿ, ಕನ್ನಡ, ತೆಲುಗು, ಮರಾಠಿಯ ಹಲವು ಸಿನಿಮಾಗಳಲ್ಲಿ ಐಟಂ ಗರ್ಲ್ ಆಗಿ ಸೊಂಟ ಬಳುಕಿಸಿದ್ದಾರೆ. 'ಬಿಗ್ ಬಾಸ್' ಕಾರ್ಯಕ್ರಮದ ಸ್ಪರ್ಧಿ ಕೂಡ ಆಗಿದ್ದ ರಾಖಿ ಸಾವಂತ್, ಕಿರುತೆರೆಯ ಹಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ.

  English summary
  Bollywood Actress Rakhi Sawant makes sensational comments on Casting Couch.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X