ಮೂರನೇ ಮದುವೆಗೆ ತಯಾರಾದ ಖ್ಯಾತ ನಾಯಕಿ, ಪಾಕಿಸ್ತಾನದ ಸುರಸುಂದರಾಂಗನಿಗೆ ಮನ ಸೋತ ಭಾರತದ ಚೆಲುವೆ..!

ವಿವಾದಗಳ ಹೊರತಾಗಿ ಬದುಕುವ ಹಂಬಲ ಇಲ್ಲದವರು ರಾಖಿ ಸಾವಂತ್. ಆದರೆ ಒಂದ್ಕಾಲದಲ್ಲಿ ತನ್ನ ಅಂದ ಚೆಂದ ರೂಪದಿಂದ ಎಲ್ಲರನ್ನು ಸೆಳೆದ ಸುಂದರಿ. ಪರದೇಸಿಯಾ ಯೇ ಸಚ್ ಹೈ ಪಿಯಾ ಎಂದು ಕುಣಿದಾಗ ಸುಪ್ತವಾಗಿದ್ದ ಪ್ರಜ್ಞೆಯೊಂದು ಹೆಡೆ ಬಿಚ್ಚಿತ್ತು. ಕಂಪ್ಯೂಟರ್ ಹ್ಯಾಂಗ್ ಆಗಿ ಶಟ್‌ಡೌನ್ ಆಗುವ ಹಂತಕ್ಕೆ ಬರುತ್ತಿತ್ತು.

ಆದರೆ ದುರಾದೃಷ್ಟ ಸಿಕ್ಕ ಈ ಜನಪ್ರಿಯತೆಯಿಂದ ರಾಖಿ ಸಾವಂತ್ ಮೈ ಮರೆತರು. ಬಾಲಿವುಡ್ ಪಾಲಿಗೆ ದಾರಿ ತಪ್ಪಿದ ಮಗಳಾದರು. ಇಲ್ಲಿಂದಾಚೆ ಕೇವಲ ರಂಪ ರಾಮಾಯಣದಿಂದ ಸದ್ದು ಮಾಡುತ್ತಾ ಬಂದ ರಾಖಿ ಸಾವಂತ್, ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಲೆಂದೇ ಅಭಿನಯಿಸಲು ಶುರು ಮಾಡಿದರು. ವಿವಾದಗಳ ಹೊರತಾಗಿ ಬದುಕುವ ಹಂಬಲ ಇಲ್ಲದವರು ಎನ್ನುವ ಠೀಕೆಗೆ ಕೂಡ ಗುರಿಯಾದರು.

Rakhi Sawant plans her third marriage revealing that the wedding will take place in Pakistan

ಆದರೂ ರಾಖಿ ಸಾವಂತ್ ಅವತ್ತು ಬದಲಾಗಲಿಲ್ಲ. ಇವತ್ತು ಕೂಡ ತಮ್ಮ ತಪ್ಪನ್ನು ತಿದ್ದಿಕೊಂಡು ಮುನ್ನಡೆಯುವ ಮನಸ್ಸು ಮಾಡಲಿಲ್ಲ. ಇದಕ್ಕೆ ಇನ್ನೊಂದು ಕೈಗನ್ನಡಿ ಎಂಬಂತೆ ರಾಖಿ ಸಾವಂತ್ ಈಗ ಮೂರನೇ ಬಾರಿ ಮದುವೆಯಾಗುವ ಮಾತುಗಳನ್ನಾಡಿದ್ದಾರೆ. ಆದರೆ ಈ ಬಾರಿ ಮದುವೆಯಾಗುತ್ತಿರುವ ಗಂಡ ಭಾರತದವನಲ್ಲ ಬದಲಿಗೆ ಪಾಕಿಸ್ತಾನದವನು ಎನ್ನುವುದೇ ಈ ಕ್ಷಣದ ಬ್ರೇಕಿಂಗ್ ನ್ಯೂಸ್.

ಹೌದು, ಟೈಮ್ಸ್ ಆಫ್ ಇಂಡಿಯಾಗೆ ಸಂದರ್ಶನವನ್ನು ನೀಡಿರುವ ರಾಖಿ ಸಾವಂತ್ ತಮ್ಮ ಮೂರನೇ ಮದುವೆಯ ಕುರಿತು ಮಾತನಾಡಿದ್ದಾರೆ. ಪಾಕಿಸ್ತಾನದಿಂದ ನನಗೆ ಮದುವೆ ಪ್ರಸ್ತಾವಗಳು ಬರುತ್ತಿವೆ ಎಂದಿರುವ ರಾಖಿ ಸಾವಂತ್, ನನ್ನ ಹಿಂದಿನ ಮದುವೆಗಳಿಂದ ನನಗಾದ ನೋವು, ನಾನು ಅನುಭವಿಸಿದ ನರಕಯಾತನೆ, ಎಲ್ಲವೂ ಪಾಕಿಸ್ತಾನದ ಪ್ರಜೆಗಳಿಗೆ ಗೊತ್ತು ಅವರು ಕೂಡ ಎಲ್ಲವನ್ನು ನೋಡಿದ್ದಾರೆ ಎಂದು ಹೇಳಿದ್ದಾರೆ.

ಮುಂದುವರೆದು ಈ ಬಾರಿ ಉತ್ತಮವಾದ ವ್ಯಕ್ತಿಯನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ ಎಂದಿರುವ ರಾಖಿ ಪಾಕಿಸ್ತಾನದ ಜನರನ್ನು ನಾನು ತುಂಬಾ ಇಷ್ಟ ಪಡುತ್ತೇನೆ ಅಲ್ಲಿ ನನಗೆ ತುಂಬಾ ಜನ ಅಭಿಮಾನಿಗಳಿದ್ದಾರೆ ಎಂದಿರುವ ರಾಖಿ ಈ ರೀತಿಯ ಮದುವೆಗಳಿಂದ ಎರಡು ದೇಶಗಳ ನಡುವೆ ಶಾಂತಿ ನೆಲಸುತ್ತೆ ಎಂದು ಹೇಳಿದ್ದಾರೆ. ಇನ್ನು ಪಾಕಿಸ್ತಾನದಲ್ಲಿ ನನ್ನ ಮದುವೆ ನಡೆಯಲಿದ್ದು ಭಾರತದಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ ಎಂದಿರುವ ರಾಖಿ ಸಾವಂತ್ ಸ್ವಿಜರ್ಲ್ಯಾಂಡ್ ಮತ್ತು ನೆದರ್‌ಲ್ಯಾಂಡ್‌ಗೆ ಹನಿಮೂನ್‌ಗೆ ನಾವು ಹೋಗಲಿದ್ದೇವೆ ಆ ನಂತರ ದುಬೈನಲ್ಲಿ ನಾವು ಖಾಯಂ ಆಗಿ ನೆಲಸಲಿದ್ದೇವೆ ಎಂದು ಹೇಳಿದ್ದಾರೆ.

ಇನ್ನು ತಾವು ಮದುವೆಯಾಗುತ್ತಿರುವ ಹುಡುಗನ ಹೆಸರು ದೋಡಿ ಖಾನ್ ಎಂದು ಹೇಳಿರುವ ರಾಖಿ ಸಾವಂತ್ ವೃತ್ತಿಯಲ್ಲಿ ಅವರು ಪೊಲೀಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಇದಲ್ಲದೇ ಪಾಕಿಸ್ತಾನದ ನಟ ಕೂಡ ಅವರು ಹೌದು ಎಂದು ಹೇಳಿದ್ದಾರೆ. ರಾಖಿ ಸಾವಂತ್ ಅವರು ಹೇಳಿರುವಂತೆ ಪಾಕಿಸ್ತಾನದ 'ದುರ್ಜ್', 'ಘಬ್ರಾನಾ ನಹೀ ಹೈ', 'ಆಖಾರ', 'ಚೌಧರಿ', ಹೀಗೆ ಕೆಲ ಚಿತ್ರಗಳಲ್ಲಿ ದೋದಿ ಖಾನ್ ಅಭಿನಯಿಸಿದ್ದಾರೆ. ಮಾಡೆಲ್ ಆಗಿ ಕೂಡ ಹೆಸರು ಮಾಡಿದ್ದಾರೆ.

ಇನ್ನುಳಿದಂತೆ ರಾಖಿ ಸಾವಂತ್ ಈ ಹಿಂದೆ 2022ರಲ್ಲಿ ರಿತೇಶ್ ರಾಜ್ ಸಿಂಗ್ ಜೊತೆ ಮದುವೆಯಾಗಿದ್ದರು. ಆದರೆ ಈ ಮದುವೆ ಅಷ್ಟೇ ಬೇಗ ಮುರಿದು ಬಿತ್ತು. ಆ ನಂತರ ಆದಿಲ್ ಖಾನ್ ದುರ್ರಾನಿ ಅವರನ್ನು ಮದುವೆಯಾದರು. ಆದರೆ ಮದುವೆಯಾದ ನಂತರ ತಮ್ಮ ಎರಡನೇ ಪತಿಯ ವಿರುದ್ದ ಗಂಭೀರ ಆರೋಪಗಳನ್ನು ಮಾಡಿದ ರಾಖಿ ಸಾವಂತ್ ಅವರನ್ನು ಜೈಲಿಗೆ ಕೂಡ ಕಳುಹಿಸಿದರು. ರಾಖಿ ಸಾವಂತ್ ಅವರನ್ನು ಮದುವೆಯಾದ ತಪ್ಪಿಗೆ ಆದಿಲ್ ಖಾನ್ ದುರ್ರಾನಿ ಆರು ತಿಂಗಳು ಜೈಲು ವಾಸ ಅನುಭವಿಸಿದರು.

ಅಂದ್ಹಾಗೇ ಪಾಕಿಸ್ತಾನದ ದೋದಿ ಖಾನ್ ಜೊತೆ ಮದುವೆಯಾಗುತ್ತಿರುವ ವಿಚಾರದ ಸತ್ಯಾಸತ್ಯತೆಯನ್ನು ತಿಳಿಯಲು ರಾಖಿ ಸಾವಂತ್ ಅವರಿಗೆ ಫಿಲ್ಮಿ ಬೀಟ್ ಹಿಂದಿ ತಂಡ ಸಂಪರ್ಕ ಮಾಡಿತ್ತು. ಈ ಸಮಯದಲ್ಲಿ ತಾವು ಪಾಕಿಸ್ತಾನದ ಸೊಸೆಯಾಗುತ್ತಿರುವ ವಿಚಾರವನ್ನು ರಾಖಿ ಸಾವಂತ್ ಖಚಿತ ಪಡಿಸಿದ್ದಾರೆ. ನನ್ನ ಬದುಕಿನಲ್ಲಿ ಮತ್ತೆ ಸಂಭ್ರಮದ ದಿನಗಳು ಮರಳಿ ಬರುತ್ತಿವೆ ಎಂದು ಹೇಳಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X